ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸರಣಿ ಅಪಘಾತಗಳಿಗೆ ಬ್ರೇಕ್ ಹಾಕಲು ರಸ್ತೆಗಿಳಿದ ಕರವೇ ಸ್ವಾಭಿಮಾನಿ ಸೇನೆ: ಮೈಸೂರು-ಕುಶಾಲನಗರ ಮುಖ್ಯ ರಸ್ತೆಯಲ್ಲಿರುವ ಹಂಪ್‌ಗಳಿಗೆ ಸ್ವತಃ ಬಣ್ಣ ಬಳಿದ ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು

ಕುಶಾಲನಗರ :ರಾಜ್ಯ ಹೆದ್ದಾರಿಗಳಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ, ಹಂಪ್‌ಗಳಿಗೆ ವೇಗ ನಿಯಂತ್ರಕಗಳು ಬಣ್ಣ ಬಳಿಯದ ಕಾರಣ ಸರಣಿ ಅಪಘಾತಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಕೊಡಗು ಜಿಲ್ಲಾ ಘಟಕವು ಇಂದು ಜನಹಿತ ರಕ್ಷಣೆಗೆ ಮುಂದಾಗಿದೆ. ಸಾರ್ವಜನಿಕರಿಂದ ಸತತವಾಗಿ ಬರುತ್ತಿದ್ದ ಅಪಘಾತಗಳ ಸುದ್ದಿಗೆ ತಕ್ಷಣವೇ ಸ್ಪಂದಿಸಿದ ಕರವೇ ಸ್ವಾಭಿಮಾನಿ ಸೇನೆ ಸಂಘಟನೆಯ ಪದಾಧಿಕಾರಿಗಳು, ಸ್ವತಃ ರಸ್ತೆಗಿಳಿದು ಅಪಾಯಕಾರಿ ಹಂಪ್‌ಗಳಿಗೆ ಬಿಳಿ ಬಣ್ಣ ಬಳಿಯುವ ಮೂಲಕ ರಸ್ತೆ ಸುರಕ್ಷತೆಯ ಮಹತ್ತರ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ.

ಮೈಸೂರಿನಿಂದ ಕುಶಾಲನಗರಕ್ಕೆ ಬರುವ ಮುಖ್ಯ ರಾಜ್ಯ ಹೆದ್ದಾರಿಯಲ್ಲಿ, ಪ್ರಸಿದ್ಧ ಪ್ರವಾಸಿ ತಾಣವಾದ ಬೈಲಕುಪ್ಪೆಯ ಗೋಲ್ಡನ್ ಟೆಂಪಲ್‌ಗೆ ತಿರುಗುವ ರಸ್ತೆ ಪಕ್ಕದಲ್ಲಿರುವ ಹಂಪ್‌ಗಳಿಗೆ ಮೊದಲು ಬಿಳಿ ಬಣ್ಣವನ್ನು ಹಚ್ಚಲಾಯಿತು.
ಈ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಚಲಿಸುವುದರಿಂದ ಹಾಗೂ ಹಂಪ್‌ಗಳು ಕಾಣಿಸದೆ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿದ್ದವು.
ಕರವೇ ಸ್ವಾಭಿಮಾನಿ ಸೇನೆ ಪದಾಧಿಕಾರಿಗಳು ಇಲ್ಲಿ ಬಣ್ಣ ಬಳಿದಿದ್ದರಿಂದ, ಈಗ ದೂರದಿಂದಲೇ ವಾಹನ ಚಾಲಕರಿಗೆ ಹಂಪ್‌ಗಳು ಸ್ಪಷ್ಟವಾಗಿ ಗೋಚರಿಸುವಂತಾಗಿದ್ದು, ಸಾರ್ವಜನಿಕರಿಗೆ ಯಾವುದೇ ಅಪಾಯವಾಗದಂತೆ ಸುರಕ್ಷತೆ ಒದಗಿಸಲಾಗಿದೆ.

ರಸ್ತೆ ಸುರಕ್ಷತೆಯ ಈ ಅಭಿಯಾನವನ್ನು ಮುಂದುವರಿಸಿದ ಕರವೇ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಕುಶಾಲನಗರ ತಾಲೂಕಿನ ವಿವಿಧ ಪ್ರಮುಖ ರಸ್ತೆಗಳಲ್ಲಿದ್ದ ಒಟ್ಟು ಆರು ಹಂಪ್‌ಗಳಿಗೆ ಬಣ್ಣ ಬಳಿದಿದ್ದಾರೆ. ಅದರ ವಿವರ ಹೀಗಿದೆ:

