ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಖಾರಾ ಬಾತ್ ಪುಸ್ತಕ ಬಿಡುಗಡೆ ಸಮಾರಂಭ

ಶಿವಮೊಗ್ಗ: ​ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂ.), ಶಿವಮೊಗ್ಗ ಜಿಲ್ಲಾ ಶಾಖೆ ಹಾಗೂ ಯಜ್ಞ ಪ್ರಕಾಶನದ ಸಹಯೋಗದಲ್ಲಿ ಖ್ಯಾತ ಕವಿ, ಸಾಹಿತಿ, ಹಿರಿಯ ಅಂಕಣಕಾರರು ಹಾಗೂ ನವಜಾತ ಶಿಶು ಮತ್ತು ಮಕ್ಕಳ ತಜ್ಞರಾದ ಡಾ|| ಸಿ. ಜಿ. ರಾಘವೇಂದ್ರ ವೈಲಯ ಅವರ ಅಂಕಣ ಬರಹಗಳ ಸಂಕಲನವಾದ ‘ಖಾರಾ-ಬಾತ್’ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ​ದಿನಾಂಕ 05 ಸೆಪ್ಟೆಂಬರ್ 2026, ಶನಿವಾರ ​ಸಂಜೆ 5:00ಕ್ಕೆ (ಸಂಜೆ 4:30ಕ್ಕೆ ಉಪಹಾರ) ಆಯೋಜಿಸಲಾಗಿದ್ದು ಶಿವಮೊಗ್ಗ ತಿಲಕ್ ನಗರ ದಲ್ಲಿರುವ ಸನ್ ಸ್ಪೆಷಾಲಿಟಿ ಆಸ್ಪತ್ರೆ (SUN Speciality Hospital) ಇಲ್ಲಿ ಶ್ರೀ ಡಾ|| ಆಕಾಶ್ ಹೊಸತೋಟ (ಕೀಲು ಮೂಳೆ ತಜ್ಞರು, ನಿರ್ದೇಶಕರು, ಸನ್ ಸ್ಪೆಷಾಲಿಟಿ ಹಾಸ್ಪಿಟಲ್) ಕಾರ್ಯಕ್ರಮ ಉದ್ಘಾಟಿಸುವರು.

​ಪುಸ್ತಕ ಲೋಕಾರ್ಪಣೆಯನ್ನು ಶ್ರೀ ರಂಗಸ್ವಾಮಿ ಮೂಕನಹಳ್ಳಿ (ಖ್ಯಾತ ಅಂಕಣಕಾರರು ಹಾಗೂ ಆರ್ಥಿಕ ತಜ್ಞರು, ಮೈಸೂರು) ಇವರು ನೆರವೇರಿಸಿ
​ಪುಸ್ತಕ ಪರಿಚಯವನ್ನು ಶ್ರೀ ಹೆಚ್. ಯು. ವೈದ್ಯನಾಥ್ (ವೈದ್ಯ) (ಅಧ್ಯಕ್ಷರು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಶಿವಮೊಗ್ಗ) ಇವರು ನಡೆಸಿ ಕೊಡುವರು.

​ಮುಖ್ಯ ಅತಿಥಿಗಳಾಗಿ ‘ಕಗ್ಗ’ ಖ್ಯಾತಿಯ ವಿದ್ವಾನ್ ಶ್ರೀ ಜಿ. ಎಸ್. ನಟೇಶ್ (ನಿವೃತ್ತ ಪ್ರಾಧ್ಯಾಪಕರು, ಶಿವಮೊಗ್ಗ)ಇವರು ಆಗಮಿಸುವರಲ್ಲದೆ ಕಾರ್ಯಕ್ರಮ ​ಅಧ್ಯಕ್ಷತೆಯನ್ನು ಶ್ರೀ ಡಾ|| ಎನ್. ಸುಧೀಂದ್ರ (ಅಧ್ಯಕ್ಷರು, ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಶಿವಮೊಗ್ಗ) ಇವರು ವಹಿಸಿಕೊಳ್ಳುವರು.
ಸಂಜೆ 4:30ಕ್ಕೆ ಉಪಹಾರ ವ್ಯವಸ್ಥೆ ಇರುತ್ತದೆ.

ಕಾರ್ಯಕ್ರಮದಲ್ಲಿ ​ಗೌರವ ಉಪಸ್ಥಿತಿಯಾಗಿ ಶ್ರೀ ಡಾ|| ಸಿ. ಜಿ. ರಾಘವೇಂದ್ರ ವೈಲಯ (ಕೃತಿ ಕರ್ತೃ, ನವಜಾತ ಶಿಶು & ಮಕ್ಕಳ ತಜ್ಞರು, ನಿರ್ದೇಶಕರು, ಜನನಿ ನ್ಯೂಲೈಫ್ ಆಸ್ಪತ್ರೆ) ಹಾಜರಿರುವರಲ್ಲದೆ
​ವೇದಿಕೆ ನಿರೂಪಣೆಯನ್ನು ಶ್ರೀಮತಿ ಸುಪ್ರಿಯ ಬಿ.ಕಾಂ., ಖ್ಯಾತ ನಿರೂಪಕರು ಇವರು ನಡೆಸಿಕೊಡುವರು.

​ಈ ಸಂದರ್ಭದಲ್ಲಿ ವಿಶೇಷ ಸಾಂಸ್ಕೃತಿಕ
​ಕಾರ್ಯಕ್ರಮದಲ್ಲಿ ಸಾಹಿತ್ಯಿಕ ಚಟುವಟಿಕೆಗಳ ಜೊತೆಗೆ ಶ್ರೀ ಶಾರದಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಲೇಖಕ ಡಾ|| ಸಿ. ಜಿ. ರಾಘವೇಂದ್ರ ವೈಲಯ ಅವರು ರಚಿಸಿರುವ ಆಯ್ದ ಕವನಗಳ ಗಾನ ಪ್ರಸ್ತುತಿ ನಡೆಸಲಿದ್ದು ಮಾಜಿ ಪ್ರಕಾಶನ ಮತ್ತು (Yaji Prakashana) ಜನನಿ ನ್ಯೂಲೈಫ್ ಆಸ್ಪತ್ರೆ ಹಾಗೂ ಸಿಬ್ಬಂದಿ ವರ್ಗದವರು ಸ್ವಾಗತಿಸುವರು ಎಂದು ಪ್ರಕಟಣೆ ತಿಳಿಸಿದೆ.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ ಬೆಂಗಳೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!