ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಹಳ ದಿನಗಳಿಂದ ಕನಸು ನನಸಾಗಿದ ಕ್ಷಣ ಕಾಳಗಿಯಲ್ಲಿ ಸಿವಿಲ್, ಜೆ. ಎಂ. ಎಫ್. ಸಿ. ನ್ಯಾಯಾಲಯ ಉದ್ಘಾಟನೆ

ಕಾಳಗಿ : ಜನರ ಹಕ್ಕುಗಳ ರಕ್ಷಣೆ ಹಾಗೂ ಸಕಾಲದಲ್ಲಿ ನ್ಯಾಯ ಒದಗಿಸುವುದು ನ್ಯಾಯಾಲಯಗಳ ಪ್ರಮುಖ ಉದ್ದೇಶವಾಗಿರುತ್ತದೆ ಎಂದು ಕಲಬುರ್ಗಿ ಜಿಲ್ಲೆಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶಿವಶಂಕರ್ ಅಮರ್ ಅಣ್ಣನವರು ಹೇಳಿದರು.
ಕಾಳಗಿ ಪಟ್ಟಣದಲ್ಲಿ ಸ್ಥಾಪಿಸಲಾದ ಸಿವಿಲ್ ನ್ಯಾಯಾಲಯ ಹಾಗೂ ಜೆ ಎಂ ಎಫ್ ಸಿ ನ್ಯಾಯಾಲಯದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಳಗಿ ನೂತನ ನ್ಯಾಯಾಲಯ ಆರಂಭವಾಗಿರುವುದರಿಂದ ಕಾಳಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ನ್ಯಾಯಾಂಗ ಸೇವೆಗಳು ಸ್ಥಳೀಯವಾಗಿಯೇ ಲಭ್ಯವಾಗಲಿವೆ. ಇದರಿಂದ ನ್ಯಾಯಕ್ಕಾಗಿ ದೂರದ ಪ್ರದೇಶಗಳಿಗೆ ಹೋಗುವ ಅನಿವಾರ್ಯತೆ ಕಡಿಮೆಯಾಗಲಿದ್ದು ಜನರಿಗೆ ತ್ವರಿತವಾಗಿ ಹಾಗೂ ಸುಲಭವಾಗಿ ನ್ಯಾಯ ದೊರೆಕಿಸಿಕೊಡುವಲ್ಲಿ ನೂತನ ನ್ಯಾಯಾಲಯ ಮಹತ್ವ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ಈ ಭಾಗದ ಜನರಿಗೆ ನ್ಯಾಯಾಲಯದ ಪ್ರಮುಖವಾಗಿ ಅಗತ್ಯವಿತ್ತು. ಆದ್ದರಿಂದ ಪ್ರಸ್ತುತ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡದಲ್ಲಿ ತಾತ್ಕಾಲಿಕವಾಗಿ ಸುಸಜ್ಜಿತ ನ್ಯಾಯಾಲಯ ಸ್ಥಾಪಿಸಲು ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ ಅವರ ಶ್ರಮ ಹಾಗೂ ಪ್ರಮುಖ ಪಾತ್ರವಾಗಿದೆ. ಇದರಿಂದ ಜನರು ಪ್ರಕರಣಗಳ ವಿಚಾರಣೆಗಾಗಿ ದೂರದ ಊರುಗಳಿಗೆ ಹೋಗದೆ ಸ್ಥಳೀಯವಾಗಿ ನ್ಯಾಯ ಪಡೆಯಲು ಸಾಧ್ಯವಾಗಲಿದೆ ಎಂದರು.
ಕಾಳಗಿಯಲ್ಲಿ ಶಾಶ್ವತ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕಾಗಿ ದಾನ ಧರ್ಮಕ್ಕೆ ಹೆಸರಾಂತಾಗಿರುವ ಶ್ರೀ ಶಿವ ಶರಣಪ್ಪ ಕಮಲಾಪುರ ಅವರು ಮೂರು ಎಕರೆ ಜಮೀನು ದೇಣಿಗೆ ನೀಡಿರುವುದು ಈ ಭಾಗದ ಜನರಿಗೆ ಬಹಳ ಸಂತೋಷವಾಗಿದೆ. ಹೊಸ ತಾಲೂಕು ಕೇಂದ್ರಗಳಲ್ಲಿ ಸರಕಾರ 105 ನ್ಯಾಯಾಲಯ ಕಟ್ಟಡಗಳನ್ನು ಸ್ಥಾಪಿಸಲು ಮುಂದಾಗಿದೆ. ಸ್ಥಳೀಯ ನಾಯಕರು ಹಾಗೂ ಶಾಸಕರು ಮುತವರ್ಜಿ ವಹಿಸಿ ಕಾಳಗಿಯಲ್ಲಿ ಆದಷ್ಟು ಬೇಗ ಶಾಶ್ವತ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಬೇಕೆಂದು ಹೇಳಿದರು.
