ಯಲಬುರ್ಗಾ: ತಾಲೂಕಿನ ಸುಕ್ಷೇತ್ರವಾದ ಭಾವೈಕ್ಯತೆಯ ಗ್ರಾಮ ದಮ್ಮೂರಿನಲ್ಲಿ 2025-2026 ಸಾಲಿನ ಎಸ್.ಎಸ್ ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 80% ರಷ್ಟು ಮೇಲೆ ಪರ್ಸೆಂಟೇಜ್ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಶಿವಾನುಭವ ಸೇವಾ ಸಮಿತಿಯಿಂದ ಆಗಸ್ಟ್ 11 ರಂದು ಮಂಗಳವಾರ, ನಾಗರ ಅಮಾವಾಸ್ಯೆ ಚತುರ್ದಶಿ ನಿಮಿತ್ಯವಾಗಿ ಅಂದು ವಿಶೇಷವಾಗಿ ದಮ್ಮೂರ ಗ್ರಾಮದ ವಿದ್ಯಾರ್ಥಿಗಳಿಗೆ, ಗೌರವಿಸಿ ಸನ್ಮಾನ ಮತ್ತು ಪ್ರಶಸ್ತಿ ನೀಡಿ, ಗೌರವಿಸಲಾಗುವುದು. ಆದ ಕಾರಣ ವಿದ್ಯಾರ್ಥಿಗಳು ಇದೇ ಜುಲೈ 31ನೇ ತಾರೀಕಿನೊಳಗೆ, ಶ್ರೀ ಮಠದ ಒಡೆಯರಾದ, ಹನುಮಂತಪ್ಪಜ್ಜನವರಲ್ಲಿ ತಮ್ಮ ಇತ್ತೀಚಿನ ಫೋಟೋ, SSLCಅಂಕಪಟ್ಟಿ ಜೆರಾಕ್ಸ್ ಮತ್ತು ದ್ವಿತೀಯ ಪಿ.ಯು.ಸಿ ಅಂಕಪಟ್ಟಿ ಜೆರಾಕ್ಸ್ ಹಾಗೂ ಆಧಾರ್ ಕಾರ್ಡ್ ಸಲ್ಲಿಸಿ, ಹೆಸರು ನೋಂದಾಯಿಸಿಕೊಳ್ಳಬೇಕೆಂದು ದಮ್ಮೂರಿನ ಶ್ರೀ ಭೀಮಾಂಬಿಕಾದೇವಿ ಶಿವಾನುಭವ ಸೇವಾ ಸಮಿತಿಯ ಅಧ್ಯಕ್ಷರು, ಸದಸ್ಯರು ವಿನಂತಿಸಿದ್ದಾರೆ.
- ಕರುನಾಡ ಕಂದ ಸುದ್ದಿ




















