ಬೆಳಗಾವಿ:ಮುಂಬರುವ ವಿಧಾನಸಭಾ ಸಬಾ ಚುನಾವಣೆಯಲ್ಲಿ ಕಿತ್ತೂರು ಕ್ಷೇತ್ರದಲ್ಲಿ ಸ್ಪಷ್ಟವಾದ ಚಿತ್ರಣ ಈ ಬಾರಿ ಒಂದು ಹಂತಕ್ಕೆ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡ್ರ ಅವರಿಗೆ ವರದಾನವಾಗಿತ್ತು ಕಳೆದ ಬಾರಿ ಚುನಾವಣೆಯಲ್ಲಿ.ಈ ಸಲ ಕೈ ಪಾಳೆಯದಲ್ಲಿ ಹೊಂದಾಣಿಕೆಯ ರಾಜಕಾರಣ ಆರಂಭವಾಗಿದೆ ನೇಗಿನಹಾಳದ ಧಣಿ ಶ್ರೀ ದಾನಪ್ಪ ಗೌಡ ಇನಾಂದಾರ್ ಕಳೆದ ಸಲ ಅಳಿಯ ಶ್ರೀ ಬಾಬಾಸಾಹೇಬ ಪಾಟೀಲರ ಮಧ್ಯೆ ಹೊಂದಾಣಿಯ ಕೊರತೆ ಗೊಂದಲದಿಂದಾಗಿ ಚುನಾವಣೆಯಲ್ಲಿ ಗೌಡರಿಗೆ ವರದಾನವಾಗಿತ್ತು ಆದರೆ ಈ ಬಾರಿ ಆ ತಪ್ಪು ಮರುಕಳಿಸದಂತೆ ಧಣಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ ಸಂಘಟನೆ ಜೋರಾಗಿದೆ ಸದ್ದಿಲ್ಲದೆ ಗೆಲುವಿಗೆ ದಾರಿ ಗಟ್ಟಿಗೊಳಿಸುತ್ತಿದ್ಧಾರೆ ಕ್ಷೇತ್ರದಲ್ಲಿ ಮೇಲ್ನೋಟಕ್ಕೆ ಭಾರತೀಯ ಜನತಾ ಪಕ್ಷ ಗೆಲುವು ನಿಶ್ಚಿತ ಎಂದೆನಿಸಿದರೂ ಒಳಗಿಂದೊಳಗೆ ಧಣಿಯ ಪ್ರಾಬಲ್ಯ ಮತ್ತೆ ಗರಿಗೆದುರುವ ಲಕ್ಷಣಗಳು ದಟ್ಟವಾಗಿವೆ ಕಾರಣ ಈಗಿನ ಶಾಸಕರು ಹಿರಿಯರನ್ನು ಅಲಕ್ಷಿಸಿ ಯುವ ಸಮೂಹ ಹಿಂಬಾಲಿಸಿದ್ದಾರೆ ಎಂಬ ಆರೋಪ ಗುