ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಕೃಷ್ಣನ ಅಮೂಲ್ಯ ನುಡಿಗಳು ಮನುಷ್ಯನ ಬದುಕಿಗೆ ದಾರಿ ತೋರಿಸುತ್ತವೆ – ಅಮರೇಶ್ ಜಿ ಕೆ

ಕೊಟ್ಟೂರು : ಪಟ್ಟಣದ ತಾಲೂಕು ಕಛೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ತಹಶೀಲ್ದಾರರಾದ ಅಮರೇಶ್ ಜಿ ಕೆ ಇವರು ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಭಕ್ತಿಯನ್ನು ಸಮರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ದೇವಕಿ ಮತ್ತು ವಸುದೇವರ ಪುತ್ರರಾದಿ ಮಥುರಾದಲ್ಲಿ ಜನಿಸಿದ ಶ್ರೀ ಕೃಷ್ಣ ಮಾವ ಕಂಸನಿಂದ ರಕ್ಷಿಸುವ ಸಲುವಾಗಿ ಯಮುನಾ ನದಿಯನ್ನು ದಾಟಿ ಗೋಕುಲದಲ್ಲಿ ಯಶೋಧೆ ಮತ್ತು ನಂದರ ಪ್ರತಿಯಲ್ಲಿ ಬೆಳೆದರು. ಮಗು, ಸ್ನೇಹಿತ, ಗುರು, ಸಾರಥಿ, ರಾಜನೀತಿಜ್ಞ ಹೀಗೆ ವಿವಿಧ ಪಾತ್ರಗಳನ್ನು ನಿರ್ವಹಿಸಿದ ಶ್ರೀ ಕೃಷ್ಣನನ್ನು ಭಗವಾನ್ ವಿಷ್ಣುವಿನ ಅವತಾರವೆಂದು ಕರೆಯುತ್ತಾರೆ. ಮಹಾಭಾರತದ ಯುದ್ದದಲ್ಲಿ ಗೊಂದಲಕ್ಕೆ ಸಿಲುಕಿದ ಅರ್ಜುನನಿಗೆ ಕೃಷ್ಣನು ಭೋಧಿಸಿದ ಭಗವದ್ಗೀತೆಯೇ ಇಂದು ಪವಿತ್ರ ಗ್ರಂಥವಾಗಿದ್ದು, ಭಗವದ್ಗೀತೆಯ ಮೂಲಕ ನೀಡಿದ ಅಮೂಲ್ಯ ನುಡಿಗಳು ಮನುಷ್ಯನ ಬದುಕಿಗೆ ದಾರಿ ತೋರಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಯಾದವ ಸಮಾಜದ ಮುಖಂಡರಾದ ಹೊಸಮನಿ ತಿಪ್ಪೇಸ್ವಾಮಿ ವಕೀಲರು ಶ್ರೀಕೃಷ್ಣ ಒಬ್ಬ ವ್ಯಕ್ತಿಯಲ್ಲ, ಶಕ್ತಿಯಾಗಿದ್ದಾರೆ. ಮಹಾಭಾರತದಲ್ಲಿ ಇವರು ಮಹಾನ್ ಪಾತ್ರವನ್ನು ವಹಿಸಿದ್ದು, ಧರ್ಮರಾಯನ-ಧರ್ಮ, ಭೀಮನ-ಬಲ, ಅರ್ಜುನನ-ಗುರಿ, ವಿಧುರನ-ನೀತಿ, ಕೃಷ್ಣನ ತಂತ್ರವನ್ನು ಕಾಣುತ್ತೇವೆ. ಆಧ್ಯಾತ್ಮಿಕ ಅನ್ವೇಷಕರಿಗೆ ಶ್ರೀಕೃಷ್ಣನು ಅರ್ಜಿನನಿಗೆ ನೀಡಿದ ಜ್ಞಾನವೇ ಬ್ರಹ್ಮ ಜ್ಞಾನವಾಗಿದೆ. ಆ ಮೂಲಕ ಸಂಕಷ್ಟದಲ್ಲಿ ಧೃತಿಗೆಡದೇ ಭಗವಂತನ ಮೇಲೆ ಭಾರವನ್ನು ಹಾಕಿ ಧೈರ್ಯದಿಂದ ಕಾರ್ಯನಿರ್ವಹಿಸಬೇಕು ಎಂಬ ಸಂದೇಶವನ್ನು ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾ .ಪಂ. ಮಾಜಿ ಉಪಾಧ್ಯಕ್ಷರಾದ ಎಸ್ ಗಂಗಾಧರ, ಡಿ ನಾಗರಾಜ ಯಾದವ(ಗೊಲ್ಲ) ಸಮಾಜದ ಮುಖಂಡರಾದ ಅಶೋಕ ಯಾದವ, ಕಜ್ಜೇರ ವಿಜಯ, ಬೆಂಕಿ ನಾಗರಾಜ, ಜಗದೀಶ, ರಮೇಶ, ಎಸ್ ಜಿ ಸೋಮಪ್ಪ, ಡಿ ಹೊನ್ನಪ್ಪ, ಎನ್ ನರಸಿಂಹ, ಪೂಜಾರಿ ಶ್ಯಾಮ ಸಿಬ್ಬಂದಿಯಾದ ಶಿರಸ್ತೇದಾರ್ ರೇಖಾ ಎಸ್, ಕಂದಾಯ ನಿರೀಕ್ಷಕ ಡಿ ಶಿವಕುಮಾರ್, ಕೆ ಮುಸ್ತಾಫ್, ಹಳ್ಳಿ ಕೊಟ್ರೇಶ, ಗ್ರಾಆಅ ಹಳ್ಳಿ ಹರೀಶ, ಸುಧಾ ಜೈನರ್ ಹಾಗೂ ಇತರರು ಇದ್ದರು.
ಸಿ.ಮ.ಗುರುಬಸವರಾಜ ಸ್ವಾಗತಿಸಿ ನಿರ್ವಹಿಸಿದರು.

ವರದಿ:ಕೆ .ಗೋಣೆಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!