ಸಿಂಧನೂರು ತಾಲೂಕಿನ ದಿದ್ದಿಗಿ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಆವರಣದಲ್ಲಿ ಬುಧವಾರ ಸಸಿನೆಡುವ ಕಾರ್ಯಕ್ರಮವನ್ನು ಆರೋಗ್ಯ ಅಧಿಕಾರಿ ಜಯದುರ್ಗ ಸಸಿನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಆರೋಗ್ಯಾಧಿಕಾರಿ ಜಯದುರ್ಗ ಪ್ರತಿಯೊಬ್ಬ ಮನುಷ್ಯನು ಆರೋಗ್ಯವಂತನಾಗಿರಬೇಕಾದರೆ ಗಾಳಿ, ನೀರು, ಆಹಾರ ಅತ್ಯಂತ ಮುಖ್ಯವಾಗಿರುತ್ತವೆ ಇವುಗಳನ್ನು ನಾವುಗಳೆಲ್ಲರೂ ಪರಿಸರದಿಂದ ಪಡೆಯುತ್ತೇವೆ,ಪರಿಸರ ಭೂಮಿ ಮೇಲಿರು ಪ್ರತಿಯೊಂದು ಜೀವಿಗೂ ಅತಿಮುಖ್ಯ,ಪರಿಸರವನ್ನು ಪ್ರತಿಯೊಬ್ಬರೂ ಕಾಪಾಡಬೇಕು,ಹೆಚ್ಚು ಹೆಚ್ಚು ಗಿಡಮರಗಳನ್ನು ಬೆಳೆಸಬೇಕು, ಇಂತಹ ಒಂದು ಕಾರ್ಯವನ್ನು ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಮೊದಲಿಗೆ ಕೈಗೆತ್ತಿಕೊಂಡವರು ಅಂದರೆ ಅದು ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು,ಅವರು ಈಕಾರ್ಯಕ್ಕೆ ನಾವುಗಳೆಲ್ಲರೂ ಸಹಕಾರ ನೀಡಬೇಕು ನಾನು ಕೂಡ ಮೊದಲಿಗೆ ಪರಿಸರ ಪ್ರೇಮಿ ಇವಾಗ ವೈದ್ಯೆಯಾಗಿ ಕಾರ್ಯನಿರ್ವಹಿಸುತಿದ್ದೇನೆ ಇವರ ಪರಿಸರ ರಕ್ಷಣೆ ಕಾರ್ಯಕ್ಕೆ ನಾನು ಸದಾಕಾಲ ಬೆಂಬಲ ನೀಡುತ್ತೇನೆ ಅವರ ತಂಡ ಇನ್ನಷ್ಟು ಹೆಚ್ಚಿನ ಗಿಡಮರಗಳನ್ನು ಬೆಳಸಲಿ ರಾಜ್ಯಾದ್ಯಂತ ವನಸಿರಿ ಫೌಂಡೇಶನ್ ಕಾರ್ಯ ನಿರಂತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ,ಶರಣೇಗೌಡ ಹೆಡಗಿನಾಳ, ವೆಂಕಟರಡ್ಡಿ ಹೆಡಗಿನಾಳ, ರಾಜು ಪತ್ತಾರ ಬಳಗಾನೂರ, ಮುದಿಯಪ್ಪ ಹೊಸಳ್ಳಿ ಕ್ಯಾಂಪ್, ವೀರಭದ್ರಯ್ಯ ಸ್ವಾಮಿ ತಿಮ್ಮಾಪೂರ ಮತ್ತು ಊರಿನ ಪ್ರಮುಖರು ಇದ್ದರು