ಅಥಣಿ: ಶ್ರೀ ಭಾರತಮಾತಾ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪಿಯುಸಿ ವರ್ಗದ ವಿದ್ಯಾರ್ಥಿಗಳಿಗೆ ಮಾನ್ಯ ಉಪನಿರ್ದೇಶಕರು ಸೂಚಿಸಿದ ಅನ್ವಯ ಶಾಲಾ ಸಂಸತ್ತು ಅಡಿಯಲ್ಲಿ ಸಂಸತ್ತು ಅಣುಕು ಪ್ರದರ್ಶನವನ್ನು ಕೈಗೊಳ್ಳಲಾಯಿತು ಕಾಲೇಜಿನ ಪ್ರಾಚಾರ್ಯರಾದ ಶ್ರೀ ಏ ಎಸ್ ಗಸ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಲ್ಲಿ ಶಾಲಾಮಟ್ಟದಲ್ಲಿಯೇ ಸಂಸತ್ತಿನಲ್ಲಿ ನಡೆಯುವಂತಹ ಕಾರ್ಯಕಲಾಪಗಳ ಬಗ್ಗೆ ತಿಳಿದುಕೊಳ್ಳುವುದು ಇವತ್ತು ಅನಿವಾರ್ಯವಾಗಿದೆ ಆ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ಈ ಒಂದು ಕಾರ್ಯಕ್ರಮ ಹಮ್ಮಿಕೊಂಡಿದ್ದು ತುಂಬಾ ಸಂತೋಷವೆನಿಸುತ್ತದೆ ಎಂದು ಹೇಳಿದರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿ ಪ್ರೌಢಶಾಲಾ ವಿಭಾಗದ ಸಹಶಿಕ್ಷಕರು ಹಾಗೂ ಕಾಲೇಜು ವಿಭಾಗದ ಉಪನ್ಯಾಸಕರು ಮತ್ತು ಈ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ನಿರೂಪಿಸಿ ಸಂಸತ್ತು ಅಣುಕು ಪ್ರದರ್ಶನದ ಜವಾಬ್ದಾರಿಯನ್ನು ನಿರ್ವಹಿಸಿದ ರಾಜ್ಯಶಾಸ್ತ್ರದ ಉಪನ್ಯಾಸಕರಾದ ಶ್ರೀ ಎಸ್ ಹೆಚ್ ಮ್ಯಾಗೇರಿ ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಸಂಸತ್ತಿನ ಕಾರ್ಯ ಕಲಾಪಗಳು ಯಾವ ನಿಟ್ಟಿನಲ್ಲಿ ನಡೆಯುತ್ತದೆ ಹಾಗೇನೇ ಅವುಗಳಲ್ಲಿ ನಮ್ಮ ಜನಪ್ರತಿನಿಧಿಗಳು ಯಾವ ರೀತಿಯಾಗಿ ಭಾಗವಹಿಸುತ್ತಾರೆ ಎಂಬುದನ್ನ ತಿಳಿಸಿದರು.
ಹಾಗೂ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
ವರದಿ: ವಿಶ್ವನಾಥ ಹರೋಲಿ