ಬೀದರ್/ ಬಸವಕಲ್ಯಾಣ: ವಿಶ್ವಹಿಂದೂ ಪರಿಷದ್, ಬಜರಂಗದಳ ಪ್ರಖಂಡದ ವತಿಯಿಂದ ನಗರದ ಶ್ರೀ ಸದ್ಗುರು ಸದಾನಂದ ಸ್ವಾಮಿಯ ಮಠದ ಆವರಣದಲ್ಲಿ ಭವ್ಯ ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನೋತ್ಸವ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯ ವಹಿಸಿದ ಪರಮಪೂಜ್ಯ ಷ.ಬ್ರ. ಡಾ. ಚನ್ನವೀರ ಶಿವಾಚಾರ್ಯರು, ಆಶೀರ್ವಾದದೊಂದಿಗೆ ಶ್ರೀ ಮಧುಸುಧಾನಂದ ಸ್ವಾಮಿಜಿರವರು ತಮ್ಮ ಆಶೀರ್ವಚನದಲ್ಲಿ ವಿಶ್ವ ಹಿಂದೂ ಪರಿಷತ್ತಿನ ಸ್ಥಾಪನೆಯ ಉದ್ದೇಶ, ಕಾರ್ಯ ವೈಖರಿ ಮತ್ತು ಇಂದು ಹಿಂದೂ ಸಮಾಜಕ್ಕೆ ಇನ್ನಷ್ಟು ಸಂಸ್ಕಾರದ ಅವಶ್ಯಕತೆ ಇದ್ದು, ಬೇರೆ ಧರ್ಮೀಯರನ್ನ ನೋಡಿ ಕಲಿಯಬೇಕಾಗಿದೆ ಒಂದೆಡೇ ಕೂರದ ಸ್ವಾಮಿಜಿಗಳನ್ನು ಒಂದೇ ಕಡೇ ಕೂಡಿಸಿ ಧರ್ಮದ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯ ಶ್ಲಾಘನೀಯವಾದದ್ದು ಪ್ರತಿಯೊಬ್ಬ ಹಿಂದೂ ತನ್ನ ಮನೆಯಲ್ಲಿ ಭಗವತ್ ಗೀತೆಯ ಪವಿತ್ರ ಗ್ರಂಥವನ್ನು ತನ್ನ ಮನೆಯಲ್ಲಿ ಕಾಣುವಂತೆ ಮುಂದಿರಿಸಿ, ಪ್ರತಿದಿನ ಸಮಯ ತೆಗೆದು ಆದಷ್ಟು ಸಮಯ ಭಗವತ್ ಗೀತೆಯನ್ನ ಓದಬೇಕು ಓದಿ ತನ್ನ ಜೀವನದಲ್ಲಿ ಆದಷ್ಟು ಅಳವಡಿಸಿಕೊಳ್ಳಬೇಕು. ದಿನಾಲೂ ದೇವಾಲಯಗಳಿಗೆ ಹೋಗಿ ಕೆಲಹೊತ್ತು ಕಳೆಯುವದರಿಂದ ಮಾನಸಿಕ ಖಿನ್ನತೆ ಕಳೆದ್ಹೋಗಿ ಸಕಾರಾತ್ಮಕ ಯೋಜನೆಗಳು ಪರಿಣಾತ್ಮಕವಾಗಿ ನಮ್ಮಲ್ಲಿ ಬಂದು ಸೇರುತ್ತವೆ, ಮಕ್ಕಳಿಗೆ ಹಿಂದೂ ಸಮಾಜದ ಸಂಸ್ಕಾರ ನೀಡುವುದು ಅತ್ಯಗತ್ಯವಾಗಿದ್ದು, ಸಮಾನತೆ ದೃಷ್ಠಿಯಿಂದ ಇಲ್ಲಿ ಯಾರು ಮೇಲೂ, ಕೀಳು, ಭೇಧಬಾವವಿಲ್ಲ, ದೇವರೆದುರು ನಾವೆಲ್ಲರೂ ಆತನ ಮಕ್ಕಳೇ, ಮಕ್ಕಳಲ್ಲಿ ದೇವರಿಗೆ ಭೇಧಬಾವ ಸಲ್ಲದು ಎಂದು ಆಶೀರ್ವಚನ ನೀಡಿದರು.
