ಆರ್.ಡಿ.ಪಿ.ಆರ್ ನೌಕರರ ಮೂರು ದಿನಗಳ ಆಯೋಜಿಸಲಾದ ಕ್ರೀಡೋತ್ಸವದಲ್ಲಿ ಗಂಗಾವತಿ ತಾಲೂಕು ಪಂಚಾಯತಿ ಆರ್.ಡಿ.ಪಿ. ಆರ್ ನೌಕರರು ಹಾಗೂ ಸಿಬ್ಬಂದಿಗಳು ಕ್ರೀಡೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುವುದರ ಮೂಲಕ ತಾಲೂಕಿನ ಕೀರ್ತಿ ತಂದಿರುತ್ತಾರೆ ಎಂದು ತಾ.ಪಂ ಇಒ ಮಹಾಂತಗೌಡ ಪಾಟೀಲ್ ಅವರ ತಿಳಿಸಿರುತ್ತಾರೆ.
ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಕ್ರೀಡೋತ್ಸವದಲ್ಲಿ ಗಂಗಾವತಿ ತಾಲೂಕಿಗೆ ಪುರುಷರ ವಾಲಿಬಾಲ್ ದ್ವೀತಿಯ ಸ್ಥಾನ, ಮಹಿಳೆಯರ ದ್ವೀತಿಯ ಸ್ಥಾನ, 100 ಮೀ, ಓಟದಲ್ಲಿ ಹನುಮೇಶ್ ಡಿಇಒ ತಾ.ಪಂ ಪ್ರಥಮ ಸ್ಥಾನ, 400 ಮೀ ಓಟದಲ್ಲಿ ಅವಿನಾಶ್ ಮರಳಿ ಗ್ರಾ.ಪಂ ಪ್ರಥಮ, ದುರಗೇಶ್ ವೆಂಕಟಗಿರಿ ಗ್ರಾ.ಪಂ ತೃತೀಯ ಸ್ಥಾನ, ಬ್ಯಾಡ್ಮಿಂಟನ್ ನಲ್ಲಿ ಡಬಲ್ ದ್ವೀತಿಯ ಸ್ಥಾನ ವೀರನಗೌಡ ಪಾಟೀಲ್, ಪ್ರಭು, ಗುಂಡು ಎಸೆತ ಗೀರಿಜಮ್ಮ ಬಿಲ್ ಕಲೆಕ್ಟರ್ ಮರಳಿ ಗ್ರಾ.ಪಂ ಪ್ರಥಮ ಸ್ಥಾನ, ಸಿಂಗಲ್ ಕೆರಂ ನಲ್ಲಿ ಪ್ರಥಮ ಉಷಾರಾಣಿ, ದ್ವೀತಿಯ ಲಕ್ಷ್ಮಿ ಬಾಯಿ, ತೃತೀಯ ಭಾರತಿ ಚಿಕ್ಕಜಂತಕಲ್, ಶಿಲ್ಪಾ ಎನ್ ಆರ್ ಎಲ್ ಎಂ ತಾ.ಪಂ, ಡಬಲ್ ಕೆರಂ ನಲ್ಲಿ ದ್ವೀತಿಯ ಸ್ಥಾನ ಮಲ್ಲಮ್ಮ ಡಣಾಪುರ, ಲಕ್ಷ್ಮಿ ತಾಂತ್ರಿಕ ಸಹಾಯಕರು, 200 ಮೀ, 400 ಮೀ ಓಟದಲ್ಲಿ ಸ್ವಪ್ನ ದ್ವೀತಿಯ ದರ್ಜೆ ಲೆಕ್ಕಸಹಾಯಕರು, ರಿಲೇ ಆಟದಲ್ಲಿ ಅಶ್ವೀನಿ ಕಾರ್ಯದರ್ಶಿ ಸಂಗಾಪುರ, ಸ್ವಪ್ನ ಮರಳಿ ಗ್ರಾ.ಪಂ, ನಾಗರತ್ನ, ಶಿಲ್ಪಾ, ಚೆಸ್ ನಲ್ಲಿ ದ್ವೀತಿಯ ಸ್ಥಾನ ಲಕ್ಷ್ಮೀ ತಾಂತ್ರಿಕ ಸಹಾಯಕರು, ಶೆಟಲ್ ಬ್ಯಾಟ್ ಡಬಲ್ ಮಿಟನ್ ಪ್ರಥಮ ವಿದ್ಯಾವತಿ, ದ್ವೀತಿಯ ಸ್ಥಾನ ಶರಣಮ್ಮ, ಚಿತ್ರಕಲೆಯಲ್ಲಿ ಪ್ರಥಮ ಶ್ವೇತಾ ಡಿಇಒ ತಾ.ಪಂ, ದ್ವೀತಿಯ ಸ್ಥಾನ ಶಿಲ್ಪಾ ಎನ್ ಆರ್ ಎಲ್ ಎಂ, ಇನ್ನುಳಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.