ಶಿವಮೊಗ್ಗ: ನಗರದ ನೆಹರೂ ಕ್ರೀಡಾಂಗಣದಲ್ಲಿ ಸ್ಟೈಲ್ ಡ್ಯಾನ್ಸ್ ಗ್ರೂಪ್ ಆಯೋಜಿಸಿದ್ದ ವಿಶ್ವದಾಖಲೆಯ ನೃತ್ಯ ಪ್ರದರ್ಶನ ಅದ್ಧೂರಿಯಾಗಿ ನಡೆಯಿತು.
ಸಂಸ್ಥೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ನಿರಂತರವಾಗಿ 2 ಗಂಟೆ 8 ಸೆಕೆಂಡ್‌ಗಳ ಕಾಲ ನೃತ್ಯ ಪ್ರದರ್ಶಿಸುವ ಮೂಲಕ ನೋಬಲ್ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ನಿರ್ಮಿಸಿದ್ದಾರೆ.
ಈ ವಿಶ್ವದಾಖಲೆ ಪ್ರಯತ್ನಕ್ಕಾಗಿ ಹಲವು ದಿನಗಳಿಂದ ವಿದ್ಯಾರ್ಥಿಗಳು ಕಠಿಣ ಅಭ್ಯಾಸ ನಡೆಸಿದ್ದರು ಎಂದು ಸಂಸ್ಥೆಯ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ವಿವಿಧ ಶೈಲಿಯ ನೃತ್ಯಗಳನ್ನು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.
ಕ್ರೀಡಾಂಗಣದಲ್ಲಿ ಪೋಷಕರು, ನೃತ್ಯಾಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಂಡವನ್ನು ಹುರಿದುಂಬಿಸಿದರು.
ಕಾಯ೯ಕ್ರಮದಲ್ಲಿ ಶಾಸಕ ಧನಂಜಯ ಸರ್ಜಿ, ಉಪಾಧ್ಯಕ್ಷ ಈ ವಿಶ್ವಾಸ್ , ಕಾಯ೯ದಶಿ೯ ಸಿಂಪ್ಲೆಕ್ಸ್ ರಮೇಶ್ , ಯುವ ನಾಯಕರಾದ ಶರತ್ ಮರಿಯಪ್ಪ ,ಕನ್ನಡ ಮತ್ತು ಸ೦ಸ್ಕೃತಿ ಇಲಾಖೆ ನಿದೇ೯ಶಕ ಉಮೇಶ್ , ಕ್ರೀಡಾ ಇಲಾಖೆ ನಿದೇ೯ಶಕ ರೇಖ್ಯಾ ನಾಯಕ್, ನೊಬಲ್ ವಡ್೯ ರೆಕಾಡ್೯ ಸ೦ಸ್ಥೆಯ ಜಿಲ್ಲಾ ನಿದೇ೯ಶಕರಾದ ಎಸ್ ಕೃಷ್ಣಮೂತಿ೯ ಮತ್ತು ನೃತ್ಯ ಸ೦ಸ್ಥೆಯ ಮುಖ್ಯಸ್ಥರಾದ ಶಶಿಕುಮಾರ್ , ನೃತ್ಯ ಸ೦ಸ್ಥೆಯ ವ್ಯವಸ್ಥಾಪಕರಾದ ವಿನಯ್ , ನೃತ್ಯ ನಿದೇ೯ಶಕರಾದ ಸೃಜನ್ ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















