ಹನೂರು : ತಾಲೂಕಿನ ಮಂಗಲ ಗ್ರಾಮದ ಸಮೀಪ ಹುಣಸಗುಡ್ಡೆ ಹತ್ತಿರ ಕಾರಿನ ಟಯರ್ ಸಿಡಿದು ಮರಕ್ಕೆ ಡಿಕ್ಕಿ ಸ್ಥಳದಲ್ಲೇ ಮಗು ಸಾವು ಆರು ಜನರ ಸ್ಥಿತಿ ಗಂಭೀರ. ತನ್ಮಯ್ (3), ಸ್ಥಳದಲ್ಲೇ ಸಾವನಪ್ಪಿದ ಮಗು ಮಂಜು, ಸಾಕಮ್ಮ, ಕಿರಣ್, ಚಂದ್ರಮ್ಮ, ಸಂತೆಯಮ್ಮ, ಚಾಲಕ ವೆಂಕಟೇಶ್ ಎಂಬುವರ ಗಾಯಗೊಂಡವರು ಮಹದೇಶ್ವರ ಬೆಟ್ಟಕ್ಕೆ ಹೋಗಿ ಪೂಜೆ ಮುಗಿಸಿಕೊಂಡು ತಮ್ಮ ಸ್ವಗ್ರಾಮ ಆದ ಮೈಸೂರು ತಾಲೂಕಿನ ಮಾರ್ಬಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಹನೂರು ಪೊಲೀಸರು ಸಾರ್ವಜನಿಕರ ಸಹಾಯದಿಂದ ಗಾಯಾಳು ಗಳನ್ನು ಸಮೀಪದ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು ಮಾಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ವರದಿ ಉಸ್ಮಾನ್ ಖಾನ್.
