ಗೋಣಿಕೊಪ್ಪ : ಇಂಧನ ಹಾಗೂ ಪ್ರವಾಸೋದ್ಯಮ
ಸಚಿವರಾದ ಕೆ.ಜಿ.ಜಾರ್ಜ್ ಅವರು ಗೋಣಿಕೊಪ್ಪಲುವಿನ
ಕಾಲ್ಸ್ ಶಾಲಾ ಆವರಣದಲ್ಲಿ ಭಾನುವಾರ ಕೊಡಗು
ಮಾನ್ಸೂನ್ ಆಫ್ ಮ್ಯಾರಥಾನ್ಗೆ ಚಾಲನೆ ನೀಡಿದರು.
ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್ (ಎಸ್‌ಎಫ್) ಮತ್ತು
ಕಾಲ್ಸ್ ಎನ್ಇಬಿ ಸ್ಪೋರ್ಟ್ಸ್ ಎಂಟರ್ಟೈನ್ಮೆಂಟ್ ಹಾಗೂ
ರಾಜ್ಯ ಪ್ರವಾಸೋದ್ಯಮ ಇಲಾಖೆ ಸಹಯೋಗದೊಂದಿಗೆ
ಆಯೋಜಿಸಿದ್ದ ಈ ಬೃಹತ್ ಮ್ಯಾರಥಾನ್ ನಲ್ಲಿ ಒಟ್ಟು 5,902
ಮಂದಿ ಭಾಗವಹಿಸಿದ್ದರು.
21 ಕಿ.ಮೀ ಮತ್ತು 10 ಕಿ.ಮೀ ವಿಭಾಗಗಳು ಮಾತ್ರವಲ್ಲ ವಿಶೇಷವಾಗಿ 5 ಕಿ.ಮೀ ‘ಮಜಾ ರನ್ನನ್ನು ಏರ್ಪಡಿಸಲಾಗಿತ್ತು.
ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಮಾತನಾಡಿ, ಇಡೀ ದೇಶದಲ್ಲೇ ಶ್ರೇಷ್ಠ ಕ್ರೀಡಾ ಜಿಲ್ಲೆಯಾಗಿರುವ ಕೊಡಗಿನಲ್ಲಿ ಇಂತಹ ಕ್ರೀಡಾಕೂಟ ನಡೆಯುತ್ತಿರುವುದು ಇಲ್ಲಿಯ ಜನರ ಕ್ರೀಡಾ ಮನಸ್ಥಿತಿ ಹಾಗೂ ಕ್ರೀಡೆಗೆ ನೀಡುವ ಪ್ರೋತ್ಸಾಹಕ್ಕೆ ಹಿಡಿದ ಕೈಗನ್ನಡಿಯಾಗಿದೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅನೇಕ ಶ್ರೇಷ್ಠ ಕ್ರೀಡಾಪಟುಗಳನ್ನು ನೀಡಿದ ಮಣ್ಣು ನಮ್ಮ ಕೊಡಗು. ಇಂದಿನ ಈ ಪತಿಯೋಗಿತದಲ್ಲಿ ಭಾಗವಹಿಸಿದ ಎಲ್ಲರೂ ಉತ್ತಮ ಕ್ರೀಡಾ ಪ್ರದರ್ಶನವನ್ನು ನೀಡಿ, ಉತ್ತಮ ಹೆಸರು ಗಳಿಸುವಂತಾಗಲಿ ಎಂದು ಹಾರೈಸಿದರು.
ಕ್ರೀಡಾ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಸಂಸ್ಥೆಯ ಮುಖ್ಯಸ್ಥರಾದ ಅಶ್ವಿನಿ ನಾಚಪ್ಪ ಇತರರು ಇದ್ದರು.
ವರದಿ : ಪ್ರಿತುನ್ ಪೂವಣ್ಣ




















