ಕೊಪ್ಪಳದ ನಡೆದಾಡುವ ದೇವರು,ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ನಿನ್ನೆ ಸಿಂಧನೂರು ನಗರದ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಅಮರ ಶ್ರೀ ಆಲದ ಮರವನ್ನು ವೀಕ್ಷಣೆ ಮಾಡಿ ಸಂತಸ ವ್ಯಕ್ತಪಡಿಸಿದರು.ಪರಿಸರ ರಕ್ಷಣೆ ದೇವರು ನೀಡಿದ ಒಂದು ವರ ಅದನ್ನು ನೀವು ಪಾಲನೆ ಮಾಡುತ್ತಿರುವುದು ನೋಡಿ ತುಂಬಾ ಸಂತೋಷವಾಯಿತು.ಪ್ರತಿಯೊಂದು ಜೀವಿಗೆ ತನ್ನದೇ ಆದ ಹಂಬಲ ಬಯಕೆ ಇರುತ್ತದೆ ಅದನ್ನು ಈಡೇರಿಸಿಕೊಳ್ಳುವುದು ಆ ಜೀವಿಯ ಪರಿಶ್ರಮ ಮತ್ತು ಪಾಲನೆಯಿಂದ ಮಾತ್ರ ಸಾಧ್ಯ,ಈ ಕಾರ್ಯವನ್ನು ವನಸಿರಿ ತಂಡ ಮಾಡುತ್ತಿರುವುದು ಶ್ಲಾಘನೀಯ ನಿಮ್ಮ ಕಾರ್ಯ ಮುಂದುವರೆಯಲಿ ಆ ವೃಕ್ಷಮಾತೆಯ ಆರ್ಶೀವಾದ ಸದಾ ನಿಮ್ಮ ಮೇಲಿರುತ್ತದೆ ಎಂದು ಆರ್ಶೀವಚನ ಮಾಡಿದರು.
ಈ ಸಂದರ್ಭದಲ್ಲಿ ಪರಮ ಪೂಜ್ಯರು ಶಿಷ್ಯಂದಿರು ಹಾಗೂ ವನಸಿರಿ ಫೌಂಡೇಶನ್ ಅದ್ಯಕ್ಷರು,ಸದಸ್ಯರು ಉಪಸ್ಥಿತರಿದ್ದರು.