ಆಳ್ವಾಸ್ ಆವರಣ, ವಿದ್ಯಾಗಿರಿ, ಮೂಡುಬಿದರೆ, ಡಿಸೆಂಬರ್ 21 :ಭಾರತ್ ಸ್ಕೌಟ್ ಮತ್ತು ಗೈಡ್ ಮೂಲಕ ಆಯೋಜಿಸಲ್ಪಟ್ಟ ಆಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022 ಇವತ್ತಿನಿಂದ ದಿನಾಂಕ 27/12/2022 ರ ತನಕ ತುಂಬಾ ಆದ್ದೂರಿಯಾಗಿ ಜರಗಲಿದೆ. ಈಗಾಗಲೇ ಮೂಡಬಿದರೆಯಲ್ಲಿ ಶೈಕ್ಷಣಿಕ ಕುಂಭ ಮೇಳದ ವಾತಾವರಣ ಕಂಡುಬರುತ್ತಿದೆ.
ಜಾಂಬೂರಿಯನ್ನು ಘನವೆತ್ತ ರಾಜ್ಯಪಾಲ ತಾವರ ಚಂದ್ ಘೇಲೋಟ್ ಉದ್ಘಾಟಿಸಿದರು. ಘನ ವುಪಸ್ಥಿತಿ ಯಲ್ಲಿ ಮಂಗಳೂರು ಲೋಕ ಸಭಾ ಸದಸ್ಯ ಹಾಗು ಬಿ ಜೆ ಪಿ ರಾಜ್ಯಾಧ್ಯಕ್ಷ ಶ್ರೀ ನಳಿನ್ ಕುಮಾರ್ ಕಟೀಲ್ ಮೂಡಬಿದರೆ ಶಾಸಕ ಶ್ರೀ. ಉಮಾನಾಥ ಕೋಟ್ಯಾನ್ , ರಾಜ್ಯ ಸಭಾ ಸದಸ್ಯ ರಾಜರ್ಷಿ ಡಾ. ವಿರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ವಿಶ್ವ ಸ್ಕೌಟ್ ಅಂಡ್ ಗೈಡ್ ಸಂಸ್ಥೆ ಯ ಪ್ರಧಾನ ಕಾರ್ಯದರ್ಶಿ ಶ್ರೀ. ಅಹಮದ್ ಅಲ್ ಹೆಂದಾವಿ, ಭಾರತ್ ಸ್ಕೌಟ್ ಅಂಡ್ ಗೈಡ್ ನ ರಾಷ್ಟ್ರೀಯ ಮುಖ್ಯ ನಿರ್ವಹಣಾಧಿಕಾರಿ ಶ್ರೀ ಕೆ .ಕೆ ಖಂಡೇಲ್ ವಾಲಾ, ಕರ್ನಾಟಕ ರಾಜ್ಯ ಸ್ಕೌಟ್ ಅಂಡ್ ಗೈಡ್ ಮುಖ್ಯ ಆಯುಕ್ತ ಶ್ರೀ. ಪಿ ಜಿ ಆರ್ ಸಿಂಧ್ಯ , ದ ಕ ಜಿಲ್ಲಾ ಸ್ಕೌಟ್ ಅಂಡ್ ಗೈಡ್ ಮುಖ್ಯ ಆಯುಕ್ತ ಹಾಗು ಆಳ್ವಾಸ್ ಸಂಸ್ಥೆಯ ಮುಖ್ಯಸ್ಥ ಮೋಹನ ಆಳ್ವ ಹಾಗು ಐವತ್ತು ಸಾವಿರ ಮೇಲ್ಪಟ್ಟು ಸ್ಕೌಟ್ ಗೈಡ್ ವಿದ್ಯಾರ್ಥಿಗಳು, ನಿರ್ವಾಹಕ ವರ್ಗ ಹಾಗು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ನಾಯಕರು ಉಪಸ್ಥಿತರಿದ್ದರು.
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.