
ಹುಬ್ಬಳ್ಳಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ (ಡಾ.ವಾಸುದೇವ ಮೇಟಿ ಬಣ) ಧಾರವಾಡ ಜಿಲ್ಲಾ ಸಮಿತಿ ಹಾಗು ವಿವಿಧ ಜಿಲ್ಲೆಯ ರೈತರು ರೈತ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ್ದರು.
ಈ ವೇಳೆ ಮನ್ಸೂರ್ ಮಠದ ಬಸವರಾಜ ದೇವರು, ಅಣ್ಣಿಗೇರಿ ಡಾ.ಶಿವಕುಮಾರ ಸ್ವಾಮೀಜಿ, ಮಂಟೂರ ಆನಂದ ಸ್ವಾಮೀಜಿ, ರೈತ ಸಂಘದ ರಾಜ್ಯ ಅಧ್ಯಕ್ಷ ವಾಸುದೇವ ಮೇಟಿ ಹಾಗೂ ವಿವಿಧ ಜಿಲ್ಲೆಗಳ ಮುಖಂಡರಾದ ಡಾ.ಗುರುಪ್ರಸಾದ, ಪೀರು ಕೇರೂರ, ಕಮಲಾ ಪಾಟೀಲ, ಎಫ್.ಕೆ.ಪೂಜಾರ,ಬಸವರಾಜ ಸಂಭೋಜಿ, ರಾಮನಗೌಡ ಪ್ರವತಗೌಡ, ಶರಣಬಸಪ್ಪ ದಾನಕೈ, ಬಾಳವ್ವ ಮುದೇನೂರ, ಮುದಿಯಪ್ಪ ನಾಯಕ, ಗುರುಪಾದಪ್ಪ ಬಂಕದ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ಭಾಗವಹಿಸಿದ್ದರು.
- ಕರುನಾಡ ಕಂದ ಸುದ್ದಿ




















