ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಇಮಾಮ ಕಾಸಿಂ ಕಂದಗಲ್ಲರಿಂದ ಕಂದಗಲ್ಲ ಗ್ರಾಮದ ಕೀರ್ತಿ ಉತ್ತುಂಗಕ್ಕೆ.

ಇಲಕಲ್ಲ: ತಾಲೂಕಿನ ಕಂದಗಲ ಗ್ರಾಮದ ಇಮಾಮ ಕಾಸಿಂ ಕಂದಗಲ್ಲ ಸಾಹೇಬರು ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿದ್ದು ಕಲ್ಯಾಣ ಕರ್ನಾಟಕ ಸಾರಿಗೆ ರಾಯಚೂರು ವಿಭಾಗದ ಜಿಲ್ಲಾ ಅಧಿಕಾರಿಯಾಗಿ ಉನ್ನತ ಮಟ್ಟದ ಅಧಿಕಾರಿಗಳಾಗಿದ್ದಾರೆ ಅವರ ಸರಳ ಜೀವನ ಕಂದಗಲ್ಲ ಗ್ರಾಮದ ಜೂತೆ ಇರುವ ಅವರ ಭಾಂದವ್ಯ ಎಂದು ಮರೆಯಲಾಗದ ಅನುಭಂದ ಎಂದು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದಸಾಬ್ ಭಾವಿಕಟ್ಟಿ ಹೇಳಿದರು.
ಮ. ನಿ. ಪ್ರ. ಡಾ. ಚನ್ನಮಲ್ಲ ಮಹಾಸ್ವಾಮಿಗಳು ಸುವರ್ಣಗಿರಿ ಕಂದಗಲ್ಲ ಇವರ ಆಶೀರ್ವಾದದೊಂದಿಗೆ ಗ್ರಾಮದ ಶ್ರೀ ರುದ್ರುಸ್ವಾಮಿ ಮಠದಲ್ಲಿ ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರ ವತಿಯಿಂದ ನಡೆದ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷ ಮಹಾಂತೇಶ್ ಕಡಿವಾಲ ಸಮಾರಂಭ ಉದ್ದೇಶಿಸಿ ಮಾತನಾಡಿ ಇಲ್ಲಿವರೆಗೆ ಸಾರಿಗೆ ಇಲಾಖೆಯ ಹಲವಾರು ವಿಭಾಗಗಳಲ್ಲಿ ಉತ್ತಮ ಸೇವೆ ಸಲ್ಲಿಸಿ ಈಗ ಕಲ್ಯಾಣ ಕರ್ನಾಟಕ ಸಾರಿಗೆಯ ರಾಯಚೂರು ಜಿಲ್ಲಾ ಅಧಿಕಾರಿಗಳಾಗಿ ನೇಮಕಗೊಂಡು ನಮ್ಮ ಕಂದಗಲ್ಲ ಗ್ರಾಮದ ಕೀರ್ತಿಯನ್ನು ಹೆಚ್ಚಿಸಿ ಗ್ರಾಮದ ಹೆಮ್ಮೆಯ ಪುತ್ರನಾಗಿ ಹೊರಹೊಮ್ಮಿರುವುದು ಬಹಳ ಸಂತಸ ತಂದಿದೆ ಎಂದರು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಪಂಪಣ್ಣ ಸಜ್ಜನ ಮಾತನಾಡಿ ಇವರಿಂದ ಇನ್ನು ಹೆಚ್ಚಿನ ರೀತಿಯಲ್ಲಿ ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮ ಮತ್ತು ನಗರಗಳ ವಿದ್ಯಾರ್ಥಿಗಳಿಗೆ, ವ್ಯಾಪಾರಸ್ತರಿಗೆ, ರೈತರಿಗೆ ಸಾರ್ವಜನಿಕರಿಗೆ, ಸರಿಯಾದ ಸಾರಿಗೆ ವ್ಯವಸ್ಥೆ ಕಲ್ಪಿಸಿ ಅನುಕೂಲ ಕಲ್ಪಿಸಿಕೊಡಬೇಕು, ಇವರು ಪ್ರೊಫೆಸರ್ ಆಗಬೇಕು ಎಂಬ ಕನಸು ಹೊತ್ತವರು ಶಿಕ್ಷಣದ ಅಪಾರ ಕಾಳಜಿ ಹೊಂದಿರುವ ಇವರಿಂದ ನಮ್ಮ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಇವರ ಮಾರ್ಗದರ್ಶನ ಸದಾ ದೊರೆಯುತ್ತಿರಲಿ, ಶಿಕ್ಷಣಕ್ಕೆ ಇವರ ಕೊಡುಗೆ ಅಪಾರವಾಗಿದ್ದು ನಿಷ್ಠೆ ಪ್ರಾಮಾಣಿಕತೆ ಸೌಹಾರ್ದ ಜೀವನ್ ಇವರನ್ನು ಈ ಮಟ್ಟಕ್ಕೆ ತಲುಪಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆಯ ಜಿಲ್ಲಾ ಅಧಿಕಾರಿ ಇಮಾಮ ಕಾಸಿಂ ಕಂದಗಲ್ಲ, ಲಿಂಗಸಗೂರು ಘಟಕದ ಮುಖ್ಯ ವ್ಯವಸ್ಥಾಪಕ ಪಿ ಲಕ್ಷ್ಮಣ, ನಿವೃತ್ತ ನೌಕರ ವೀರಭದ್ರಪ್ಪ ಕತ್ತಿ, ಇವರುಗಳನ್ನು ಸತ್ಕರಿಸಲಾಯಿತು.
