ಬಾಕಿ ಕಾಮಗಾರಿಗಳ ಪಟ್ಟಿ ಕೊಡಿ:ಜಿಪಂ ಯೋಜನಾ ನಿರ್ದೇಶಕರಾದ ಕೃಷ್ಞಮೂರ್ತಿ ಸೂಚನೆ
ಕೊಪ್ಪಳ/ಗಂಗಾವತಿ :ಕನಕಗಿರಿ,ಕಾರಟಗಿ ಹಾಗೂ ಗಂಗಾವತಿ ತಾಲೂಕಿನ ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿಗೆ ಇನ್ನೂ ಬಾಕಿ ಇರುವ ಕಾಮಗಾರಿಗಳ ಪಟ್ಟಿ ನೀಡಿದರೆ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಪಂ ಯೋಜನಾ ನಿರ್ದೇಶಕರಾದ ಕೃಷ್ಞಮೂರ್ತಿ ಟಿ. ಅವರು ಹೇಳಿದರು.
ನಗರದ ಎಪಿಎಂಸಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಮೂರು ತಾಲೂಕುಗಳ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ಸರಕಾರಿ ಶಾಲೆಗಳಲ್ಲಿ ನರೇಗಾದಡಿ ಸೌಲಭ್ಯ ಕಲ್ಪಿಸಲಾಗಿದೆ.
ಶಿಕ್ಷಣ ಇಲಾಖೆ ಅಧಿಕಾರಿಗಳು,ಮುಖ್ಯ ಶಿಕ್ಷಕರು ಹಾಗೂ ಗ್ರಾಪಂ ಪಿಡಿಓಗಳು ಸಂಯೋಜಿಸಿಕೊಂಡು ಬಾಕಿ ಕಾಮಗಾರಿಗಳ ಪಟ್ಟಿ ನೀಡಬೇಕು. ಎಲ್ಲಾ ಅಂಗನವಾಡಿಗಳಿಗೆ ಶೌಚಾಲಯಗಳನ್ನು ನಿರ್ಮಿಸಬೇಕು ಎಂದರು.
ಕೋವಿಡ್ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಪಂ ಯೋಜನಾ ನಿರ್ದೇಶಕರು ಸೂಚಿಸಿದರು.
ಶೈಕ್ಷಣಿಕ ಸುಧಾರಣೆ ಕ್ರಮಗಳ ಕುರಿತು ಬಿಇಓ ಸೋಮಶೇಖರಗೌಡ ಅವರು ಮಾಹಿತಿ ನೀಡಿದರು.
ಹೊಸ ರೈತರನ್ನು ನರೇಗಾಕ್ಕೆ ಕರೆ ತನ್ನಿ
ನರೇಗಾ ಎಂದರೆ ಕರೆ,ನಾಲಾ ಹೂಳೆತ್ತುವುದು ಮಾತ್ರ ಅಲ್ಲ ಪ್ರತಿ ವರ್ಷ ತೋಟಗಾರಿಕೆಯತ್ತ ಹೊಸ ರೈತರನ್ನು ನರೇಗಾ ಯೋಜನೆಯತ್ತ ಕರೆತರಬೇಕು. ಇದರಿಂದ ರೈತರು ಆರ್ಥಿಕವಾಗಿ ಸದೃಢರಾಗಲು ಸಹಕಾರಿ ಆಗುತ್ತದೆ.ಗುರಿ ನೀಡಿರುವ ಪೌಷ್ಟಿಕ ಕೈತೋಟ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸುವಂತೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಜಿಪಂ ಯೋಜನಾ ನಿರ್ದೇಶಕರಾದ ಕೃಷ್ಞಮೂರ್ತಿ ಟಿ. ಹಾಗೂ ಜಿಪಂ ಮುಖ್ಯಲೆಕ್ಕಾಧಿಕಾರಿಗಳಾದ ಅಮೀನ್ ಸಾಬ್ ಅತ್ತಾರ್ ಅವರು ಸೂಚಿಸಿದರು.
ಇದೇ ವೇಳೆ ಕೃಷಿ ಇಲಾಖೆಯ ಸಿರಿ ಧಾನ್ಯದ ಪೋಸ್ಟರ್ ಬಿಡುಗಡೆ ಮಾಡಲಾಯಿತು.
ಗಂಗಾವತಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಮಹಾಂತಗೌಡ ಪಾಟೀಲ್, ಕಾರಟಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ನರಸಪ್ಪ ಎನ್,ಕನಕಗಿರಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಚಂದ್ರಶೇಖರ ಬಿ.ಕಂದಕೂರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದ ಸಂತೋಷ ಪಟ್ಟದಕಲ್ಲು, ಯೋಜನಾ ಅಧಿಕಾರಿಗಳು,
ಮೂರು ತಾಲೂಕಿನ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು
ನರೇಗಾ, ಎಸ್ ಬಿಎಂ, ವಸತಿ ಯೋಜನೆ, ಜಲ ಸಂಜೀವಿನಿ, ಎಲ್ ಡಬ್ಲ್ಯುಎಂ (ಬೂದು ನೀರು ನಿರ್ವಹಣಾ ಘಟಕ) ಯೋಜನೆಗಳ ಕುರಿತು ಪ್ರಗತಿ ಪರಿಶೀಲನೆ ಸಭೆ ನಡೆಯಿತು. ಯೋಜನಾ ಅಧಿಕಾರಿಗಳು, ಸಹಾಯಕ ಲೆಕ್ಕಾಧಿಕಾರಿಗಳು, ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಸಿಬ್ಬಂದಿಗಳು, ವಿಷಯ ನಿರ್ವಾಹಕರು ಹಾಜರಿದ್ದರು.