ಗದಗ ಇಲ್ಲಿಯ ಸಮಿಪದ ತಿಮ್ಮಾಪೂರ ಗ್ರಾಮದ ಶ್ರೀ ಕರಿಯಮ್ಮ ದೇವಿ ಸಮುದಾಯ ಭವನದಲ್ಲಿ ನಡೆದ ಕೃಷಿ ಇಲಾಖೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆಯಡಿಯಲ್ಲಿ ಡೆಮೋ ಪ್ರಾಯೋಗಿಕ ಜೋಳ ಹಾಗೂ ತರಕಾರಿ ಬೀಜಗಳ ಕಿರುಚೀಲ ವಿತರಣಾ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗದಗ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ ಉದ್ಘಾಟಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೃಷಿ ಇಲಾಖೆ ಅಧಿಕಾರಿ ವೀರಣ್ಣ ಗಡಾದ ರೈತರಿಗೆ ಬೀಜಗಳನ್ನು ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಯೋಜನೆಯಡಿಯಲ್ಲಿ ಡೆಮೋ ಪ್ರಾಯೋಗಿಕ ಹೊಸ ತಳಿ ಪುಲೆ ರೇವತಿ ಜೋಳದ ಬೀಜಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ ರೈತರು ಈ ಬೀಜಗಳನ್ನು ಪಡೆದುಕೊಂಡು ಬೀತನೆ ಮಾಡಿ ಉತ್ತಮ ಇಳುವರಿಯನ್ನು ಪಡೆಯಬಹುದು ಎಂದು ಹೇಳಿದರು.
ಈ ಫುಲೆ ರೇವತಿ ಜೋಳದ ಬೀಜ ಮಹಾರಾಷ್ಟ್ರ ಮೂಲದ್ದು ಪ್ರತ್ಯೇಕವಾಗಿ ನಮ್ಮ ಜಿಲ್ಲೆಯಲ್ಲಿ ಪ್ರಯೋಗ ಮಾಡಲು ಯೆರೆ ಭಾಗದ ತಿಮ್ಮಾಪೂರ ಗ್ರಾಮವನ್ನು ಆಯ್ಕೆ ಮಾಡಲಾಗಿ 30 ಜನ ರೈತರಿಗೆ ಜೋಳ ಹಾಗೂ ತರಕಾರಿ ಬೀಜಗಳನ್ನು ವಿತರಣೆ ಮಾಡಲಾಗಿದೆ ಆಸಕ್ತ ರೈತರು ಈ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಪಡೆದುಕೊಂಡು ಬೀತನೆ ಮಾಡಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಲಾನಯನ ಇಲಾಖೆ ಸಿಬ್ಬಂದಿಗಳು ವಿನಯ ಕುಮಾರ್ ಬಂಟಗೌಡ್ರ ಹಾಗೂ ಶಿವಾನಂದ ಯಡಿಯಾಪುರ ಹಾಗೂ ರೈತರಾದ ಅಶೋಕ ಕಂಕರಿ, ಶೆರಣಪ್ಪ ಜೋಗಿನ, ರಾಮಪ್ಪ ಹಚ್ಚಪ್ಪನವರ, ಶ್ರೀಕಾಂತ ಪೂಜಾರ, ರಾಮಣ್ಣ ಖಂಡ್ರಿ, ಯಲ್ಲಪ್ಪ ಮುಸಿಗೇರಿ, ಶೆರಣಪ್ಪ ಮುಲಿಮನಿ, ಮಂಜುನಾಥ ಮಾಳಗುಡರ, ಹನುಮಪ್ಪ ಸಾಲಿ, ಶೇಖಪ್ಪ ಘಂಟಿ, ಮುತ್ತಪ್ಪ ಉಳಗೇರ, ಹಾಗೂ ಇನ್ನೂ ಮುಂತಾದ ರೈತರು ಪಾಲ್ಗೊಂಡಿದ್ದರು.