ಹಲ್ಲುಜೋಳದ ನೂಲುಗಳ ಕಟ್ಟೆಯಲಿ ಹರಡಿ
ಕಾಳುಗಳ ಜೋಡಿಸಲು ಗರಿಗಳಾ ಜೋಡಿ
ಆಚೀಚೆಯಲಿ ಹಸಿರ ತೆನೆಗಳು ಜೋತಾಡಿ
ಸಂಜೆಮಲ್ಲಿಗೆ ಕುಡಿಗಳಲಿ ಐಸಿರಿಯ ಮೋಡಿ
ತುಂಬೆ ಹೂಗಳ ಜೋಡಣೆಯಲಿನ ಪುಷ್ಪವು
ಕತ್ತರಿಸಿದ ಕೆಂಪು ದಾಸವಾಳಗಳಲಿ ಕುಸುಮವು
ಶಿರದಿ ಮೂಡಿತೊಂದು ಪ್ರಭಾವಳಿಯ ಸ್ವರೂಪವು
ಶುಭ ಮುಂಜಾವಲಿ ಅರಳಿತು ಕಾವ್ಯ ಚಿತ್ತಾರವು
- ಲಲಿತಾ ಕೆ ಆಚಾರ್, ಬೆಂಗಳೂರು




















