ಜಮಖಂಡಿ: ರೋಟರಿ ಅಧ್ಯಕ್ಷ ಸ್ಥಾನ ಅಧಿಕಾರವಲ್ಲ. ಬದಲಾಗಿ ಅದೊಂದು ಜವಾಬ್ದಾರಿ. ಸಂಸ್ಥೆಯಲ್ಲಿ ಹೊಸತನ ಬರಬೇಕು ಎಂಬ ಉದ್ದೇಶದಿಂದ ವರ್ಷಕ್ಕೊಮ್ಮೆ ಅಧಿಕಾರ ಹಸ್ತಾಂತರ ನೆರವೇರಿಸಲಾಗುತ್ತದೆ ಎಂದು ಹುಬ್ಬಳ್ಳಿ ಮಿಡ್‌ಟೌನ್ ರೋಟರಿ ಸಂಸ್ಥೆಯ ಡಿಜಿಎನ್ ವಾಸುಕಿ ಸಂಜಿ ಹೇಳಿದರು.
ಇಲ್ಲಿನ ಮೈಗೂರ ರಸ್ತೆ ಪಕ್ಕದ ಪಂಚಮಸಾಲಿ ಸಮುದಾಯ ಭವನದಲ್ಲಿ ಭಾನುವಾರ ಸಂಜೆ ನಡೆದ ಜಮಖಂಡಿ ರೋಟರಿ ಹಾಗೂ ಇನ್ನರ್‌ವ್ಹೀಲ್ ಸಂಸ್ಥೆಗಳ ೨೦೨೬-೨೭ನೇ ಸಾಲಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ರೋಟರಿ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಅವರು ಮಾತನಾಡಿದರು.
ರೋಟರಿ ಸಂಸ್ಥೆಯ ಅಡಿಯಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸಬೇಕಾದರೆ ಅಧ್ಯಕ್ಷರ ಇಚ್ಛಾಶಕ್ತಿ ಹಾಗೂ ಶ್ರದ್ಧೆ ಅಗತ್ಯವಿದೆ. ಎಲ್ಲವೂ ನನ್ನಿಂದಲೆ ಆಗುತ್ತದೆ ಎಂಬ ಮನೋಭಾವ ಸರಿಯಲ್ಲ. ಆಸಕ್ತಿವುಳ್ಳವರಿಗೆ ಕೆಲಸಗಳ ಹಂಚಿಕೆ ಮಾಡಬೇಕು ಎಂದರು.
ಹುಬ್ಬಳ್ಳಿ ಸೆಂಟ್ರಲ್ ಇನ್ ಕಂ ಟ್ಯಾಕ್ಸ್ ಡಿಸಿಸಿ ರಾಜೇಶ್ವರಿ ವಾಸುಕಿ ಇನ್ನರ್‌ವ್ಹೀಲ್ ಸಂಸ್ಥೆಯ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಮಾತನಾಡಿ, ಇನ್ನರ್‌ವ್ಹೀಲ್ ಸಂಸ್ಥೆಯನ್ನು ಸ್ನೇಹತ್ವದ ಅಡಿಪಾಯದ ಮೇಲೆ ಕಟ್ಟಲಾಗಿದೆ. ಹಿಂದಿನ ಸಾಧನೆಗಳನ್ನು ಮೆಲಕು ಹಾಕಿ ಮುಂದಿನ ಯೋಜನೆಗಳ ರೂಪುರೇಷೆ ಹಾಕಿಕೊಳ್ಳುವುದು ಅಧಿಕಾರ ಹಸ್ತಾಂತರ ಸಮಾರಂಭದ ಮೂಲ ಧ್ಯೇಯವಾಗಿದೆ ಎಂದರು.
ರೋಟರಿ ಜಿಲ್ಲೆ ೩೧೭೦ದ ಸಹಾಯಕ ಗವರ್ನರ್ ಕಿರಣ ಜಾಲಿಹಾಳ ಮುಖ್ಯ ಅತಿಥಿಯಾಗಿ ಮಾತನಾಡಿ, ಸಮಾಜದ ಬೇಕುಬೇಡಗಳನ್ನು ಆಧರಿಸಿ ಶಾಶ್ವತ ಪರಿಣಾಮ ಉಂಟು ಮಾಡುವ ಯೋಜನೆಗಳನ್ನು ಹಾಕಿಕೊಳ್ಳಬೇಕು. ಆಗಾಗ ಪರಿಣಾಮಗಳ ಅವಲೋಕನ ಮಾಡುತ್ತಿರಬೇಕು ಎಂದರು.
ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಶ್ರೀಧರ ಕಾಖಂಡಕಿ ಅಧಿಕಾರ ಸ್ವೀಕರಿಸಿ ಮಾತನಾಡಿ, ರೋಟರಿ ಸಂಸ್ಥೆಯ ಅಂತಾರಾಷ್ಟ್ರೀಯ ಧನ ಸಹಾಯದೊಂದಿಗೆ ಜಮಖಂಡಿಯಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯುವ ಉದ್ದೇಶ ಹೊಂದಲಾಗಿದೆ ಎಂದರು.
