ಬಾರ್ ಹಾಗೂ ಅನುಮತಿ ಪಡೆದ ರೆಸ್ಟೋರೆಂಟ್ ಗಳಲ್ಲಿ ಮಾತ್ರ ಮದ್ಯ ಮಾರಾಟಕ್ಕೆ ಅವಕಾಶವಿರುತ್ತದೆ ಆದರೆ ಮುಂಡಗೋಡ ತಾಲೂಕಿನಲ್ಲಿನ ಚಿತ್ರಣವೇ ಬೇರೆ
ಜನನಿಬಿಡ ಪ್ರದೇಶಗಳಲ್ಲಿ ಬಹಿರಂಗವಾಗಿಯೇ ಮದ್ಯ ಮಾರಾಟ ಮಾಡಲಾಗುತ್ತಿದೆ ಇದನ್ನು ಪ್ರಶ್ನೆ ಮಾಡಿ ತಡೆಯಬೇಕಾದ ಸಂಬಂಧ ಪಟ್ಟ ಇಲಾಖೆ ಯವರಂತೂ ಜಾಣ ನಿದ್ರೆಗೆ ಜಾರಿರುವುದು ವಿಪರ್ಯಾಸ.
ಮದ್ಯ ಮಾರಾಟ ಮಾಡುವವರಿಗೆ ಸರ್ಕಾರ ಕೆಲ ನಿಯಮಾವಳಿಗಳ ಪ್ರಕಾರ ಷರತ್ತುಬದ್ಧ ವಾಗಿ ಲೈಸೆನ್ಸ್ ನೀಡಿರುತ್ತದೆ ಆದರೆ ಮುಂಡಗೋಡ ಪಟ್ಟಣದ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಕಿರಾಣಿ ಅಂಗಡಿಯಲ್ಲೂ ಮದ್ಯ ಮಾರಾಟ ಮಾಡಲಾಗುತ್ತಿದೆ.
ಜವಾಬ್ದಾರಿಯುತ ಸಮಾಜ ನಿರ್ಮಾಣ ಮಾಡಬೇಕಾದ ಈಗಿನ ಕಾಲಘಟ್ಟದಲ್ಲಿ ಈ ರೀತಿಯಾಗಿ ಮದ್ಯ ಎಲ್ಲಿ ಬೇಕೆಂದರಲ್ಲಿ ಸಿಗುವಂತೆ ಮಾಡಿದರೆ ಯುವಕರು ಜವಾಬ್ದಾರಿ ಮರೆತು ಕುಡಿತಕ್ಕೆ ದಾಸರಾಗಿ ಅಧಃಪತನ ಆಗುವ ಅಪಾಯ ಭವಿಷ್ಯದಲ್ಲಿ ಇದ್ದೇ ಇದೆ ಇನ್ನಾದರೂ ಸಂಬಂಧ ಪಟ್ಟ ಇಲಾಖೆಗಳು ಕ್ರಮ ಕೈಗೊಳ್ಳುವರೆ ಎಂಬುದನ್ನು ಕಾದು ನೋಡಬೇಕಿದೆ.
-ಕರುನಾಡ ಕಂದ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.