ಕೊಟ್ಟೂರು -ಪಟ್ಟಣದ ಶ್ರೀ ಪಾಂಡುರಂಗ ರುಕ್ಮಿಣಿ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ವಿಜೃಂಭಣೆಯಿಂದ ನೆರವೇರಿತು.
ಮುಂಜಾನೆಯಿಂದ ಭಕ್ತಾದಿಗಳು ಬಂದು ಪಾಂಡುರಂಗ ಸ್ವಾಮಿಯ ದರ್ಶನವನ್ನು ಪಡೆದರು.
ನಂತರ ರಾತ್ರಿ 12 ಗಂಟೆಗೆ ತೊಟ್ಟಿಲು ತೂಗುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ನಂತರ ಭಾವಸಾರ ಕ್ಷತ್ರಿಯ ಸಮಾಜದ ಎಲ್ಲಾ ಮುಖಂಡರು ಭಜನೆ ಮಾಡಿ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರೆವೇರಿಸಿದರು.
ಈ ಸಂದರ್ಭದಲ್ಲಿ ಎಲ್ಲಾ ಮಹಿಳೆಯರು ಹಾಡು ಭಜನೆ ಮಾಡಿ ಭಕ್ತರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಪೀಸೇ.ಪ್ರಭುದೇವ. ಉಪಾಧ್ಯಕ್ಷರಾದ ಡೋಂಗ್ರೆ ವಿಜಯ್ ಕುಮಾರ್ ಕುಮಾರ್. ಕಾರ್ಯದರ್ಶಿಯಾದ ಲೋಕರೆ ವಾಸುದೇವ. ಹವಳೇ ಕೊಟ್ರೇಶ್, ಲೋಕರೆ ರಮೇಶ್ ಸುಲಕೆ ಸುರೇಶ್ ರಾವ್. ಇನ್ನು ಮುಂದಾದವರು ಭಾಗವಹಿಸಿದ್ದರು.
ವರದಿ:ಕೆ.ಗೋಣೆಪ್ಪ



















