ಕೊಪ್ಪಳ/ ಯಲಬುರ್ಗಾ: ಪಟ್ಟಣದ ಶ್ರೀ ಏಳು ಕೋಟಿ ಮಲ್ಲಯ್ಯ ದೇವಸ್ಥಾನದಲ್ಲಿ ಜೂ.19 ರಂದು ರವಿವಾರ ಭಕ್ತರೆಲ್ಲರೂ ಸೇರಿ ಅಭಿಷೇಕ, ಪೂಜಾ ವಿಧಾನಗಳನ್ನು ಸಲ್ಲಿಸಿದ ಬಳಿಕ ಮಲ್ಲಯ್ಯ ದೇವಸ್ಥಾನದ ಮುಂಭಾಗದಲ್ಲಿರುವ ಶಿಭಾರಕಟ್ಟೆಗೆ ಅಭಿಷೇಕ ಮಾಡಿದ ನೀರು ಹಾಗೂ ತುಂಬಿದ ಕೊಡಗಳಿಂದ ನೀರು ಹಾಕುವ ಮೂಲಕ ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಿ ,ನಾಡಿನ ರೈತರಿಗೆ ಮಳೆ ಬೆಳೆ ಚೆನ್ನಾಗಿ ಲಭಿಸಲಿ, ಬರ ದೂರವಾಗಿ ,ಸಮೃದ್ದವಾಗಿ ಮಳೆ ಬಂದು ರೈತರ ಕಷ್ಟಗಳು ದೂರವಾಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಸಮಿತಿಯ ಮುಖಂಡರಾದ ಶಿವಕುಮಾರ ಭೂತೆ, ಶರಣಬಸಪ್ಪ ದಾನಕೈ ಹಾಗೂ ಅರ್ಚಕರಾದ ಚನ್ನಬಸವ ಅರಕೇರಿಮಠ, ಗೌರಮ್ಮ, ಭಕ್ತರಾದ ತಿಪ್ಪಣ್ಣ ಉಪ್ಪಾರ, ಮಲ್ಲಿಕಾರ್ಜುನ ಸಾದರಖಾನ, ಮಲ್ಲಪ್ಪ ಬನ್ನಿಕೊಪ್ಪ, ಬಸನಗೌಡ ಅಯ್ಯನಗೌಡ್ರ ಸೇರಿದಂತೆ ಇತರರು ಇದ್ದರು.
- ಕರುನಾಡ ಕಂದ ಸುದ್ದಿ




















