ಹನೂರು :ತಾಲ್ಲೂಕಿನ ಸೂಳೇರಿಪಾಳ್ಯ ಗ್ರಾ. ಪಂ ವ್ಯಾಪ್ತಿಗೆ ಸೇರಿದ ಕಾಡಂಚಿನ ಪಚ್ಚೆದೊಡ್ಡಿ ಗ್ರಾಮದಲ್ಲಿ ಮಾದೇಗೌಡ ಎಂಬುವರಿಗೆ ಸೇರಿದ ಒಂದು ಹಸು ಮತ್ತು ಒಂದು ಕರು ಗಂಟು ರೋಗಕ್ಕೆ ಬಲಿಯಾಗಿದೆ.
ಕಳೆದ 15 ದಿನಗಳಿಂದ ಪಶುವೈದ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದರು, ಸ್ಥಳಕ್ಕೆ ಬಾರದಿರುವುದರಿಂದ ಹಸು, ಕರು ಮೃತಪಟ್ಟಿದೆ.ಇಲ್ಲಿ ಪಶುವೈದ್ಯಾಧಿಕಾರಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚು ಪಶುವೈದ್ಯಾಧಿಕಾರಿಗಳನ್ನ ನೇಮಿಸಬೇಕು.
ಸೂಕ್ತ ಪರಿಹಾರ ನೀಡುವಂತೆ ರೈತ ಮಾದೇಗೌಡ ಅಗ್ರಹಿಸಿದ್ದಾರೆ.ವರದಿ ಉಸ್ಮಾನ್ ಖಾನ್.
