
ಬೀದರ್ /ಬಸವಕಲ್ಯಾಣ ವಿಶ್ವ ಹಿಂದೂ ಪರಿಷತ್, ಬಜರಂಗ ಬಸವಕಲ್ಯಾಣ ವತಿಯಿಂದ ಅಕ್ರಮ ಗೋ ಸಾಗಾಣಿಕೆ, ಗೋ ಕಳ್ಳಾಟ, ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಡದಿ ದನಕರುಗಳಿಗೆ ನೋಂದಣಿಯ ಟ್ಯಾಗ್ ಹಾಕುವಂತೆ ಹಾಗೂ ಅಕ್ರಮ ಗೋವುಗಳನ್ನು ಖರೀದಿ, ಗೋ ಮಾರಾಟದ ಹಾಗೂ ನೋಂದಣಿಯ ಬಗ್ಗೆ ಲಿಖಿತ ದಾಖಲೆಯನ್ನು ನಮೂದಿಸುವಂತೆ, ಹಾಗೂ ಗೋಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡುವಂತೆ ಪಶು ವೈದ್ಯಕೀಯ ಇಲಾಖೆಯ ಉಲ್ಲೇಖದಂತೆ, ನಗರಸಭೆ ಪೌರಾಯುಕ್ತರಿಗೆ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು,
ಬಸವಕಲ್ಯಾಣದಲ್ಲಿ ಸುಮಾರು 68 ಕ್ಕಿಂತ ಹೆಚ್ಚು ಬೀದಿ ಪಶುಗಳು ಇದ್ದವು ಆದರೆ ಈಗ ಅದರಲ್ಲಿ ಕೇವಲ ಕೆಲವೇ ಪಶುಗಳು ಮಾತ್ರ ಕಾಣುತ್ತಿವೆ. ಅದಕ್ಕಾಗಿ ನಗರ ಮತ್ತು ಗ್ರಾಮಗಳಲ್ಲಿ ಬರುವ ಎಲ್ಲಾ ಪಶುಗಳ ಕಿವಿಗೆ ಕಡ್ಡಾಯವಾಗಿ ಗುರುತಿನ ಟ್ಯಾಗ್ ಮಾಡುವ ಸಲುವಾಗಿ ಸಂಬಂಧಪಟ್ಟ ಪಶು ವೈದ್ಯಾಧಿಕಾರಿಗಳಿಂದ ತಮಗೆ ಪತ್ರ ಸಹ ಬಂದಿರುತ್ತದೆ, ಅದಕ್ಕಾಗಿ ತಾವುಗಳು ಬೀದಿ ಪಶುಗಳ ಕಿವಿಗೆ ಟ್ಯಾಗ ಹಾಕಿ ಗುರುತಿಸಿಕೊಳ್ಳಬೇಕು ಮತ್ತು ಗೋಶಾಲೆಗೆ ಕಳುಸುವಂತೆ ಡಂಗುರ ಸಾರಿ ಕಳುಹಿಸುವ ವ್ಯವಸ್ಥೆಯೂ ಮಾಡಬೇಕು ಸದರಿ ವಿಷಯದ ಬಗ್ಗೆ ಮನಗಂಡು ಗಮನಹರಿಸಿ ತಾವುಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಧರ್ಮಚಾರ್ಯ ಪ್ರಮುಖರಾದ ಹಾಗೂ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷರಾದ ಶ್ರೀಶೈಲ ವಾತಡೆ ಭಜರಂಗದಳ ಜಿಲ್ಲಾ ಸಹ ಸಂಯೋಜಕರಾದ ರವಿ ನಾವದ್ಗೇಕರ ಕಾರ್ಯದರ್ಶಿಗಳಾದ ಕಮಲಜೀತ ಸಿಂಗ ಚವ್ಹಾಣ ನಗರ ಅಧ್ಯಕ್ಷರಾದ ಪ್ರಕಾಶ ನಿರಾಳೆ ಧರ್ಮಚಾರ್ಯ ಪ್ರಖಂಡ ಪ್ರಮುಖರಾದ ಶಾಂತಿವೀರ ಸ್ವಾಮಿ ಗೋರಕ್ಷಾ ಪ್ರಮುಖರಾದ ಅಜಯ ಗೌವಳಿ ಸಂಜುಕುಮಾರ ದಳವೆ ಇನ್ನಿತರು ಭಾಗವಹಿಸಿದ್ದರು.
ವರದಿ ಶ್ರೀನಿವಾಸ ಬಿರಾದಾರ




















