ಕರ್ನಾಟಕ ರಾಜ್ಯ ಸಂಯುಕ್ತಾ ಅಂಗನವಾಡಿ ನೌಕರರ ಸಂಘ ವತಿಯಿಂದ ಸೇವಾ ಭದ್ರತೆ ಮಾಸಿಕ ವೇತನ ನಿವೃತ್ತಿ ಪಿಂಚಣಿ ಸೌಲಭ್ಯಗಳನ್ನು ಸರ್ಕಾರದಿಂದ ಸಿಗುತ್ತಿಲ್ಲ ಎಂದು
ಕಲ್ಬುರ್ಗಿ ಜಿಲ್ಲೆ ಯ ಸೇಡಂ ತಾಲೂಕಿನ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಸುಧೀರ್ಘ ಕಾಲದಿಂದಲೂ ಸರ್ಕಾರದ ಅಡಿಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದ್ದಾರೆ ಆದರೂ ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸದೆ ಇರುವುದರಿಂದ ಅವರಿಗೆ ಸೇವಾ ಭದ್ರತೆ ಸೂಕ್ತ ಮಾಸಿಕ ವೇತನ ಪಿಂಚಣಿ ಇನ್ನಿತರ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ 46 ವರ್ಷಗಳಿಂದಲೂ ಅವರನ್ನು ಸ್ಕೀಮ್ ವರ್ಕರ್ ಆಗಿ ಪರಿಗಣಿಸುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಇಂದಿನ ಬೆಲೆ ಏರಿಕೆ ಸನ್ನಿವೇಶದಲ್ಲಿ ಅವರಿಗೆ ಕೊಡುವ ಪುಡಿಗಾಸಿನ ಸಂಬಳ ಯಾವುದಕ್ಕೂ ಸಾಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಕಡಿಮೆ ಸಂಬಳ ಹೆಚ್ಚು ದುಡಿಮೆ ಎನ್ನುವುದು ಇವರ ಪರಿಸ್ಥಿತಿಯಾಗಿದೆ ಈ ಮೊದಲು ಇವರಿಗೆ ಯೋಜನೆಯಾದ ಕೆಲಸಗಳನ್ನು ಬಿಟ್ಟು ಚುನಾವಣೆಗೆ ಸಂಬಂಧಿಸಿದ ಕೆಲಸಗಳು ಗ್ರಾಮ ಪಂಚಾಯಿತಿ ಯೋಜನೆಗಳು ಜಿಲ್ಲಾಧಿಕಾರಿ ಹಾಗೂ ಶಾಸಕರ ಯೋಜನೆ ಕೆಲಸ ಕಾರ್ಯಗಳನ್ನು ಸಹ ಅಂಗನವಾಡಿ ನೌಕರರಿಂದಲೇ ಮಾಡಿಸಲಾಗುತ್ತಿದೆ ಇದರಿಂದಾಗಿ ಇದರೊಂದಿಗೆ ಹೊಸದಾಗಿ ಮೊಬೈಲ್ ಆಧಾರಿತ ಕೆಲಸಗಳು ಸೇರಿಕೊಂಡು ಕಾರ್ಯಕರ್ತೆಯರನ್ನು ಒತ್ತಡಕ್ಕೆ ಸಿಲುಕಿಸಿದೆ ಇನ್ನೊಂದೆಡೆ ಕೇಂದ್ರಗಳಲ್ಲಿ ನಿಗದಿತವಾಗಿ ಮೊಟ್ಟೆ ಸಿಲಿಂಡರ್ ಪೂರೈಕೆ ಸಿಗುತ್ತಿಲ್ಲ ಬಾಡಿಗೆ ವಿದ್ಯುತ್ ಶಕ್ತಿ ಕಟ್ಟಡ ದುರಸ್ತಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಕೊರತೆ ಇಂತಹ ಮೊದಲಾದ ಸಮಸ್ಯೆಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಎದುರಿಸುತ್ತಿದ್ದು ಇವುಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಅದರಿಂದ ಮಾನ್ಯ ಮುಖ್ಯಮಂತ್ರಿಗಳು ಈ ಅಧಿವೇಶನದಲ್ಲಿ ಅಂಗನವಾಡಿ ನೌಕರರ ಸಮಸ್ಯೆಗಳ ಬಗ್ಗೆ ವಿವರವಾಗಿ ಚರ್ಚೆ ಮಾಡಿ ಅವರನ್ನು ಸಿ ಮತ್ತು ಡಿ ದರ್ಜೆಯ ನೌಕರರೆಂದು ಪರಿಗಣಿಸಬೇಕೆಂದು ಕೋರುತ್ತೇವೆ ಇಲ್ಲವೇ ಈ ದರ್ಜೆಯ ಸಮಾನವಾಗಿ ಕಾರ್ಯಕರ್ತರಿಗೆ 35 ಜನರು
950 ಮತ್ತು ಸಹಾಯಕಿಯರಿಗೆ ಕೆಲಸವನ್ನು ನಿರ್ಮಿಸುತ್ತಿದ್ದರು 31,000 ಮಾಸಿಕ ಗೌರವವನ್ನು ಹೆಚ್ಚಿಸಬೇಕು ಹಾಗೂ ಶಾಸನಬದ್ಧ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕೆಂದು ಒತ್ತಾಯಿಸಿದರು ಜೊತೆಗೆ ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸೂಕ್ತ ಸೌಲಭ್ಯಗಳನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇವೆ ಈ ಹಿನ್ನೆಲೆಯಲ್ಲಿ ಸಂಯೋಜನೆಗೊಂಡ ಕರ್ನಾಟಕ ರಾಜ್ಯ ಸಯುಕ್ತ ಅಂಗನವಾಡಿ ನೌಕರರ ಸಂಘಟನೆಯ ದಿನಾಂಕ 27 12 2002 ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು
ವರದಿ-ಮಾರುತಿ ಸೇಡಂ