ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣ ಮಾರ್ಗ ಮಧ್ಯೆ ಮಕ್ಕಳಿಗೆ ಶಾಲೆ ಬಿಡಿಸಿ ಆಟೋದಲ್ಲಿ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಸಹಾಯವಾಣಿ ೧೦೯೮ ರವರ ಸಹಯೋಗದೊಂದಿಗೆ ಖಚಿತ ಮಾಹಿತಿ ಆಧಾರದ ಮೇಲೆ ಕಲಂ ೧೬ ಮತ್ತು ೧೭ ಅಡಿಯಲ್ಲಿ ಬಂದ ಅಧಿಕಾರಿಗಳು ತಂಡದಿಂದ ಮಕ್ಕಳಿಗೆ ರಕ್ಷಣೆ ಮಾಡಲಾಯಿತು.
ರಕ್ಷಣೆ ಮಾಡಿದ ಕಾರ್ಮಿಕ ಇಲಾಖೆ ಯಾದಗಿರಿ,ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಹಾಗೂ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ ಮಕ್ಕಳು ಮತ್ತು ಪಾಲಕ/ಪೋಷಕರಿಂದ ಈ ಮಕ್ಕಳಿಗೆ ಇನ್ನೂ ಮುಂದೆ ಯಾವುದೇ ಕಾರಣಕ್ಕೂ ಕೂಲಿ ಕೆಲಸ ಮತ್ತು ದುಡಿಯುವುದ್ದಕೆ ಹಚ್ಚುವುದಿಲ್ಲ ಎಂದು ಹೇಳಿದರು ಪ್ರತಿ ದಿನ ನಾವು ಶಾಲೆಗೆ ಹೋಗುವಂತೆ ಮತ್ತು ಶಾಲೆ ಬಿಡಿಸದಂತೆ ನೋಡಿಕೊಳ್ಳುತ್ತೆವೆ ಎಂದು ದೃಢೀಕರಣ ಪತ್ರ ಬರೆಸಿಕೊಂಡು ರಕ್ಷಣೆ ಮಾಡಿದ ಮಕ್ಕಳಿಗೆ ಅವರ ಪಾಲಕರಿಗೆ ಒಪ್ಪಿಸಲಾಯಿತು ಬಾಲ ಕಾರ್ಮಿಕ ಹಾಗೂ ಕಿಶೋರ್ ಕಾರ್ಮಿಕರ ಪದ್ಧತಿ ವಿರುದ್ಧ ಗ್ರಾಮದ ಪೋಷಕರಿಗೆ ಜಾಗೃತಿ ಮೂಡಿಸಲಾಯಿತು.
ಈ ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳಾದ ಪಿ.ಎಸ್.ಐ ಹಣಮಂತ ಬಂಕಳಗಿ, ಬಾಲ ಕಾರ್ಮಿಕರ ಯೋಜನೆ ಅಧಿಕಾರಿ ರಿಯಾಜ್ ಪಟೇಲ್, ಮಕ್ಕಳ ರಕ್ಷಣಾ ಘಟಕ ಅಧಿಕಾರಿ ರಾಜೇಂದ್ರ ಯಾದವ್, ಸಿ.ಆರ್.ಪಿ ಶಿಕ್ಷಣ ಇಲಾಖೆ ಈರಯ್ಯ ಹಿರೇಮಠ ಕೆಂಭಾವಿ, ಮಲ್ಲಪ್ಪ ಮಾನೆಗರ್ ಮಕ್ಕಳ ಸಹಾಯವಾಣಿ ೧೦೯೮ ಎಲ್ಲಾ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಸಹ ಶಿಕ್ಷಕರು ಉಪಸ್ಥಿತರಿದ್ದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