ಬಳ್ಳಾರಿ / ಕಂಪ್ಲಿ : ಪಟ್ಟಣದ ಐತಿಹಾಸಿನ ಸೋಮಪ್ಪ ದೇವಸ್ಥಾನ ಬಳಿಯ ಗದ್ದೆ ಚೌಡೇಶ್ವರಿ ದೇವಿ ದೇವಾಲಯ ಆವರಣದಲ್ಲಿ ಸಪ್ತಗಿರಿ ಪತ್ತಿನ ಸಹಕಾರ ಸಂಘದ 13ನೇ ವಾರ್ಷಿಕ ಮಹಾಜನ ಸಭೆ ಭಾನುವಾರ ನಡೆಯಿತು.
ಸಂಘದ ವಾರ್ಷಿಕ ಮಹಾಜನ ಸಭೆಯನ್ನು ಸಂಘದ ಅಧ್ಯಕ್ಷ ಡಾ.ವೆಂಕಟೇಶ ಸಿ.ಭರಮಕ್ಕನವರು ಉದ್ಘಾಟಿಸಿ ಮಾತನಾಡಿ, ಸಂಘವು 956ಸದಸ್ಯರನ್ನು ಹೊಂದಿದ್ದು, ಸುಮಾರು 27.24ಸಾವಿರ ರೂ.ಗಳ ಶೇರು ಬಂಡವಾಳ ಹೊಂದಿದೆ.
ಸುಮಾರು 2 ಕೋಟಿ 97 ಲಕ್ಷ 58ಸಾವಿರ ಠೇವಣಿ ಸಂಗ್ರಹಿಸಿದೆ. ವಾಹನ ಸಾಲ, ಅಡಮಾನ ಸಾಲ ಸೇರಿದಂತೆ ಸುಮಾರು 3 ಕೋಟಿ 29 ಲಕ್ಷ 53 ಸಾವಿರ ಸಾಲ ವಿತರಿಸಲಾಗಿದೆ.
ಸಂಘವು 2025-26ನೇ ಸಾಲಿನ ಸುಮಾರು 18 ಲಕ್ಷ ನಿವ್ವಳ ಲಾಭಗಳಿಸಿದೆ. ಸಹಕಾರ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು.
ನಂತರ ಮುಖ್ಯ ಕಾರ್ಯನಿರ್ವಾಹಕ ಎಸ್.ಎಂ.ನಾಗರಾಜ ವಾರ್ಷಿಕ ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಯು.ದೊಡ್ಡಬಸಪ್ಪ, ನಿರ್ದೇಶಕರಾದ ವಿ.ಗೋವಿಂದಪ್ಪ, ಎನ್.ಬಿ.ಮಂಜುನಾಥ, ಎನ್.ರಾಮಾಂಜಿನೇಯಲು, ಜಿ.ಪಕ್ಕೀರಪ್ಪ, ಕೆ.ಪಾರ್ವತಿ ಕೋಟಿ, ಬಿ.ನಾರಾಯಣಪ್ಪ, ಜೆ.ವೆಂಕಟೇಶ ಶ್ರೇಷ್ಠಿ, ಓ.ಪಿ.ದಾದಾಖಲಂದರ್, ಎನ್.ವಿರೇಶ, ಆನಂದ ಹೆಚ್.ಹುಲ್ಲೂರ್, ಜೆ.ಲಕ್ಷ್ಮೀದೇವಿ, ವಿ.ಅನೀಲ್ ಕುಮಾರ, ಆಕಾಶ ಭರಮಕ್ಕನವರು, ಸಿಬ್ಬಂದಿಗಳಾದ ಕನಕಪ್ಪ ಎನ್, ದಸ್ತಗಿರಿ, ಉಮಾ, ಹುಲಿಗೆಮ್ನ, ಕೆ.ರಾಘವೇಂದ್ರ, ಬಸವರಾಜ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















