ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕು ಗುಡಗುಂಟಾ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಟಣಮನಕಲ್ ಗ್ರಾಮದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿಯನ್ನು ಪರಮಪೂಜ್ಯ ವರದಾನೇಶ್ವರ ಮಹಾಸ್ವಾಮಿಗಳು ಗೋಲಪಲ್ಲಿ ಆಶ್ರಮ ಹಾಗೂ ಗುಂತಗಲ್ ಸಂಸ್ಥಾನದ ದೊರೆಗಳಾದ ಸನ್ಮಾನ್ಯ ಶ್ರೀ ರಾಜಾ ಶ್ರೀನಿವಾಸ ನಾಯಕರು ಹಾಗೂ ಗುಡಗುಂಟಾ ಸಂಸ್ಥಾನದ ದೊರೆಗಳಾದ ಸನ್ಮಾನ್ಯ ಶ್ರೀ ಸೋಮನಾಥ ನಾಯಕರು ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರಾದ ಸನ್ಮಾನ್ಯ ಶ್ರೀ ನಾಗಪ್ಪ ಡಿ. ವಜ್ಜಲರು ತಮ್ಮ ಅಮೃತ ಹಸ್ತದಿಂದ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಉಸುಕಿನ ಚೀಲ ಮತ್ತು ಗುಂಡು ಎತ್ತುವ ಸ್ಪರ್ಧೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ವಾಲ್ಮೀಕಿ ಸಮಾಜದ ತಾಲೂಕ ಅಧ್ಯಕ್ಷರಾದ ಶ್ರೀ ದ್ಯಾಮಣ್ಣ ನಾಯಕ್ ಪೂಲಭಾವಿ, ಗಜೇಂದ್ರ ನಾಯಕ್,ನಂದೀಶ್ ನಾಯಕ,ಹುಲಗಪ್ಪ,ಕರಿಯಪ್ಪ,ದುರಗಪ್ಪಗೌಡ ದಳಪತಿ,ನಿಂಗಣ್ಣ,ನಂದಪ್ಪ,ಮುದುಕಪ್ಪ ,ಭೀಮಣ್ಣ,ದುರಗಪ್ಪ ಸೇರಿದಂತೆ ಪಕ್ಷದ ಹಿರಿಯ ಮುಖಂಡರು ಹಾಗೂ ಸಮಾಜದ ಹಿರಿಯರು ಉಪಸ್ಥಿತರಿದ್ದರು.
ವರದಿಗಾರ:ರವಿಕುಮಾರ್ ಪಾಟೀಲ್
