ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಘಟಕವು ಪತ್ರಿಕಾ ದಿನಾಚರಣೆ ಅಂಗವಾಗಿ ಪ್ರಬಂಧ ಸ್ಪರ್ಧೆ ಆಯೋಜನೆ ಮಾಡಿದೆ.
‘ಮಲೆನಾಡಿನ ತಲ್ಲಣಗಳು’ ಎಂಬ ವಿಷಯ ಕುರಿತು ಶಿವಮೊಗ್ಗ ನಗರದ ಯಾವುದೇ ಕಾಲೇಜು ವಿದ್ಯಾರ್ಥಿಗಳು ಪ್ರಬಂಧ ಬರೆಯಬಹುದು. ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡ ಮೊದಲ ಮೂರು ಸ್ಥಾನ ಪಡೆದವರಿಗೆ ನಗದು ಪುರಸ್ಕಾರ ಹಾಗೂ ಹತ್ತು ಜನರಿಗೆ ಸಮಾಧಾನಕರ ಬಹುಮಾನವಾಗಿ ಪುಸ್ತಕಗಳ ಉಡುಗೊರೆ ನೀಡಲಾಗುವುದು.
1250-1500 ಪದಗಳಿಗೆ ಮೀರದಂತೆ ಪ್ರಬಂಧವನ್ನು ನುಡಿ ಅಥವಾ ಯುನಿಕೋಡ್ ನಲ್ಲಿ ಬರೆದು ಈ ಮೇಲ್ ಮಾಡಬಹುದು.
ಎ-4 ಪೇಪರ್‌ನ ಒಂದೇ ಭಾಗದಲ್ಲಿ ಬರೆದು ಕಳಿಸಬಹುದು. ಪ್ರಬಂಧ ಕಳಿಸಬೇಕಾದ ಈ- ಮೇಲ್: smgkuwj@gamil.com ಅಥವಾ, ಆರ್.ಟಿ.ಓ.ಕಚೇರಿ ರಸ್ತೆಯಲ್ಲಿನ ಪತ್ರಿಕಾ ಭವನದ ಮೊದಲ ಮಹಡಿಯಲ್ಲಿರುವ ಪತ್ರಕರ್ತರ ಸಂಘಕ್ಕೆ ತಲುಪಿಸಬಹುದು. ಪ್ರಬಂಧ ಕಳಿಸಲು ಕೊನೆಯ ದಿನಾಂಕ 25- ಜುಲೈ 2026.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9448138183, 9448681555.
ವರದಿ: ಕೊಡಕ್ಕಲ್ ಶಿವಪ್ರಸಾದ್




















