ಸೈದಾಪೂರ: ಇಲ್ಲಿಗೆ ಸಮೀಪದ ಸೌರಾಷ್ಟ್ರಹಳ್ಳಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ಪ್ರತಿ ಮೂರು ವರ್ಷಕ್ಕೊಮ್ಮೆ ದೇವಸ್ಥಾನದಿಂದ ಊರಿನ ಹೊರ ವಲಯದಲ್ಲಿ ದೇವಿಯ ವಿಗ್ರಹವನ್ನು ತೆಗೆದುಕೊಂಡು ಹೋಗಿ, ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಾರೆ.
ಈ ಜಾತ್ರಾ ಮಹೋತ್ಸವ ಅಂಗವಾಗಿ ಊರಿನ ಶಾಲಾ ಮಕ್ಕಳು ಕೊಲಾಟ ಮತ್ತು ಲೇಜಿಮ್ ನೃತ್ಯ ಪ್ರದರ್ಶನ ಮೂಲಕ ನೋಡುಗರ ಗಮನ ಸೆಳೆಯಿತು.