ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಶ್ರೀ ಘನಲಿಂಗ ರುದ್ರಮುನಿ ಶಿವಯೋಗಿಗಳು ವೀರಶೈವ ಧರ್ಮದ ಪುನರುಜ್ಜೀವನದ ಮಹತ್ತರ ಪಾತ್ರ ವಹಿಸಿದವರು

ಬಸವಕಲ್ಯಾಣ: ಶ್ರೀ ಘನಲಿಂಗ ರುದ್ರಮುನಿ ಶಿವಯೋಗಿಗಳು ವೀರಶೈವ ಧರ್ಮದ ಪುನರುಜ್ಜೀವನದಲ್ಲಿ ಮಹತ್ತರ ಪಾತ್ರ ವಹಿಸಿದ್ದರು ಎಂದು ನಗರದ ಸಂಸ್ಥಾನ ಗವಿಮಠ ಪೂಜ್ಯಶ್ರೀ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ನುಡಿದರು.
ಇವರು 12ನೇ ಶತಮಾನದ ಒಬ್ಬ ಹಿರಿಯ ಗುರುಗಳಾಗಿದ್ದರು, ಜಗದ್ಗುರು ರೇವಣಸಿದ್ದರ ಔರಸ ಪುತ್ರರಾಗಿದ್ದು, ರುದ್ರಮುನಿ ಎಂದು ನಾಮಕರಣಗೊಂಡು ಎಂಟನೇ ವಯಸ್ಸಿನಲ್ಲಿ ವೀರಶೈವ ಧರ್ಮದ ಇಷ್ಟಲಿಂಗ ದೀಕ್ಷೆ ಪಡೆದು, ಕಲ್ಯಾಣ ( ಬಸವಕಲ್ಯಾಣ ) ದಲ್ಲಿ ವಿದ್ಯಾಭ್ಯಾಸ ಮಾಡಿ ಅಪಾರ ಜ್ಞಾನ ಸಂಪಾದಿಸಿದವರು. ಮುಂದೆ ರಂಭಾಪುರಿ ಪೀಠದ ಜಗದ್ಗುರುಗಳಾಗಿ ಅನೇಕ ಧರ್ಮ ಕಾರ್ಯಗಳನ್ನು ಮಾಡಿ ಸಾಧನೆ ಗೈದವರು. ತದ ನಂತರ ಕಲ್ಯಾಣಕ್ಕೆ ಬಂದು ಚನ್ನಬಸವಣ್ಣನವರ ತರುವಾಯ ಶೂನ್ಯ ಸಿಂಹಾಸನದ ಅಧಿಕಾರವನ್ನು ವಹಿಸಿಕೊಂಡಿದ್ದವರು. ಬಸವಕಲ್ಯಾಣ ಸಂಸ್ಥಾನ ಗವಿಮಠದ ಮೂಲ ಒಡೆಯರಾಗಿ ಪ್ರಮುಖ ಗುರುಗಳಾಗಿದ್ದರು ಎಂದು ಪೂಜ್ಯ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡಿದರು.
ನಗರದ ಸಂಸ್ಥಾನ ಗವಿಮಠದಲ್ಲಿ ಪವಿತ್ರ ಶ್ರಾವಣ ಮಾಸದ ಅಂಗವಾಗಿ ಗವಿಮಠ ಟ್ರಸ್ಟ್ ವತಿಯಿಂದ ಗುರುವಾರ ಆಯೋಜಿಸಿದ್ದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶ ಕುರಿತು ವಿಶೇಷ ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಶ್ರೀಮತಿ ಸರಸ್ವತಿ ಶಿವಕುಮಾರ ಬೆಂಬಳೆ ಅವರು ಮಾತನಾಡುತ್ತಾ ಶ್ರೀ ಘನಲಿಂಗ ರುದ್ರಮುನಿ ಶಿವಯೋಗಿಗಳವರು ದೇಶ ಪರ್ಯಟನೆ ಮತ್ತು ಅವರ ಸೇವೆ ಅನನ್ಯವಾದದ್ದು ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ ತೆಲಂಗಾಣ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ವಿವಿಧ ಕ್ಷೇತ್ರಗಳಿಗೆ ಸಂಚರಿಸಿ ತಮ್ಮ ಯೋಗ ಶಕ್ತಿ ಹಾಗೂ ತಪೋಬಲದಿಂದ ಜನರಿಗೆ ಧರ್ಮ ಸಂಸ್ಕಾರ ಹಾಗೂ ಆಧ್ಯಾತ್ಮಿಕ ಜಾಗೃತಿ ಮೂಡಿಸಿದ್ದವರು ಇವರು ಶ್ರೀಶೈಲದಲ್ಲಿ ಸಿಂಹಾಸನ ಮಠವನ್ನು ಕಟ್ಟಿದರೆಂದು ಕಾಲಜ್ಞಾನದ 1202 ಎಂಬ ಗ್ರಂಥದಲ್ಲಿ ಬರೆದಿರುವುದು ತಿಳಿದುಬರುತ್ತದೆ. ಮಧ್ಯಪ್ರದೇಶದ ಬಾಲಘಾಟ ಮತ್ತು ರೇವಾ ಜಿಲ್ಲೆಗಳಲ್ಲಿ ಶ್ರೀ ಜಗದ್ಗುರು ರುದ್ರಮುನೀಶ್ವರ ಮಠಗಳು ಇವೆ ಎಂಬ ದಾಖಲೆಗಳು ಮತ್ತು ಶಾಸನಗಳು ಸಿಕ್ಕಿವೆ ಎಂದು ಉಪನ್ಯಾಸ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ವೈದ್ಯರಾದ ಡಾ.ಸುಶೀಲಾಬಾಯಿ ಶಂಕರ ಹೊಳಕುಂದೆ ಅವರು ಮಾತನಾಡುತ್ತಾ ಈ ಮಠ ಬಹಳ ಪುರಾತನವಾದದ್ದು ಈ ಮಠದಲ್ಲಿ ಬಹಳ ಶಕ್ತಿ ಅಡಗಿದೆ ಇಲ್ಲಿ ಬಂದ ಭಕ್ತರಿಗೆ ಆರೋಗ್ಯದಲ್ಲಿ ಅಸ್ತವ್ಯಸ್ತತೆ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದರೆ ಈ ಮಠದ ಪರಿಸರದಲ್ಲಿ ಒಂದು ದಿನ ಕುಳಿತು ಹೋದರೆ ಅವರ ಮನಸ್ಸಿಗೆ,ಆರೋಗ್ಯಕ್ಕೆ ಗುಣವಾಗುವಂತಹ ಪವಿತ್ರ ಸ್ಥಳ ಇದಾಗಿದೆ. ವಿಜ್ಞಾನಕ್ಕಿಂತ ಆಧ್ಯಾತ್ಮಿಕ,ಧ್ಯಾನದಲ್ಲಿ ದೊಡ್ಡದಾಗಿರುವ ಶಕ್ತಿ ಇದೆ ಪೂಜ್ಯರು ಶ್ರಾವಣ ಮಾಸದಲ್ಲಿ ಪ್ರವಚನ ಹಾಗೂ ಮಠದ ಏಳಿಗೆಗೆ ಶ್ರಮಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಮತಿ ಸವಿತಾ ರಮೇಶ ಸ್ವಾಮಿ ವಹಿಸಿದ್ದರು ಅತಿಥಿಯಾಗಿ ಶ್ರೀಮತಿ ಶೀಲಾದೇವಿ ಬಸವಂತಪ್ಪಾ ಲವಾರೆ ಹಾಗೂ ಶಶಿಕಲಾ ಬಸವರಾಜ ಸನ್ನೂರೆ ಅವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಕುಮಾರಿ ವೈಷ್ಣವಿ ಸ್ವಾಮಿ ಸ್ವಾಗತಿಸಿದರು. ಶ್ರೀಮತಿ ರೇಣುಕಾ ಶಿವಶಂಕರ ರಾಮಣ್ಣನವರ್ ನಿರೂಪಿಸಿದರು.
ಶ್ರೀಮತಿ ಶಕುಂತಲಾ ಗುರುಲಿಂಗಯ್ಯ ಸ್ವಾಮಿ ಅವರು ಪ್ರಾರ್ಥನೆ ಗೀತೆ ಹಾಡಿದರು.
ಈ ಕಾರ್ಯಕ್ರಮದಲ್ಲಿ ಶರಣಪ್ಪ ಬಿರಾದರ, ಬಸವಂತಪ್ಪಾ ಲವಾರೆ, ವಿಠ್ಠಲ ರಾಜೋಳೆ, ಮಲ್ಲಿಕಾರ್ಜುನ ಅಲುಗುಡೆ, ಎ.ಜಿ ಪಾಟೀಲ, ಬಾಬುರಾವ್ ಚಳಕಾಪುರೆ, ಸಿದ್ದಲಿಂಗಪ್ಪ ಗೌಡ ಪಾಟೀಲ, ರಾಕೇಶ ಪುರವಂತ, ಚನ್ನಪ್ಪಾ ಅಳ್ಳಿಕಟ್ಟಿ, ಬಸವರಾಜ ಸನ್ನೂರೆ, ಮಲ್ಲಿಕಾರ್ಜುನ ಹೊಳಕುಂದೆ,ಸುರೇಖಾ ಸಜ್ಜನ ಶೆಟ್ಟಿ,ಕಲಾವತಿ ಗಡೆದಾರ,ಶೋಭಾವತಿ ರಾಗಾ,ಶೋಭಾವತಿ ಸ್ವಾಮಿ, ಅನುರಾಧಾ ಸ್ವಾಮಿ,ಪೂರ್ಣಿಮಾ ಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ : ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!