ಉತ್ತರ ಕನ್ನಡ ಜಿಲ್ಲೆ:ಮುಂಡಗೋಡ ಪಟ್ಟಣ ಪಂಚಾಯ್ತಿಯ ಸಾಮಾನ್ಯ ಸಭೆ ಇಂದು ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ನಡೆಯಿತು.
ಹಾಲಿ ವರ್ಷದಲ್ಲಿ ಕೈಗೊಂಡ ಕಾಮಗಾರಿಗಳು, ಬಿಡುಗಡೆಯಾದ ಅನುದಾನ ಮತ್ತು ನಗರದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಎಲ್ಲ ಸದಸ್ಯರು ಚರ್ಚಿಸಿದರು ಪ್ರಮುಖವಾಗಿ ವಾರದ ಸಂತೆಯ ಜಾಗದ ಬಾಡಿಗೆ ವಸೂಲಿ ಮಾಡುವ ಟೆಂಡರ್ ಕುರಿತು ಸದಸ್ಯರು ಹಾಗೂ ಅಧಿಕಾರಿಗಳು ಚರ್ಚಿಸಿದರು.
ಕೆಲ ಠರಾವುಗಳಿಗೆ ಎಲ್ಲ ಸದಸ್ಯರು ಒಕ್ಕೊರಲಿನಿಂದ ಒಪ್ಪಿಗೆ ನೀಡಿದರು.
ಹಾಗೂ ಪಟ್ಟಣ ಪಂಚಾಯ್ತಿ ಕೆಲ ಸದಸ್ಯರ ವಾರ್ಡ್ ಗಳಲ್ಲಿ ಸ್ವಚ್ಛತಾ ಕಾರ್ಯ ಅಸಮರ್ಪಕವಾಗಿ ನಡೆಯುತ್ತಿದೆ ಎಂದು ಮುಖ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು,ಇದನ್ನು ಕೆಲ ದಿನಗಳಲ್ಲಿ ಸರಿಪಡಿಸುವುದಾಗಿ ಮುಖ್ಯಾಧಿಕಾರಿಗಳು ಆಶ್ವಾಸನೆ ನೀಡಿ ಸದಸ್ಯರನ್ನು ಸಮಾಧಾನ ಪಡಿಸಿದರು.