ಹನೂರು:ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಜಾತಿ, ಬೇಧ ಧರ್ಮ ಎಂಬ ತಾರತಮ್ಯ ಬಿಟ್ಟು ದೇಶ, ಭಾಷೆ, ಸಂಸ್ಕೃತಿ ಮುಂತಾದವುಗಳ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ಡಾ.ಎಸ್.ಶಿವರಾಜಪ್ಪ ತಿಳಿಸಿದರು.
ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ,ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹನೂರು ಇವರ ಸಹಯೋಗದಲ್ಲಿ ಪಟ್ಟಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಉದ್ಘಾಟನೆ ಹಾಗೂ ಡಾ.ಎಸ್ ಶಿವರಾಜಪ್ಪ ಅವರ ಬದುಕು- ಬರಹ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಪಠ್ಯ ಪುಸ್ತಕಗಳನ್ನು ಓದುವ ಜೊತೆಗೆ ಇತರೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪಠ್ಯ ಪುಸ್ತಕಗಳು ನಿಮ್ಮನ್ನು
ವಿದ್ಯಾವಂತರನ್ನಾಗಿಸಿದರೆ, ಇತರ ಪುಸ್ತಕಗಳು
ಜ್ಞಾನವಂತರನ್ನಾಗಿಸುತ್ತದೆ. ಇಂದಿನ ಸ್ಪರ್ಧಾಯುಗದಲ್ಲಿವಿದ್ಯಾವಂತರಾಗುವ ಜೊತೆಗೆ ಜ್ಞಾನವಂತರೂ ಆಗಬೇಕಾದ
ಅನಿವಾರ್ಯತೆ ವಿದ್ಯಾರ್ಥಿಗಳಿಗಿದೆ.
ಹಾಗಾಗಿ ಪಠ್ಯ ಪುಸ್ತಕದ ಜತೆಗೆ ಜತೆಗೆ ಇತರ ಪುಸ್ತಕಗಳನ್ನು ಓದುವ ಪರಿಪಾಠವನ್ನು ಬೆಳೆಸಿ ಕೊಳ್ಳಿ. ಅದು ನಿಮ್ಮ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗುತ್ತದೆ
ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾಗಬೇಕು ಎಂದರಲ್ಲದೆ
ನನಗೆ ಮಲೆ ಮಹದೇಶ್ವರರೇ ಚೈತನ್ಯ ಹಾಗೂ ಸ್ಪೂರ್ತಿಯಾಗಿದ್ದು ಅವರಿಂದಲೇ ಬದುಕು ಕಟ್ಟಿಕೊಂಡಿದ್ದೇನೆ ಎಂದು ತಿಳಿಸಿದರು
ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಪ್ರತಿಯೊಬ್ಬರೂ ಗ್ರಂಥಾಲಯಕ್ಕೆ ಭೇಟಿ ನೀಡಿ ಓದುವ ಹವ್ಯಾಸ ಬೆಳೆಸಿಕೊಂಡಾಗ ವ್ಯಕ್ತಿತ್ವ ವಿಕಸನದ ಜತೆಗೆ ಕನ್ನಡ ಸಾಹಿತ್ಯ ಶ್ರೀಮಂತಿಕೆ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು
ಮೈಸೂರು ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ ಮಾತನಾಡಿ, ಸಾಹಿತಿ ಡಾ.ಎಸ್.ಶಿವರಾಜಪ್ಪ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ.ಇವರ ಮಾರ್ಗದರ್ಶನದಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಿಎಚ್.ಡಿ ಮಹಾಪ್ರಬಂಧ ಮಂಡಿಸಿರುವುದು ಹೆಮ್ಮೆಯ ವಿಷಯ ಎಂದರು.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಂ ಮಹೇಶ್ ಚಿಕ್ಕಲ್ಲೂರು ಮಾತನಾಡಿ, ಚಾಮರಾಜನಗರ ಜಿಲ್ಲೆಗೆ ಜಾನಪದ ಸಾಹಿತ್ಯದಲ್ಲಿ ತನ್ನದೇ ವಿಶೇಷ ಸ್ಥಾನಮಾನ ಇದ್ದು
ಈ ಮಣ್ಣಿನಲ್ಲಿನೆಡೆದಾಡಿದ ಮಹದೇಶ್ವರ,ಸಿದ್ದಪ್ಪಾಜಿ ಕಟ್ಟಿದ ಕಾವ್ಯಗಳು ಜಗತ್ತಿನೆಲ್ಲೆಡರ ಪ್ರಸಿದ್ಧಿ ಪಡೆದಿವೆ ಎಂದರು.
ಅಲ್ಲದೆ ರಾಜ್ಯದಲ್ಲಿ ಅತ್ಯುನ್ನತ ಹುದ್ದೆಗಳಲ್ಲಿರುವ ಅಧಿಕಾರಿಗಳ ಮಕ್ಕಳು ಇಂದು ಕನ್ನಡ ಭಾಷಾ ಪರೀಕ್ಷೆಯಲ್ಲಿ ಅನ್ನುತ್ತೀರ್ಣರಾಗುತ್ತಿರುವುದು ವಿಷಾದೀನೀಯ ಎಂದರು
ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸಿ.ಶೈಲೇಶ್ ಕುಮಾರ್, ಸಾಹಿತಿ ಮತ್ತು ಸಂಸ್ಕೃತಿ ಚಿಂತಕ ಟಿ. ಸತೀಶ್ ಜವರೇಗೌಡ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲ್ಲೂಕು ಘಟಕದಅಧ್ಯಕ್ಷ ಕಂದವೇಲು,ಕನ್ನಡ ಸಾಹಿತ್ಯ ಪರಿಷತ್ ಹನೂರು ಘಟಕದ ಕಾರ್ಯದರ್ಶಿ ಅಭಿಲಾಷ್,ಉಪನ್ಯಾಸಕರಾದ ಡಿ.ಪಿ ಚಿಕ್ಕಣ್ಣ,ಕೃಪಾ, ರವಿಶಂಕರ್ ಇದ್ದರು.
ವರದಿ-ಉಸ್ಮಾನ್ ಖಾನ್.