  • ಗೋಲ್ಡನ್ ಟೆಂಪಲ್ ಹೋಗುವ ರಸ್ತೆ ಪಕ್ಕದ ಹೆದ್ದಾರಿ ಹಂಪ್‌ಗೆ ಬಣ್ಣ ಹಚ್ಚಿ ಸುರಕ್ಷತೆಗೆ ಆದ್ಯತೆ ನೀಡಲಾಯಿತು.
  • ಕುಶಾಲನಗರ ಹಳೆ ಮಾರ್ಕೆಟ್ ರಸ್ತೆ ಇಲ್ಲಿನ ಅತ್ಯಂತ ಬ್ಯುಸಿ ರಸ್ತೆಯಲ್ಲಿದ್ದ ಎರಡು ಹಂಪ್‌ಗಳಿಗೆ ಬಣ್ಣ ಬಳಿಯಲಾಯಿತು.
  • ಮುಖ್ಯ ರಸ್ತೆಯ ಐಬಿ ರಸ್ತೆ ವಾಹನ ಸಂಚಾರ ದಟ್ಟಣೆ ಇರುವ ಐಬಿ ರಸ್ತೆಯ ಎರಡು ಹಂಪ್‌ಗಳಿಗೆ ಬಿಳಿ ಬಣ್ಣ ಲೇಪಿಸಲಾಯಿತು.
  • ಸೋಮವಾರಪೇಟೆ ಮುಖ್ಯ ರಸ್ತೆ ಈ ವ್ಯಾಪ್ತಿಯ ಒಂದು ಪ್ರಮುಖ ಹಂಪ್‌ಗೆ ಬಣ್ಣ ಬಳಿದು ಸಾರ್ವಜನಿಕರ ಗಮನಕ್ಕೆ ಬರುವಂತೆ ಮಾಡಲಾಯಿತು.

ಭಾಗವಹಿಸಿದ ಪ್ರಮುಖ ಪದಾಧಿಕಾರಿಗಳು :

ರಸ್ತೆ ಸುರಕ್ಷತೆಯ ಈ ಮಹತ್ವದ ಕಾರ್ಯಾಚರಣೆಯ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದರು.
ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಜಿಲ್ಲಾ ಉಪಾಧ್ಯಕ್ಷರಾದ ರಾಜಶೇಖರ್ ಗೌಡ ಮತ್ತು ಜಿಲ್ಲಾ ಗೌರವಾಧ್ಯಕ್ಷರಾದ ಚಂದ್ರು ಮತ್ತು ಜಿಲ್ಲಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಜಯಶ್ರೀ ಮುರುಗೇಶ್ ಮತ್ತು ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷರಾದ ಫ್ರೆಡ್ಡಿ ಮತ್ತು ಕುಶಾಲನಗರ ತಾಲೂಕು ಅಧ್ಯಕ್ಷರಾದ ಕೆ.ಎಸ್. ಶಿವ ಮತ್ತು ಕುಶಾಲನಗರ ತಾಲೂಕು ಉಪಾಧ್ಯಕ್ಷರಾದ ನಾಸಿರ್ ಮತ್ತು ಕುಶಾಲನಗರ ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷರಾದ ಆರ್. ಚಂದ್ರು ಮತ್ತು ತಾಲೂಕು ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಮಣಿಕಂಠ ಮತ್ತು ಸಂಚಾಲಕರಾದ ವಿಪಿ ಚಂದ್ರಶೇಖರ್ ಮತ್ತು ಕೂಡಿಗೆ ವಲಯ ಅಧ್ಯಕ್ಷರಾದ ನಿಶಾ ಮತ್ತು ಸುಂಟಿಕೊಪ್ಪ ಹೋಬಳಿ ಯುವ ಘಟಕದ ಅಧ್ಯಕ್ಷರಾದ ಕ್ಲಿಫರ್ಡ್ ರೊಡ್ರಿಗಸ್ ಹಾಗೂ ಪ್ರಮುಖರಾದ ಅಂತೋಣಿ ಮತ್ತು ನಂಜಪ್ಪ ಮತ್ತು ವಿಲ್ಸನ್ ಮತ್ತು ಬಾಲಕೃಷ್ಣ ಮತ್ತು ಖಾಸಿಂ ಮತ್ತು ಜೈರುದ್ದೀನ್ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಿದ್ದರು.
ಸಂಬಂಧಪಟ್ಟ ಇಲಾಖೆಗಳು ಮಾಡಬೇಕಿದ್ದ ಕೆಲಸವನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಈ ಸಾಮಾಜಿಕ ಕಳಕಳಿಗೆ ಮತ್ತು ಸಮಯೋಚಿತ ಹೆಜ್ಜೆಗೆ ಸ್ಥಳೀಯ ಸಾರ್ವಜನಿಕರು ಹಾಗೂ ವಾಹನ ಚಾಲಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

ವರದಿ: ಪ್ರಿತುನ್ ಪೂವಣ್ಣ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

ಚಿಕ್ಕನಾಯಕನಹಳ್ಳಿ ಯಲ್ಲಿ ರೈತರನ್ನು ಒಕ್ಕಲೆಬ್ಬಿಸಿರುವುದರ ವಿರುದ್ಧ ಕರ್ನಾಟಕ ವಿಧಾನ ಸಭೆಯ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ, ಅಧ್ಯಕ್ಷರು ಹಾಗೂ ಕೊಳ್ಳೇಗಾಲ ಶಾಸಕರಾದ ಎ.ಆರ್ ಕೃಷ್ಣಮೂರ್ತಿ ರವರಿಗೆ ರೈತರಿಂದ ದೂರು.

ಚಿಕ್ಕನಾಯಕನಹಳ್ಳಿ ಯಲ್ಲಿ ರೈತರನ್ನು ಒಕ್ಕಲೆಬ್ಬಿಸಿರುವುದರ ವಿರುದ್ಧ ಕರ್ನಾಟಕ ವಿಧಾನ ಸಭೆಯ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ, ಅಧ್ಯಕ್ಷರು ಹಾಗೂ ಕೊಳ್ಳೇಗಾಲ ಶಾಸಕರು ಆದಂತಹ  ಎ.ಆರ್ ಕೃಷ್ಣಮೂರ್ತಿ ರವರಿಗೆ ರೈತರಿಂದ ದೂರು.

error: Content is protected !!