ಬೌದ್ದಿಕ ವಕ್ತಾರರಾಗಿ ಆಗಮಿಸಿದ ಶ್ರೀಯುತ ಗಂಗಾಧರ ಹೆಗಡೆ ಜೀ ವಿಶ್ವ ಹಿಂದೂ ಪರಿಷದ್ ಉತ್ತರ ಪ್ರಾಂತದ ಉಪಾಧ್ಯಕ್ಷರಾಗಿ, ಹಿಂದೂಸ್ಥಾನದಲ್ಲಿ ಹುಟ್ಟಿ ಹಿಂದೂ ದೇವತೆಗಳನ್ನು ಇಂದೂ ನಾವು ಪೂಜಿಸಲಿಕ್ಕೆ ಹೋದರೆ ಅಲ್ಲಿಯೂ ಬಹಳಷ್ಟು ಭದ್ರತೆಯಿಂದಿರುವುದು ತುಂಬಾ ಕಳವಳಕಾರಿ ವಿಷಯ ನಮ್ಮ ದೇವರನ್ನು ನಾವೇ ದರ್ಶನ ಪಡೆಯಲು ಭದ್ರತಾ ಸಿಬ್ಬಂದಿಯವರ ಸಹಾಯ ಪಡೆಯಬೇಕಾಗುತ್ತದೆ ಹಾಗೂ ಇತ್ತೀಚಿನ ಧರ್ಮ ಪರಿವರ್ತನೆಯ, ಮತಾಂತರದ ಹೆಣ್ಣು ಮಕ್ಕಳನ್ನು ಪುಸಲಾಯಿಸಿ ಪ್ರೀತಿಯಲ್ಲಿ ಮೋಸಮಾಡಿ ಕೊಲೆಗೈಯ್ಯುವ ಲವ್ ಜಿಹಾದಿಯಂತಹ ಅಮಾನವೀಯ ಕಾರ್ಯಕ್ಕೆ ಬಲಿಯಾಗದೇ ಹಿಂದೂ ಸಮಾಜದ ಹೆಣ್ಣು ಮಕ್ಕಳು ಜಾಗೃತರಾಗಬೇಕಾಗಿದೆ. ಇತಿಹಾಸದುದ್ದಕ್ಕೂ ಮಹಿಳೆಯರನ್ನು ಹಿಂಸಿಸಿ ಒತ್ತಾಯ ಪೂರ್ವಕವಾಗಿ ಮತಾಂತರಕ್ಕೆ ಬಲಿಯಾಗಿಸಿದ್ದು ಉದಾಹರಣೆ ನಿಮಗೆಲ್ಲರಿಗೂ ಗೊತ್ತಿರುವ ವಿಷಯ ಶಿಷ್ಟರನ್ನು ರಕ್ಷಿಸಿ ದುಶ್ಟರನ್ನು ಸಂಹಾರ ಮಾಡಲಿಕ್ಕಾಗಿಯೇ ಶ್ರೀ ಕೃಷ್ಣ ಪರಮಾತ್ಮ ಅಂದು ಜನ್ಮ ತಾಳಿದ, ಅಂದೇ ಧರ್ಮ ರಕ್ಷಣೆಗೆ, ಸಂತರ ರಕ್ಷಣೆಗೆ, ಮಠ ಮಾನ್ಯಗಳು ದೇವಾಲಯಗಳ ರಕ್ಷಣೆಗಾಗಿಯೇ ಮತ್ತು ಧರ್ಮ ಜಾಗೃತಿಗಾಗಿಯೇ ಹುಟ್ಟಿದ್ದೆ ಈ ವಿಶ್ವ ಹಿಂದೂ ಪರಿಷದ್ ಇಂದು ಹಲವಾರು ಧರ್ಮ ಕಾರ್ಯಗಳನ್ನು ಜೋಡಿಸಿಕೊಂಡು ಸಂತರನ್ನು ಒಗ್ಗೂಡಿಸಿ ಅಳಿಸಿಹೊದ ನಮ್ಮ ಸಂಸ್ಕೃತಿಯ ಇತಿಹಾಸವನ್ನು ಮರುನಿರ್ಮಾಣ ಕಾರ್ಯ, ಮತಾಂತರ ತಡೆಯುವಲ್ಲಿ ಲವ್ ಜಿಹಾದದಂತಹ ಹೀನಾಯ ಕೃತ್ಯಗಳಿಂದ ಹೊರಗೆಳೆದು ಪುನರ್ ಹಿಂದೂ ಸಮಾಜಕ್ಕೆ ತಂದು, ಲ್ಯಾಂಡ್ ಜಿಹಾದ್, ಟ್ರಾವೇಲ್, ಜಿಹಾದ್, ಹೀಗೆ ಅನೇಕ ಹಿಂದೂ ಸಮಾಜವನ್ನು ಅಳಿಸುವ ಹುನ್ನಾರಗಳನ್ನು ತಡೆಹಿಡಿಯುವ ಅವಶ್ಯಕತೆ ಬಿದ್ದರೆ ತನ್ನ ಬಜರಂಗದಳದ ಮೂಲಕ ರೋಡಿಗಿಳಿದು ಹೋರಾಟಕ್ಕೂ ಸಿದ್ಧವಿರುವ, ಸೇವಾ, ಸಂಸ್ಕಾರ, ಸುರಕ್ಷೇಯ, ಧ್ಯೇಯ ವಾಕ್ಯದೊಂದಿಗೆ ಮುನ್ನಡೆಯುತ್ತಿರುವ ಜಗತ್ತಿನ ಏಕೈಕ ಸಂಘಟನೆ ಅದು ವಿಶ್ವ ಹಿಂದೂ ಪರಿಷದ್ ಬಜರಂಗದಳ, ಸಮಾಜದ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗದೇ ಸದೃಢ ಭಾರತ ಕಟ್ಟುವ ನಿಟ್ಟಿನಲ್ಲಿ ಬಲಿಷ್ಠರಾಗಬೇಕೆ ಹೊರತು ಶಕ್ತಿಹಿನರಾಗಬಾರದು ಎಂದು ಅಭಿಪ್ರಾಯಪಟ್ಟರು. ಇದೇ ಸಂಧರ್ಭದಲ್ಲಿ ಪರಮಪೂಜ್ಯ ಷ.ಬ್ರ.ಶ್ರೀ.ಡಾ. ಅಭಿನವ ಘನಲಿಂಗ ಶಿವಾಚಾರ್ಯರರಿಂದ ಹಿಂದೂ ಸಮಾಜದ ಏಕತೆ ಮತ್ತು ಧರ್ಮರಕ್ಷಣೆಯ ಸಂಕಲ್ಪದ “ ನಾವೆಲ್ಲಾ ಹಿಂದೂ, ನಾವೆಲ್ಲಾ ಬಂಧು, ನಾವೆಲ್ಲಾ ಒಂದು”, ಜಾತಿ ಬೇಧ ಮರೇಯೋಣ ಹಿಂದೂಗಳಾಗಿ ಒಂದಾಗೋಣ, ಸಂಸ್ಕೃತಿ ಉಳಿಸಿ ಧರ್ಮ ಬೆಳೆಸಿ, ಏಕತೆಯಿಂದ ದೇಶ ರಕ್ಷಿಸಿ ಎಂಬ ಘೋಷ ವಾಕ್ಯವನ್ನು ಬೋಧಿಸಲಾಯಿತು.
ಈ ಸಂಧರ್ಭದಲ್ಲಿ ಸದ್ಗುರು ಶ್ರೀ ಸದಾನಂದ ಮಠದ ಅಧ್ಯಕ್ಷರಾದ ಶ್ರೀ ಮಧುಕರ ಮಹಾಜನ ಜೀ, ವಿಶ್ವಹಿಂದೂ ಪರಿಷತ್ತಿನ ಉತ್ತರ ಪ್ರಾಂತದ ಕಾರ್ಯದರ್ಶಿಗಳಾದ ಶ್ರೀ ಶಿವಕುಮಾರ ಬೋಳಶೆಟ್ಟಿ, ಪ್ರಾಂತ ಸೇವಾ ಸಹ ಪ್ರಮುಖರಾದ ಅಂಬರೀಶ ಸುಲಿಗಾಂವ, ವಿಶ್ವ ಹಿಂದೂ ಪರಿಷತ್ತಿನ ಬೀದರ ಜಿಲ್ಲಾ ಅಧ್ಯಕ್ಷರಾದ ಶ್ರೀ ವೀರಶೆಟ್ಟಿ ಖ್ಯಾಮಾ, ಬಸವಕಲ್ಯಾಣ ಅಧ್ಯಕ್ಷರು ಹಾಗೂ ವಂದನಾರ್ಪಗೈದ ಶ್ರೀ ಶ್ರೀಶೈಲ ವಾತಡೆ, ನಗರ ಅಧ್ಯಕ್ಷರಾದ ಪ್ರಕಾಶ ನೀರಾಳೆ, ಧರ್ಮಾಚಾರ್ಯ ಪ್ರಖಂಡ ಪ್ರಮುಖರಾಗಿ ಸ್ವಾಗತಿಸಿ ಮತ್ತು ಹಿರಿಯರ ಪರಿಚಯ ನೀಡಿದ ಶಾಂತವೀರ ಸ್ವಾಮಿ, ಬಜರಂಗದಳ ಜಿಲ್ಲಾ ಸಹಸಂಯೋಜಕರು ಹಾಗೂ ನಿರೂಪಣೆ ನೆರವೇರಿಸಿದ ಶ್ರೀ ರವಿ ನಾವದ್ಗೇಕರ, ಗೋರಕ್ಷಾ ಪ್ರಮುಖರಾದ ವಿನೋದ ಬಡಗೇಕರ್, ಅಜಯ ಗವಳಿ, ಸುರಕ್ಷಾ ಪ್ರಮುಖರಾದ ಸಂಜು ದಳವೆ, ಸೇವಾ ಪ್ರಮುಖರಾದ ಸಂಜು ಎಕ್ಕಂಬೆ, ಕಾರ್ಯಕರ್ತರಾದ ಪ್ರಮೋದ ಠಾಕೂರ, ಶಂಕರ ಪವಾರ. ವಿಕಾಸ ಸಾಳಂಕೆ, ಸಚಿನ್ ಗರುಡ ಹಾಗೂ ಇತರರು ಭಾಗವಹಿಸಿದರು.
ವರದಿ : ಶ್ರೀನಿವಾಸ ಬಿರಾದಾರ




















