ಕಲ್ಬುರ್ಗಿ ಜಿಲ್ಲೆಯಲ್ಲಿ ನಕಲಿ ಬೀಜಗಳು ಮಾರಾಟವಾಗುತ್ತಿವೆ
ಯಡ್ರಾಮಿ ತಾಲೂಕಿನ ರೈತರ ಸಂಕಷ್ಟ ಕೇಳುವವರು ಯಾರೂ ಇಲ್ಲ ನಕಲಿ ತೊಗರಿ ಬೀಜ ಮಾರಾಟ ಮಾಡಿ ಕಂಪನಿ ವಿರುದ್ಧ ಸೂಕ್ತವಾದ ತನಿಖೆ ನಡೆಸಬೇಕೆಂದು ಇಲ್ಲಿನ ರೈತರು ಯಡ್ರಾಮಿ ತಾಲೂಕ ಇಜೇರಿ ಬಸ್ ನಿಲ್ದಾಣದಿಂದ ತಹಸೀಲ್ದಾರ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮಾಡುವ ಮುಖಾಂತರ ಕೃಷಿ ಇಲಾಖೆ ಅಧಿಕಾರಿಗಳು ಕಳಪೆ ಮಟ್ಟದ ತೊಗರಿ ಬೀಜವನ್ನು ರೈತರಿಗೆ ಜಮೀನಿನಲ್ಲಿ ಬೆಳೆದ ತೊಗರಿ ಸಂಪೂರ್ಣವಾಗಿ ರೋಗದಿಂದ ಹಾಳಾಗಿ ಹೋಗಿದೆ, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಬೆಳೆದ ತೊಗರಿ ಬೆಳೆಗಳು ಹಾನಿಯಾಗಿವೆ ಎಂದರು. ರೈತರು ತಮ್ಮ ನೋವನ್ನು ಯಾರಿಗೆ ಹೇಳಬೇಕು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಕಷ್ಟ ಪಟ್ಟು ಬೆಳೆದ ರೈತರು ತೊಗರಿ ಬೆಳೆ ಕೈಕೊಟ್ಟಿದೆ ಇದಕ್ಕೆ ನಕಲಿ ಬೀಜಗಳು ಕಾರಣ ಕೂಡಲೇ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ರೈತರ ಪ್ರತಿ ಎಕರೆಗೆ ೪೦,೦೦೦ ಸಾವಿರ ರೂಪಾಯಿ ಗಳನ್ನು ರೈತರಿಗೆ ಪರಿಹಾರ ರೂಪದಲ್ಲಿ ನೀಡಬೇಕು, ನಕಲಿ ಬೀಜಗಳು ಮಾರಾಟ ಮಾಡಿದ ಕಂಪನಿಯ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ರೈತರಿಗೆ ಸೂಕ್ತ ನ್ಯಾಯ ಒದಗಿಸಿಕೊಡಬೇಕು.ಒಂದು ವಾರದಲ್ಲಿ ಪರಿಹಾರ ನೀಡಿ ಕಂಪೆನಿಯ ವಿರುದ್ಧ ಕ್ರಮ ತೆಗೆದುಕೊಳ್ಳದಿದ್ದರೆ ಮುಂದೆ ಬರುವಂತ ದಿನಗಳಲ್ಲಿ ಯಡ್ರಾಮಿ ತಾಲೂಕಿನ ರೈತರು ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ. ಎಂದು ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರವಣಕುಮಾರ ಡಿ ನಾಯಕ ರೈತ ಸಂಘದ ಜಿಲ್ಲಾ ಕಾರ್ಯದರ್ಶಿಯಾದ ಅಲ್ಲಾ ಪಟೇಲ್ ಮಾಲೀ ಬಿರಾದರ್, ತಾಲ್ಲೂಕು ಅಧ್ಯಕ್ಷ ಈರಣ್ಣ ಭಜಂತ್ರಿ, ಸೈದಪ್ಪ ಹೊಸಮನಿ ನಿಂಗಪ್ಪ ಚಿಗರಳ್ಳಿ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವರದಿ
ರಾಜಶೇಖರ ಮಾಲಿ ಪಾಟೀಲ್ ಶಹಾಪುರ