ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಕಲಿಕಾ ಹಬ್ಬದಿಂದ ಶಿಕ್ಷಣದಲ್ಲಿ ನವ್ಯತೆ:ಗ್ರಾ. ಪಂ.ಅಧ್ಯಕ್ಷ ನಿಂಗಪ್ಪ ತೇರದಾಳ


ಜಮಖಂಡಿ:ಎಲ್ಲೆಲ್ಲೂ ಹಬ್ಬದ ವಾತಾವರಣ, ಅಕ್ಷರಬಂಡಿಗಳ ಮೆರವಣಿಗೆ,ಡೊಳ್ಳುಕುಣಿತ, ಪೂರ್ಣಕುಂಭ ಅಕ್ಷರ ಸ್ವಾಗತ, ಅಕ್ಷರರಂಗೋಲಿಯೊಂದಿಗೆ ಸಮೀಪದ ಕುಂಬಾರಹಳ್ಳ ಪ್ರೌಢ ಶಾಲೆಯಲ್ಲಿ ಕುಂಚನೂರು ವಲಯಮಟ್ಟದ ಕಲಿಕಾ ಮೇಳಕ್ಕೆ ಚಾಲನೆ ನೀಡಲಾಯಿತು.
ಕಲಿಕೋಪಕರಣದ ಮೂಲಕ ಕಲಿಕಾ ಮೇಳವನ್ನು ಉದ್ಘಾಟಿಸಿದ ಗ್ರಾಮ ಪಂಚಾಯತ ಅಧ್ಯಕ್ಷ ನಿಂಗಪ್ಪ ತೇರದಾಳ ಇಂಥಹ ಮೇಳಗಳಿಂದ ಮಕ್ಕಳ ಪ್ರತಿಭೆಗೆ ಹೆಚ್ಚೆಚ್ಚು ಅವಕಾಶ ಸಿಕ್ಕಂತಾಗುತ್ತದೆ ಶಿಕ್ಷಣದಲ್ಲಿ ಹೊಸತನ ಮೂಡುತ್ತದೆ ಎಂದರು.
ಅತಿಥಿಗಳಾದ ಬಸವರಾಜ ಮರನೂರ ಮಾತನಾಡಿ ಇಂಥಹ ಹಬ್ಬಗಳು ಊರಿನಲ್ಲಿ ನಡೆದು ಹಬ್ಬದ ವಾತಾವರಣ ಉಂಟಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯ ಶಿಕ್ಷಕ ನಾರಾಯಣ ಶಾಸ್ತ್ರಿ ಕೊರೊನಾದಿಂದ ಉಂಟಾದ ಕಲಿಕೆಯ ಕೊರತೆಯನ್ನು ಸರಿದೂಗಿಸಲು ಕಲಿಕಾಚೇತರಿಕೆ ಬಂದಿತು,ಅದರ ಮುಂದುವರಿದ ಭಾಗವಾಗಿ ಕಲಿಕಾ ಹಬ್ಬ ನಡೆಯುತ್ತಿದೆ ಇದು ಚಟುವಟಿಕೆಯ ಮೂಲಕ ಮಕ್ಕಳಲ್ಲಿ ಹೊಸ ಹುಮ್ಮಸ್ಸನ್ನು ತುಂಬುತ್ತದೆ ಎಂದರು.
ಶಿಕ್ಷಣ ಸಂಯೋಜಕ ಸಂತೋಷ ತಳಕೇರಿ ಮಾತನಾಡಿ ಕಲಿಕಾ ಹಬ್ಬವು ಶಿಕ್ಷಣದಲ್ಲಿ ಹೊಸ ಮೈಲುಗಲ್ಲಾಗಿದೆ, ಕುಂಬಾರಹಳ್ಳ ಗ್ರಾಮದಲ್ಲಿ ಶಿಕ್ಷಣವು ದಿನದಿಂದ ದಿನಕ್ಕೆ ಹೆಚ್ಚಿನ ಮಹತ್ವ ಪಡೆಯುತ್ತಿದ್ದೆ,ಇಲ್ಲಿನ ಶಿಕ್ಷಕರು ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದು ಒಳ್ಳೆಯ ಕಲಿಕಾ ವಾತಾವರಣವಿದೆ ಎಂದು ಹೇಳಿದರು.
ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಿವಪ್ರಸಾದ ಯಾದವಾಡ ಮಾತನಾಡಿ ಕುಂಬಾರಹಳ್ಳ ಕುಂಬ ಮತ್ತು ಹಾರದಿಂದ ಕಂಗೊಳಿಸುತ್ತಿದೆ ಕಲಿಕಾ ಹಬ್ಬ ಮಕ್ಕಳಲ್ಲಿ ಹೊಸ ಚೈತನ್ಯ ತುಂಬಲಿದೆ ಎಂದರು.
ಸಹಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಕಲ್ಲೊಳ್ಳಿ,ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಜಿ.ಕಡಕೋಳ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಧರೆಪ್ಪ ಮಂಟೂರ,ರಾಜು ಮಾಳಿ,ಮಲ್ಲೇಶ ಬಂಡಿವಡ್ಡರ, ಸದಾಶಿವ ಮರನೂರ, ಮಹದೇವ ಗೌರನ್ನವರ, ಮಹದೇವ ಗುಗ್ಗರಿ, ಅಶೋಕ ಮರನೂರ, ಪಿಕೆಪಿಎಸ್ ಅಧ್ಯಕ್ಷ ಕಾಸಪ್ಪ ಮರನೂರ, ನಿರ್ದೇಶಕ ದುಂಡಪ್ಪ ಬಾಡಿಗಿ. ಗ್ರಾಮದ ಹಿರಿಯರಾದ ರಮೇಶ ಮರನೂರ, ಸದಾಶಿವ ಮಾಳಿ, ಸಂಪನ್ಮೂಲ ವ್ಯಕ್ತಿಗಳಾದ ಶಿವಶಂಕರ್ ಅಂಗಡಿ, ಸವಿತಾ ಬೆನಕಟ್ಟಿ, ಎಸ್ ವೈ ಮಡಿವಾಳರ, ಸಂಜೀವ ಜಂಬೂರೆ, ಬಾಹುಬಲಿ ಮುತ್ತೂರ, ಆಶಿಪಾ ಭಾನು ಮೋಮಿನ, ಸೋಮನಿಂಗ ಹಲಗಲಿ, ಶ್ರೀಶೈಲ್ ಗಸ್ತಿ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ಸಂಗನಬಸವ ಉಟಗಿ ಎಲ್ಲರನ್ನೂ ಸ್ವಾಗತಿಸಿದರು. ಸಮೂಹ ಸಂಪನ್ಮೂಲ ವ್ಯಕ್ತಿ ನಾಗೇಶ ಮಾಲಗಾರ ಕಾರ್ಯಕ್ರಮ ನಿರೂಪಿಸಿದರು.ಶಿಕ್ಷಕಿ ರೇಖಾ ಬಿರಾದಾರ ವಂದಿಸಿದರು.
ಕಾರ್ಯಕ್ರಮ ಉದ್ದೇಶಿಸಿ ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಬಸವರಾಜ್ ಮರನೂರ, ಮುಖ್ಯೋಪಾಧ್ಯಾಯ ನಾರಾಯಣ ಶಾಸ್ತ್ರಿ ಮಾತನಾಡಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

One Response

Leave a Reply

Your email address will not be published. Required fields are marked *

ಇದನ್ನೂ ಓದಿ