ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬಸವಾದಿ ಶರಣರ ಆಚಾರ ವಿಚಾರಗಳನ್ನು ಯುವಕರು ಜೀವನದಲ್ಲಿ ಅಳವಡಿಸಿ ಅಳವಡಿಸಿಕೊಳ್ಳಬೇಕು : ಅಮೀನಗಡ ಶ್ರೀಗಳು

ಹುನಗುಂದ: ಸಮಾನತೆಯ ಸಮ ಸಮಾಜ ಕಟ್ಟಬೇಕೆಂಬ ಬಸವಾದಿ ಶರಣರ ತತ್ವಕ್ಕೆ ಮತ್ತೆ ಬಲತುಂಬಿ ಕೊಂಡಿರುವುದು ತುಂಬಾ ಆಶಾಕಿರಣ ಎಂದು ಅಮೀನಗಡ- ಎರಿಗೋನಾಳದ ಪ್ರಭುಶಂಕರೇಶ್ವರ ಮಠದ ಶಂಕರರಾಜೇಂದ್ರ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ಚಿತ್ರವಾಡಗಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಹಮ್ಮಿಕೊಂಡಿದ್ದ 428ನೇ ಮಾಸಿಕ ಶಿವಾನುಭವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು. ಅಂದು ನುಡಿದಂತೆ ನಡೆದ ಬಸವಾದಿ ಶರಣರ ಸುಸಂಸ್ಕೃತ ಆಚಾರ-ವಿಚಾರಗಳನ್ನು ಇಂದಿನ ಯುವಕ ಯುವತಿಯರಿಗೆ ಮನವರಿಕೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಹುನಗುಂದ ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ನಾಗರಾಜ ನಾಡಗೌಡರ ಅತಿಥಿಯಾಗಿ ಮಾತನಾಡಿ ಡಾಂಬಿಕ ಭಕ್ತಿಯನ್ನು ತೊರೆದುಹಾಕಿ ಸರಳ ಸುಸಂಸ್ಕೃತ ಜೀವನದೊಂದಿಗೆ ಪರೋಪಕಾರಿಗಳಾಗಿ ಬದುಕಿದಾಗ ಮಾನವ ಜೀವನ ಸಾರ್ಥಕವಾಗಲಿದೆ ಎಂದರು. ಕಸಾಪ ಅಧ್ಯಕ್ಷ ಎಸ್. ಎಸ್. ದಾನಿಮನಿ ಅತಿಥಿಯಾಗಿ ಮಾತನಾಡಿ – ಶರಣರ – ದಾಸೋಹ ತತ್ವ ಬೆಳೆಸಿಕೊಳ್ಳಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಹುನಗುಂದದ ವಿಜಯಮಹಾಂತೇಶ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಕೀಲ ಮಹಾಂತೇಶ ಅವಾರಿ , ಉಪಾಧ್ಯಕ್ಷರಾಗಿ ಆಯ್ಕೆಯಾದ ಶಕುಂತಲಾ ಬೆಲ್ಲದ ಅವರನ್ನು ಶ್ರೀ ವೀರ ಭದ್ರೇಶ್ವರ ಟ್ರಸ್ಟಿನ ಪರವಾಗಿ ಸನ್ಮಾನಿಸಲಾಯಿತು.
ದೇವಸ್ಥಾನದ ಸಂಚಾಲಕರಾದ ಎಂ. ಎಸ್. ಮಠ ಅವರು ಸ್ವಾಗತಿಸಿ, ವಂದಿಸಿದರು. ಶಂಕರಗೌಡ ಪಾಟೀಲ ನಿರೂಪಿಸಿದರು.
ಚಂದ್ರಶೇಖರ ಬಡಿಗೇರ, ಅಣ್ಣಪ್ಪ ಪಾಟೀಲ, ಭರಮಗೌಡ್ರ ಪಾಟೀಲ ಸಂಗೀತ ಸೇವೆ ಸಲ್ಲಿಸಿದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!