ದಾಳಿಂಬೆ ಕಾಳುಗಳ ಚಪ್ಪರಿಸಿ ಸಿಪ್ಪೆಯ ನೀಡಿದಳು
ಮೊಮ್ಮಗಳು ಚಿನ್ಮಯಿ ಚಿತ್ತಾರ
ಬಿಡಿಸೆಂದಳು
ತೋರಿಸಲು ತಂಗಿ ಪುನರ್ವಿಯ ಕರೆತಂದಳು
ಒಟ್ಟಿಗೆ ಆನಂದಿಸುತಲಿ ಜೋಡಿಸಿದವು ಕರಗಳು
ಕ್ರಿಯಾಶೀಲ ಪ್ರಭಾವ ಮಕ್ಕಳಿಗೂ ಉತ್ಸಾಹ
ಅದುವೇ ಕಲೆಯ ಕ್ರಿಯಾಶೀಲತೆಗೆ ಪ್ರೋತ್ಸಾಹ
ವೃದ್ದಿಸುವುದು ಆಸಕ್ತರಿಗೆ ಕಾವ್ಯದ ದಾಹ
ಮುಂಜಾವಿನಲಿ ಮೂಡಲಿ ಸುಮನಗಳಲಿಯೂ ಈ ಮೋಹ
- ಲಲಿತಾ ಕೆ ಆಚಾರ್, ಬೆಂಗಳೂರು




