ಕಾಳಗಿ ತಾಲೂಕು ಆದ ಮೇಲೆ ಕಾಳಗಿಯಲ್ಲಿ ನ್ಯಾಯಾಲಯ ಸ್ಥಾಪನೆಗೆ ಶ್ರಮಿಸಿದ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ, ನಿವೃತ್ತ ನ್ಯಾಯಾಧೀಶ ಡಾ. ಚೆನ್ನಮಲ್ಲಪ್ಪ ಬೆನಕನಹಳ್ಳಿ ಹಾಗೂ ನ್ಯಾಯಾಲಯದ ಕಟ್ಟಡಕ್ಕಾಗಿ ಭೂಮಿ ದೇಣಿಗೆ ನೀಡಿದ ಶಿವ ಶರಣಪ್ಪ ಕಮಲಾಪುರ್ ಅವರನ್ನು ಸತ್ಕರಿಸಿ ಸನ್ಮಾನಿಸಲಾಯಿತು.
ಇದಕ್ಕೂ ಮೊದಲು ನ್ಯಾಯಾಲಯದ ಕಟ್ಟಡದ ಉದ್ಘಾಟನೆಗೆ ಆಗಮಿಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣ ನವರ ಅವರನ್ನು ಪೊಲೀಸ್ ಇಲಾಖೆಯಿಂದ ಸರ್ಕಾರಿ ಗೌರವದೊಂದಿಗೆ ಸ್ವಾಗತಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್ ಹಾಗೂ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್, ಹೆಬ್ಬಾಳ್ ಮಾತನಾಡಿದರು. ಕಾಳಗಿ ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ಡಿ ಎಸ್ ನಾಮದಾರ ಪ್ರಾಸ್ತವಿಕ ನುಡಿ ನಮನ ಮಾತನಾಡಿದರು. ಶ್ರೀನಿವಾಸ್ ನವಲಿ ಸ್ವಾಗತಿಸಿದರು.
ಶಾಸಕ ಅವಿನಾಶ್ ಜಾಧವ್, ಕಾಂಗ್ರೆಸ್ ಮುಖಂಡ ಸುಭಾಸ್ ರಾಠೋಡ, ಶಿವಶರಣಪ್ಪ ಕಮಲಾಪುರ್, ನಿವೃತ್ತ ನ್ಯಾಯಾಧೀಶ ಡಾ. ಚೆನ್ನಮಲ್ಲಪ್ಪ ಬೆನಕನಹಳ್ಳಿ, ವಕೀಲರಾದ ಮೈಮೂದ ಕಂಚಗಾರ, ಶಶಿಕಾಂತ್ ಆಡಕಿ, ರಾಜಶೇಖರ್ ರಟಕಲ್, ಅರುಣ್ ಕುಮಾರ್ ಕೊರವಿ, ಜೀವನ ಮಂಗಲಗಿ, ಎನ್ ಎಸ್ ಪಾಟೀಲ್, ನಾಗಣ್ಣ ಚೊಂಚಿ, ನಾಗಭೂಷಣ್ ಹುಲಗುಂದಿ, ರೇವಣಸಿದ್ದಪ್ಪ ಮಾಸ್ಟರ್ ಜಿಎಲ್ ನಾರಾಯಣಸ್ವಾಮಿ, ಶ್ರೀನಿವಾಸ್ ನವಲೇ ಸೇರಿದಂತೆ ಅನೇಕ ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಮತ್ತು ರಾಜಕೀಯ ಮುಖಂಡರು, ವಿವಿಧ ಸಂಘಟನಾ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ ಚಂದ್ರಶೇಖರ್ ಆರ್. ಪಾಟೀಲ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!