ಗ್ರಾಮದ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಮಂಜು ಜಂಗ್ಲಿ ಹಾಗೂ ಸರ್ವ ಸದಸ್ಯರು, ಹುನಗುಂದದ ಪಿರಸಾಬ ವಾಲಿಕಾರ ಹಾಗೂ ಸಿರಾಜ್ ವಾಲಿಕಾರ ಗ್ರಾಮದ ಹುಸೇನಸಾಬ ಸಿಂಗನಗುತ್ತಿ, ಯುವಕರಾದ ಮುರ್ತುಜ ವಾಲಿಕಾರ ಹಾಗೂ ಆಶೀಫ್ ವಾಲಿಕಾರರವರು, ಇದೆ ಸಂದರ್ಭದಲ್ಲಿ ಇಮಾಮ ಕಾಸಿಂ ಕಂದಗಲ್ಲ ರವರನ್ನು ಸನ್ಮಾನಿಸಿದರು.
ಗ್ರಾಮದ ಹಿರಿಯರಾದ ಈರಪ್ಪ ಅಳ್ಳೊಳ್ಳಿ ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚನ್ನಪ್ಪ ಜಾಲಿಹಾಳ, ಡಾ ಮಲ್ಲಿಕಾರ್ಜುನ ಗಡಿಯನ್ನವರ, ಅಬ್ದುಲಸಾಬ ಎಲಿಗಾರ, ಬಸವರಾಜ್ ದಿವಾಣದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಗುರುಬಸವ ವಿದ್ಯಾ ಸಂಸ್ಥೆಯ ಸಂಗಣ್ಣ ಹವಾಲ್ದಾರ, ಬಸ್ಸಿನ ಹೊಸ ಮಾರ್ಗಗಳ ಮನವಿ ಪತ್ರ ಸಲ್ಲಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಅಧಿಕಾರಿಗಳಾದ ಇಮಾಮ ಕಾಸಿಂ ಕಂದಗಲ್ಲರವರು ಕಂದಗಲ್ಲ ಗ್ರಾಮದಲ್ಲಿ ಹುಟ್ಟಿದ್ದು ನನ್ನ ಪುಣ್ಯ ಭವ್ಯವಾದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮದಲ್ಲಿ ಉನ್ನತ ಮಟ್ಟದ ಹುದ್ದೆಗಳನ್ನು ನಮ್ಮ ಕಂದಗಲ್ಲ ಗ್ರಾಮದವರು ಅಲಂಕರಿಸಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ಲಿಂಗಸುಗೂರು ಘಟಕದ ಮುಖ್ಯ ವ್ಯವಸ್ಥಾಪಕರು ಪಿ. ಲಕ್ಷ್ಮಣ ಮಾತನಾಡಿ ನನ್ನ ಸೇವೆಯಲ್ಲಿ ಇದು ಮರೆಯಲಾಗದ ಕ್ಷಣ ಕಂದಗಲ್ಲ ಗ್ರಾಮವನ್ನು ನಾನು ಸದಾ ನೆನಪಿನಲ್ಲಿ ಇಟ್ಟುಕೊಂಡಿರುತ್ತೇನೆ, ಗ್ರಾಮಕ್ಕೆ ನನ್ನಿಂದ ಏನು ಸಾಧ್ಯವಿದೆಯೋ ಅದನ್ನು ಪ್ರಾಮಾಣಿಕವಾಗಿ ಮಾಡಿಕೊಡುತ್ತೇನೆ ಎಂದರು.
ಗ್ರಾಮದ ಅಮರಪ್ಪ ಹಡಪದ, ಲಕ್ಷ್ಮಣ ಗಂಗಾಮತ, ಮಂಜುನಾಥ್ ಕಡಿವಾಲ, ಕರಿಯಪ್ಪ ಮುದಗಲ್ಲ,
ಶಂಕರ ಕಾಳಿ ಪ್ರಸಾದ, ಭಾಷಾಸಾಬ ಬಲಕುಂದಿ, ಅಬ್ದುಲ ಮೇಸ್ತ್ರಿ ಬಲಕುಂದಿ, ಶಂಕರ ಶಿಂಪಿ, ಲಿಂಗರಾಜ ಶಿರಗುಂಪಿ ಸೇರಿದಂತೆ ಅಪಾರ ಸಂಖ್ಯೆಯ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗಾಯಕ ಹುಸೇನ್ ಬಲಕುಂದಿ ಪ್ರಾರ್ಥನೆ ಸಲ್ಲಿಸಿದರು. ಪತ್ರಕರ್ತ ವೀರೇಶ್ ಶಿಂಪಿ ಸ್ವಾಗತಿಸಿದರು.
ರಾಜು ಪರಾಸರ ಕಾರ್ಯಕ್ರಮ ನಿರೂಪಿಸಿದರು. ಕನಕಪ್ಪ ಕನಕೇರಿ ವಂದಿಸಿದರು.

  • ಕರುನಾಡ ಕಂದ ಸುದ್ದಿ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!