ಸಿಂಧನೂರು ಡಿ 27:ಸಿಂಧನೂರಿನ ಗ್ರಾಮೀಣ ಕ್ಷೇತ್ರದ ಪರಿವರ್ತನೆಗೆ ಜನರೊಂದಿಗೆ ಸಂವಾದ ನಡೆಸಿ ಸಮಸ್ಯೆ ಅರಿತುಕೊಳಲಾಗುವುದೆಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ಮಂಗಳವಾರ ತಾಲೂಕಿನ ತಿಮ್ಮಾಪುರ ಗ್ರಾಮದ ಅಯ್ಯಪ್ಪ ಸ್ವಾಮಿಯ ದೇವಸ್ಥಾನದಲ್ಲಿ ಅವರು ಮಾತನಾಡಿ ರಾಜಕೀಯ,ಆರೋಗ್ಯ,ನೀರಾವರಿ, ಶೈಕ್ಷಣಿಕ ವಿಚಾರ ಮತ್ತು ಗ್ರಾಮ ಪಟ್ಟಣಗಳ ಅಭಿವೃದ್ಧಿ ಸಾಮಾಜಿಕ ವ್ಯವಸ್ಥೆ ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ಪ್ರತಿ ಗ್ರಾಮಗಳಲ್ಲಿ ಗ್ರಾಮೀಣ ಜನರ ಜೊತೆ ಸಂವಾದ ನಡೆಸುವುದ ಜೊತೆಗೆ ಗ್ರಾಮದ ಅಭಿವೃದ್ಧಿ ಕುರಿತು,ಅವುಗಳ ಪರಿಹಾರ ಒದಗಿಸುವ ಕುರಿತುಮಾತನಾಡಿದರು.ಈ ಸಂದರ್ಭದಲ್ಲಿ ಬಾಬುಗೌಡ ಬಾದರ್ಲಿ,ಜಾಫರ್ ಜಾಗಿರದರ,ಲಿಂಗಪ್ಪ ದಡೆಸೂಗೂರು,ತಿಮ್ಮಯ್ಯ ನಾಯಕ್ ರಾಗಲಪರ್ವಿ, ಅರುಣ್ ಕುಮಾರ್ ನಾಯಕ ರಾಗಲಪರ್ವಿ,ಶ್ರೀದೇವಿ ಶ್ರೀನಿವಾಸ,ಬಸವರಾಜ್ ಹಿರೇಗೌಡ ಮಾಜಿ ಜಿಲ್ಲಾ ಪಂಚಾಯತ್ ರೌಡಕುಂದ ಮತ್ತು ಕಾಂಗ್ರೆಸ್ ಸೋಶಿಯಲ್ ಮೀಡಿಯಾ ವಾಗೇಶ್ರೀ ಗೆಳೆಯರ ಬಳಗ ಹಾಗೂ ತಿಮ್ಮಾಪುರ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಸಂತೋಷದಿಂದ ಭಾಗಿಯಾಗಿದ್ದರು.