ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತಾಲ್ಲೂಕು ಕಚೇರಿಯಲ್ಲಿ ಶ್ರದ್ಧಾಭಕ್ತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ.

ಕೊರಟಗೆರೆ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಹಶೀಲ್ದಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳ ಬಾಗಿತ್ವದಲ್ಲಿ ಸರಳವಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.

ಜನ್ಮಾಷ್ಟಮಿ ಆಚರಣೆ ಬದಲು ಭಗವಂತನ ಸಂದೇಶ ಅರಿಯುವುದು ಮುಖ್ಯ. ಆಧುನಿಕ ಯುಗದಲ್ಲಿ ಭೋಜನ, ವಸ್ತ್ರ, ಭಾಷೆ ಎಲ್ಲವನ್ನೂ ಪಾಶ್ಚಾತ್ಯ ಶೈಲಿ ಅನುಕರಣೆ ಮಾಡುತ್ತಿರುವ ಜನರು ಒಂದಿಲ್ಲೊಂದು ತೊಂದರೆಯಲ್ಲಿದ್ದಾರೆ. ಸಿಹಿತನವೆಂಬ ಧರ್ಮದ ವಿರುದ್ಧ ಬದುಕು ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನ್ಮ ಕರ್ಮಗಳ ತತ್ವ ತಿಳಿದು ಭ್ರಮೆಯ ಬದುಕಿನಿಂದ ಮುಕ್ತರಾಗಿ ವಾಸ್ತವವಾಗಿ ಬದುಕಲು ಶ್ರೀ ಕೃಷ್ಣ ಸಂದೇಶ ಎಲ್ಲರನ್ನು ಸಾಕ್ಷಾತ್ಕಾರದೆಡೆಗೆ ಕೊಂಡೊಯ್ಯಲಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರ ಜೀವನದ ಗುರಿ ಸನ್ಮಾರ್ಗದಲ್ಲಿ ನಡೆದು ಆನಂದ ಪಡೆಯುವುದು. ಆದರೆ, ಕಲಿಯುಗದಲ್ಲಿ ಮದ್ಯಪಾನ, ಮಾಂಸಾಹಾರ, ಪರ ಸ್ತ್ರೀಯರೊಂದಿಗೆ ಲೈಂಗಿಕ ಕಾರ‍್ಯ, ಜೂಜಾಡಿ ಪಡೆದ ಆನಂದ ಪಾಪ, ಕರ್ಮಗಳನ್ನು ಹೆಚ್ಚಿಸುತ್ತದೆ. ಕ್ಷಣಿಕ ಸಂತೋಷ ಭವಿಷ್ಯದ ಬದುಕಿನ ಕ್ಷಣಗಳನ್ನು ಕೊಲ್ಲುತ್ತದೆ ಎಂದು ತಹಶೀಲ್ದಾರ್ ಮಂಜುನಾಥ್. ಕೆ ರವರು ಹೇಳಿದರು.

ಶ್ರೀ ಕೃಷ್ಣನ ಸಂದೇಶವನ್ನು ಮನುಷ್ಯ ತಿಳಿದುಕೊಂಡರೆ ಅಧಿಕಾರದ ಲಾಲಸೆ, ತಪ್ಪು ಕಲ್ಪನೆ, ಅಹಂಕಾರ, ಭಿನ್ನಾಭಿಪ್ರಾಯಗಳನ್ನು ತೊರೆದು ಸರಳ ಜೀವನ ಕಂಡಕೊಳ್ಳಬಹುದು ಎಂದು ಉಪದೇಶ ನೀಡಿದರು.

ತಾಲೂಕಿನ ದಂಡಾಧಿಕಾರಿ ಮಂಜುನಾಥ್. ಕೆ. ಕಾರ‍್ಯಕ್ರಮ ಉದ್ಘಾಟಿಸಿದರು. ಬಸವರಾಜ್. ಆರ್. ಐ. ಕನ್ನಡ ಮತ್ತು ಸಂಸ್ಕೃತಿ ವೀರಣ್ಣ, ಮಹಾಲಿಂಗಪ್ಪ, ಪುಟ್ಟಣ್ಣ,ನಾನಾ ಇಲಾಖೆಗಳ ಅಧಿಕಾರಿಗಳು ಹಾಗೂ ಇತರೆ ಗಣ್ಯರು ಭಾಗವಹಿಸಿದರು.

ವರದಿ ಪ್ರಸನ್ನ ಕುಮಾರ್. ಎಸ್ . ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!