ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಪುರ ಗ್ರಾಮದ ಮಾರ್ಟೀಲ್ಲಿ ರಸ್ತೆ ಹಾಗೂ ಕೌದಲ್ಲಿ ರಸ್ತೆಯ ಸರ್ಕಲ್ನಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಇಂದು ಗುದ್ದಲಿ ಪೂಜೆ ನೆರವೇರಿತು ರಾಮಪುರದ ಡಾ ಬಿ ಆರ್ ಅಂಬೇಡ್ಕರ್ ಯುವಕರ ಸಂಘದ ವತಿಯಿಂದ ಪ್ರತಿಮೆ ನಿರ್ಮಾಣಕ್ಕೆ ತೀರ್ಮಾನ ಈ ವೇಳೆ ಮಾತನಾಡಿದ ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷರು ಚಿರಂಜೀವಿ ಹಾಗೂ ಯುವ ಮೋರ್ಚಾ ಅಧ್ಯಕ್ಷರು ಮುನೇಶ್ ರವರು ಮಾತನಾಡಿದರು ನಮ್ಮ ರಾಮಪುರ ಗ್ರಾಮದಲ್ಲಿ ಬಾಬಾಸಾಹೇಬರ ಪ್ರತಿಮೆ ನಿರ್ಮಾಣ ಮಾಡುವ ಬಹುದಿನದ ಕನಸು ನನಸಾಗುತ್ತಿದೆ ಇದರ ಜೊತೆಗೆ ಬಾಬಾಸಾಹೇಬರ ತತ್ವ ಸಿದ್ದಂತಗಳನ್ನು ಅವರ ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸಾಗುತ್ತೇವೆ ಎಂದು ಹೇಳಿದರು ಹಾಗೂ ಬಾಬಾಸಾಹೇಬರ ಪ್ರತಿಮೆ ನಿರ್ಮಾಣಕ್ಕೆ ಸುತ್ತ ಮುತ್ತಲ ಗ್ರಾಮಗಳಾದ ಪಳನಿಮೆಡು,ಗೆಜ್ಜೆನನತ್ತ,ಮಂಚಪುರ ಹೆಡ್ ಕ್ವಾಟ್ರಾಸ್ ರಾಮಪುರ ಗೆಜ್ಜೆಲನತ್ತ ಎಲ್ಲಾ ಗ್ರಾಮದ ಜನರು ಸೇರಿ ಮಾಡುತ್ತಿರುವುದಾಗಿ ಹೇಳಿದರು
ಈ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು ಬಸವರಾಜು SC ಮೋರ್ಚಾ ಅಧ್ಯಕ್ಷರು ಮುನೇಶ್ ರಾಮಪುರ ಪಂಚಾಯತ್ ಅಧ್ಯಕ್ಷರು ದಾಕ್ಷಾಯಿಣಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹದೇವಸ್ವಾಮಿ,
ರಾಜ್ಯ ಛಲವಾದಿ ಸಂಘದ ಉಪಾಧ್ಯಕ್ಷರು ಬಸವರಾಜ್ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರು ರಾಜೇಂದ್ರ,ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಮುರುಗೇಶ್,ಮಾಜಿ ಪಂಚಾಯತ್ ಅಧ್ಯಕ್ಷರು ಮುಟ್ಟುವಂದ ಸದಸ್ಯರು ಮುರುಗೇಶ್ ಹಾಗೂ ದಲಿತ ಯುವ ಮುಖಂಡರು ಗಿರೀಶ್ ಕೃಷ್ಣಮೂರ್ತಿ ಮಾದೇಶ,ಶರವಣ
ರಾಮಾಪುರ ಅಂಬೇಡ್ಕರ್ ಯುವಕರ ಸಂಘದ ಅಧ್ಯಕ್ಷರು ಮುನಿಸ್ವಾಮಿ ಚಿರಂಜೀವಿ,ಉಪಾಧ್ಯಕ್ಷರು ಮುರಳಿ. ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷರು ಕಾರ್ತಿಕ್ ಜಗದೀಶ್ ವೀರಪ್ಪ ರಾಮಪುರ ಗ್ರಾಮದ ಮುಖಂಡರು ಯುವಕರು ಅಂಬೇಡ್ಕರ್ ಸಂಘದ ಸದಸ್ಯರುಗಳು ರಮೇಶ್ ಶಿವರಾಜ್ ಮುರುಳಿ ಶರವಣ ವಿರಾಶೆಟ್ಟಿ ಭಾಗಿಯಾಗಿದ್ದರು
ವರದಿ;ಉಸ್ಮಾನ್ ಖಾನ್
