ಕೊಪ್ಪಳ:ರಾಯಚೂರು ಬಳ್ಳಾರಿ ಕೊಪ್ಪಳ ವಿಜಯನಗರ ಜಿಲ್ಲೆಯ ಹಾಲು ಒಕ್ಕೂಟಗಳ ಕೊಪ್ಪಳ ಜಿಲ್ಲೆಯ ಹಾಗೂ ತಾಲೂಕುಗಳ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಸಂಘದ ಸದಸ್ಯರೊಂದಿಗೆ ಗವಿಸಿದ್ದೇಶ್ವರ ಅವರಣದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ಪ್ರತಿಭಟನೆ ಮಾಡುತ್ತಾ ಪ್ರತಿ ಲೀಟರ್ ಗೆ 5ರೂ, ಹೆಚ್ಚಿಸಲು ಮಾನ್ಯ ಮುಖ್ಯಮಂತ್ರಿಗಳಿಗೆ ಜಿಲ್ಲೆ ಅಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು. ನಂತರ ಮಾತನಾಡಿದ ಒಕ್ಕೂಟದ ಮಾಜಿ ಅಧ್ಯಕ್ಷರು /ನಿರ್ದೇಶಕರಾದ ಎನ್ ಸತ್ಯನಾರಾಯಣನವರು ಮಾತನಾಡಿ ಸರಕಾರವು ರೈತರಿಗೆ ನಾಲಿಗೆ ತುಪ್ಪ ಸವರುತ್ತದೆ ಕಳೆದ ಮೂರು ತಿಂಗಳಿಂದ ಹಾಲಿನ ದರ ಪ್ರತಿ ಲೀಟರ್ ಗೆ ಮೂರು ರೂಪಾಯಿ ಹೆಚ್ಚಿಗೆ ಮಾಡುವುದಾಗಿ ಹೇಳಿ ಇದುವರೆಗೂ ದರ ನೀಡಿಲ್ಲ ಮತ್ತು ಪಶು ಆಹಾರ ದರ 130 ಹೆಚ್ಚಿಸಿದೆ ಆದರೆ ಹಾಲಿನ ದರ ಹೆಚ್ಚಿಗೆ ಮಾಡಿಲ್ಲ ಅದರಿಂದ ಕೂಡಲೇ ಹಾಲಿನ ದರ ಹೆಚ್ಚಿಸಬೇಕು ಹೆಚ್ಚಿಸದಿದ್ದರೆ ಮುಂದಿನ ಉಗ್ರ ಹೋರಾಟ ಮಾಡಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಅಧ್ಯಕ್ಷರು ಸದಸ್ಯರು ಕಾರ್ಯದರ್ಶಿಗಳು, ಒಕ್ಕೂಟದ ನಿರ್ದೇಶಕರುಗಳು ಭಾಗಿಯಾಗಿದ್ದರು.
