ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಗರಿಹಾಳ ಗ್ರಾಮದ ಜನರು ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುತ್ತಿದ್ದಾರೆ.ಕಂಬಗಳ ವ್ಯವಸ್ಥೆ ಇಲ್ಲದೆ ಗ್ರಾಮಸ್ಥರು ತಮ್ಮ ಮನೆಗಳ ಮುಂದೆ ತಾತ್ಕಾಲಿಕವಾಗಿ ಬಿದಿರಿನ ಕಂಬಗಳನ್ನು ಹಾಕಿ ಅದರ ಮುಖಾಂತರ ವಿದ್ಯುತ್ ವೈರ್ ಎಳೆದು ಬೆಳಕು ಮಾಡಿಕೊಂಡಿರುವುದು ತಾತ್ಕಾಲಿಕವಾಗಿದ್ದು ಹಾಗೂ ಅಪಾಯಕಾರಿಯೂ ಆಗಿದೆ ಹಾಗಾಗಿ ಗ್ರಾಮಸ್ಥರು ಆತಂಕದಿಂದ ಜೀವನ ನಡುಸುತ್ತಿದ್ದಾರೆ ಕೆಇಬಿ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದೂ ಅಲ್ಲದೇ ಗ್ರಾಮಸ್ಥರ ಮನೆ ಮನೆಗಳಿಗೆ ಮೀಟರ್ ಅಳವಡಿಸಿ ಹೋಗಿದ್ದಾರೆ ಕೆಇಬಿ ಅಧಿಕಾರಿಗಳು ಐದು ವರ್ಷಗಳಿಂದ ವಿದ್ಯುತ್ ಬಿಲ್ ಪಡೆಯುತ್ತಿದ್ದು ದುರದೃಷ್ಟಕರ ಸಂಗತಿ.ಚಿಗರಿಹಾಳ ಗ್ರಾಮದ ಮಹಿಳೆಯರು ಮತ್ತು ಗ್ರಾಮಸ್ಥರು ಸೇರಿ ಕೆಇಬಿ ಕಚೇರಿಗೆ ಮುತ್ತಿಗೆ ಹಾಕುವುದರ ಮುಖಾಂತರ ಪ್ರತಿಭಟನೆ ಮಾಡಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಇನ್ನು ಮುಂದೆ ಆದರೂ ಕೆಇಬಿ ಅಧಿಕಾರಿಗಳು ಚಿಗರಿಹಾಳ ಗ್ರಾಮದ ಜನರ ಮನವಿಗೆ ಸ್ಪಂದಿಸುವ ಕೆಲಸ ಮಾಡಬೇಕು.
ಗ್ರಾಮದ ಯುವ ಮುಖಂಡ ಬಸವರಾಜ ಮಾಪಹಳ್ಳಿ,ಗೋವಿಂದಪ್ಪ,ಪರಮಣ್ಣ,ಮೈನುದೀನ್, ನಿಂಗಪ್ಪ ಕವಲಿ,ಮಹದೇವ,ಹಣಮಂತ್ರಾಯ, ಸಿದ್ದರಾಮ,ಪೀಡಪ್ಪ,ತಿಪ್ಪವ್ವ,ಮಹಿಬೂಬಿ,ಚಾಂದಬಿ, ಹಣಮಂತಿ,ನಿಂಗಮ್ಮ,ಲಕ್ಷ್ಮೀ,
ಹಿರಿಯರು ಹಾಗೂ ಮಹಿಳೆಯರು ಭಾಗವಹಿಸಿದ್ದರು.
ವರದಿ-ರಾಜಶೇಖರ ಮಾಲಿ ಪಾಟೀಲ್ ಶಹಾಪುರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.