ನಿರ್ಗಮಿತ ಅಧ್ಯಕ್ಷ ರಾಜಶೇಖರ ಕೋವಳ್ಳಿ, ನಿರ್ಗಮಿತ ಅಧ್ಯಕ್ಷೆ ಗಿರಿಜಾ ಮೈತ್ರಿ ಸ್ವಾಗತಿಸಿದರು. ಕಿರಣ ದೇಸಾಯಿ, ರಶ್ಮಿ ದೇಸಾಯಿ, ಚಂದ್ರಗುಪ್ತ ಬೆಳಗಲಿ ಅತಿಥಿಗಳನ್ನು ಪರಿಚಯಿಸಿದರು. ಮೇಘಾ ಮಹಾಬಳಶೆಟ್ಟಿ, ಎಂ.ಎಚ್. ಕಡ್ಲಿಮಟ್ಟಿ ವರದಿ ವಾಚನ ಮಾಡಿದರು.
ಜ್ಯೋತಿ ದೇವರಡ್ಡಿ, ಸವಿತಾ ಸನದಿ, ಆರ್.ಪಿ. ನ್ಯಾಮಗೌಡ, ಮಲ್ಲಪ್ಪ ಬುಜರುಕ, ಡಾ.ಜಿ.ಎನ್. ಸನದಿ ನೂತನ ಪದಾಧಿಕಾರಿಗಳು, ನೂತನ ಸದಸ್ಯರನ್ನು ಪರಿಚಯಿಸಿದರು.
ಪಿ.ಡಿ. ಗೌಡರ, ಮಧುಮತಿ ಗೌಡರ, ಡಾ.ಮಾಳೇಶ ಪೂಜಾರ, ಮಹಾನಂದಾ ಡೂಗನವರ ನಿರೂಪಿಸಿದರು. ನೂತನ ಕಾರ್ಯದರ್ಶಿ ಸಂತೋಷ ಹಿರೇಮಠ ವಂದಿಸಿದರು.
ರೋಟರಿ ಸಂಸ್ಥೆಯ ಪದಾಧಿಕಾರಿಗಳು:
ಶ್ರೀಧರ ಕಾಖಂಡಕಿ(ಅಧ್ಯಕ್ಷ), ವಿವೇಕಾನಂದ ಮಹಾಬಳಶೆಟ್ಟಿ, ಚಂದ್ರಗುಪ್ತ ಬೆಳಗಲಿ(ಇಬ್ಬರೂ ಉಪಾಧ್ಯಕ್ಷರು), ಸಂತೋಷ ಹಿರೇಮಠ(ಕಾರ್ಯದರ್ಶಿ), ಗುರುರಾಜ ಬಿರಾದಾರ(ಸಹಕಾರ್ಯದರ್ಶಿ), ಮಹಾದೇವ ಕಂಕಾಳೆ(ಖಜಾಂಚಿ), ಮೋಹನ ದಡೂತಿ (ಸಹ ಖಜಾಂಚಿ), ರಾಜಶೇಖರ ಕೋವಳ್ಳಿ(ನಿರ್ಗಮಿತ ಅಧ್ಯಕ್ಷ), ಚನ್ನಪ್ಪ ಬಿರಾದಾರ(೨೦೨೭-೨೮ರ ಅಧ್ಯಕ್ಷ).
ಗೋಪಾಲಕೃಷ್ಣ ಪ್ರಭು, ಡಿ.ಎಸ್. ನೀಲಗುಂದ, ಬಸವರಾಜ ಬಳಗಾರ, ಶ್ರೀಶೈಲ ತೇಲಿ, ಮಹೇಶ ಪಾಟೀಲ, ಬಸವರಾಜ ಮುರಗೋಡ, ಮಲ್ಲಿಕಾರ್ಜುನ ಹಲಗಲಿ, ಎಸ್.ವೈ. ಬಿರಾದಾರ, ಡಾ.ಜಿ.ಎನ್. ಸನದಿ, ಪ್ರವೀಣ ಝಾಡ, ಕಿರಣ ದೇಸಾಯಿ, ಆರ್.ಪಿ. ನ್ಯಾಮಗೌಡ, ರಮೇಶ ಪಾಟೀಲ, ಬಸವರಾಜ ಆಲಗೂರ (ಎಲ್ಲರೂ ನಿರ್ದೇಶಕರು).
ಇನ್ನರ್‌ವ್ಹೀಲ್ ಸಂಸ್ಥೆಯ ಪದಾಧಿಕಾರಿಗಳು: ಅರ್ಚನಾ ಕಾಖಂಡಕಿ(ಅಧ್ಯಕ್ಷರು), ಹರ್ಷಾ ಪ್ರಭು(ಕಾರ್ಯದರ್ಶಿ), ಶಿಲ್ಪಾ ಪಾಟೀಲ(ಖಜಾಂಚಿ), ರೂಪಾಲಿ ಕೊಕಟನೂರ(ಐಎಸ್‌ಒ), ಉಷಾ ರುದ್ರಸ್ವಾಮಿಮಠ(ಎಡಿಟರ್), ರೋಹಿಣಿ ಉದಪುಡಿ(ಸಿಎಲ್‌ಸಿಸಿ), ಮಹಾನಂದಾ ಡೂಗನವರ)(ಸಿಸಿಸಿಸಿ).
- ಕರುನಾಡ ಕಂದ ಸುದ್ದಿ




















