ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕು ಕರಾವಳಿ ಭಾಗದ ಜಿಲ್ಲೆಗಳಿಗೆ ತೆರಳುವವರಿಗೆ ಹೆಬ್ಬಾಗಿಲು ಇದ್ದಂತೆ ಆದರೆ ಹುಬ್ಬಳ್ಳಿ ಮಾರ್ಗವಾಗಿ ಬರುವ ದ್ವಿಚಕ್ರವಾಹನ/ಕಾರು/ಲಾರಿ ಸವಾರರಿಗೆ ಬಾಚನಕಿ ಗ್ರಾಮದ ಸೇತುವೆ ಬಳಿ ಬಿದ್ದಿರುವ ರಸ್ತೆಗುಂಡಿಗಳು ವಿಶೇಷವಾಗಿ ಮುಂಡಗೋಡ ದೈವಜ್ಞ ಕಲ್ಯಾಣ ಮಂಟಪದ ಎದುರಿಗಿರುವ ಈ ರಸ್ತೆ ಗುಂಡಿಯಂತೂ ಬಲಿಗಾಗಿ ಬಾಯ್ತೆರೆದು ಕುಳಿತಂತಿದೆ ಪ್ರತಿನಿತ್ಯ ಸಾವಿರಾರು ವಾಹನಗಳು ಈ ಮಾರ್ಗವಾಗಿ ಸಂಚರಿಸುತ್ತವೆ ಹಾಗೆಯೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೂಡಾ ಸಮೀಪದಲ್ಲಿ ಇರುವುದರಿಂದ ಈ ಮಾರ್ಗವಾಗಿ ಸಾಗುವ ವಿಧ್ಯಾರ್ಥಿಗಳ ಪಾಲಿಗಂತೂ ಈ ರಸ್ತೆ ಗುಂಡಿ ಮಾರಕವಾಗಿದೆ, ಕೆಲ ದಿನಗಳ ಹಿಂದೆ ಹಿರಿಯ ನಾಗರಿಕರೊಬ್ಬರು ರಸ್ತೆಗುಂಡಿಯಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ವಿಪರೀತ ಗಾಯ ಮಾಡಿಕೊಂಡಿದ್ದರು. ಜನಪ್ರತಿನಿಧಿಗಳು, ಅಧಿಕಾರಿಗಳು ಪ್ರತಿನಿತ್ಯ ಸಂಚರಿಸುವ ಈ ಮಾರ್ಗದಲ್ಲಿ ಜ್ವಲಂತ ಸಮಸ್ಯೆಯಾಗಿ ಪರಿಣಮಿಸಿರುವ ಈ ರಸ್ತೆ ಗುಂಡಿಗಳಿಂದ ಗಂಭೀರ ಅಫಘಾತಗಳು ಆಗುವ ಮುಂಚೆಯೇ ಪರಿಹಾರ ನೀಡುತ್ತಾರೋ ಇಲ್ಲವೋ? ಅನ್ನೋದನ್ನ ಕಾದು ನೋಡಬೇಕಿದೆ.
ವರದಿ: ಶಿವರಾಜ್ ಶಿರಾಲಿ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.