ಲಕ್ಷ್ಮೇಶ್ವರ -21 ಇಂದು ಪಟ್ಟಣದ ಪ್ರಮುಖ ರಸ್ತೆಯಾದ ಶಿಗ್ಲಿ ವೃತ್ತದ ಬಳಿ ಲಕ್ಷ್ಮೇಶ್ವರ ಪಟ್ಟಣದಿಂದ ಗದಗ, ಹುಬ್ಬಳ್ಳಿ, ಹಾವೇರಿ ಭಾಗಗಳಿಗೆ ಸಂಚರಿಸುವ ಬಸ್ಸುಗಳನ್ನು ತಡೆದು ಪ್ರತಿಭಟನೆ ಮಾಡಲಾಯಿತು. ಲಕ್ಷ್ಮೇಶ್ವರದಿಂದ ಗದಗಗೆ ಸಂಚಾರ ಮಾಡಲು ನಾಗರೀಕರಿಗೆ ಹಾಗೂ ಬಸ್ಸ ಚಾಲಕರಿಗೆ ಜೀವ ಭಯ ಕಾಡುವಂತ ಪರಿಸ್ಥಿತಿ ಬಂದಿದೆ. ಸಂಪೂರ್ಣ ಹದಗೆಟ್ಟು ಹೋಗಿರುವ ರಸ್ತೆಯಲ್ಲಿ ಬಸ್ಸ, ಟಿಪ್ಪರ, ಖಾಸಗಿ ವಾಹನಗಳ ದಟ್ಟಣೆಯಿಂದ ಸಂಪೂರ್ಣ ರಸ್ತೆಯು ಹಾಳಾಗಿದ್ದು ದಿನಾಲೂ ಗದಗ ಭಾಗಕ್ಕೆ ಸಂಚಾರ ಮಾಡುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯದಲ್ಲಿ ಬಸ್ಸುಗಳು ಸಂಚರಿಸುತಿಲ್ಲ ಅಲ್ಲದೆ ಬಸ್ ಗಳ ಸಂಖ್ಯೆಯು ಕಡಿಮೆಯಿರುವುದು ಎದ್ದು ಕಾಣುತ್ತದೆ.ಹೊಸ ಬಸ್ಸ ನಿಲ್ದಾಣದಿಂದ ಸಂಪೂರ್ಣ ದೂಳಿನ ಮಜ್ಜನವನ್ನು ಎಲ್ಲಾ ಅಂಗಡಿ ಮಾಲೀಕರು, ಸಾರ್ವಜನಿಕರು ಅನುಭವಿಸುವಂತಾಗಿದೆ.ಈ ವ್ಯವಸ್ಥೆ ಗೆ ಜನ ಪ್ರತಿನಿಧಿಗಳಾಗಲಿ, ಸರ್ಕಾರಿ ಅಧಿಕಾರಿಗಳಲಿ ಸೂಕ್ತ ವ್ಯವಸ್ಥೆ
ಮಾಡುವಲ್ಲಿ ವಿಫಲರಾಗಿರುವದನ್ನು ಖಂಡಿಸಿ ಕಾಲೇಜು ವಿದ್ಯಾರ್ಥಿಗಳು ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ, ಕರುನಾಡ ವಿಜಯ ಸೇನೆ,ಮುಂತಾದ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮೂಲಕ ಡಿಸಿ ಅವರಿಗೆ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.
ವರದಿ ಸದಾಶಿವ ಭೀ ಮುಡೆಮ್ಮನವರ