ಸಿಂಧನೂರು ತಾಲೂಕಿನ ಗೌಡನಭಾವಿ ಗ್ರಾಮದ ಆರೋಗ್ಯ ಇಲಾಖೆ ಉಪ ಕೇಂದ್ರದ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮಂಗಳವಾರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಗೌಡನಭಾವಿ ದಿ.ನಾಗಪ್ಪ ತಾನನವರ ಶಿಷ್ಯರಾದ ಅಮರೇಶ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷ ಅಮರೇಗೌಡ ಮಲ್ಲಾಪೂರ ಮಾತನಾಡಿ ಪರಿಸರ ನಮ್ಮ ಜೀವನದ ಅವಿಭಾಜ್ಯ ಅಂಗ.ದೈನಂದಿನ ಚಟುವಟಿಕೆ ಗಳಲ್ಲಿ ಪರಿಸರ ನಮಗೆ ಬಹಳ ಉಪಯುಕ್ತವಾಗಿದೆ,ಗಾಳಿ ನೀರು,ಆಹಾರ ಇವೆಲ್ಲವುಗಳನ್ನು ಪರಿಸರದಿಂದಲೇ ಪಡೆಯುತ್ತಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯ ಅಧುನಿಕತೆಗೆ ತಕ್ಕಂತೆ ಪರಿಸರವನ್ನು ನಾಶಮಾಡುತ್ತಿದ್ದಾನೆ.ಎಲ್ಲೆಂದರಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಸಸಿಗಳು ಬೆಳವಣಿಗೆ ಆಗುತ್ತಿಲ್ಲ ಮಣ್ಣಿನ ಗುಣಮಟ್ಟ ಕೂಡ ಹಾಳಾಗುತ್ತಿದೆ.ರೋಗಾಣುಗಳು ಕೂಡ ಹೆಚ್ಚು ಹರಡುತ್ತಿವೆ,ಗಾಳಿಯನ್ನು ಹಣ ಕೊಟ್ಟು ಖರೀದಿ ಮಾಡುವಂತಹ ಪರಿಸ್ಥಿತಿಯೂ ಬಂದೊದಗಿದೆ.ಇದರ ರಕ್ಷಣೆಗಾಗಿ ವನಸಿರಿ ಫೌಂಡೇಶನ್ ಹಲವಾರು ವರ್ಷಗಳಿಂದ ಸಾರ್ವಜನಿಕರಿಗೆ ಶಾಲಾ ಮಕ್ಕಳಿಗೆ ಪರಿಸರ ಜಾಗೃತಿ ಮತ್ತು ಪ್ಲಾಸ್ಟಿಕ್ ತ್ಯಜಿಸುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದೆ.ಈ ಕಾರ್ಯಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಮತ್ತು ಸರ್ಕಾರ ಪ್ಲಾಸ್ಟಿಕ್ ನಿಷೇಧ ಮಾಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅದ್ಯಕ್ಷ ಬಸಣ್ಣ,ಡಾ.ದೌಲಸಾಬ್, ಆರೋಗ್ಯಾಧಿಕಾರಿ ಶೋಭಾ, ವನಸಿರಿ ಫೌಂಡೇಶನ್ ರಾಜ್ಯ ಕಾರ್ಯದರ್ಶಿ ಶರಣೇಗೌಡ ಹೆಡಗಿನಾಳ,ವೆಂಕಟರಡ್ಡಿ, ಮಸ್ಕಿ ತಾಲೂಕ ಅದ್ಯಕ್ಷ ರಾಜು ಬಳಗಾನೂರ, ವೀರಭದ್ರಯ್ಯ ಸ್ವಾಮಿ, ಭೂ ಸಂರಕ್ಷಣಾ ವೇದಿಕೆಯ ತಾಲೂಕ ಅದ್ಯಕ್ಷ ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಆಸ್ಪತ್ರೆಯ ಸಿಬ್ಬಂದಿಗಳು,ಊರಿನ ಹಿರಿಯರು ಯುವಕರು ಇನ್ನಿತರರು ಭಾಗಿಯಾಗಿದ್ದರು.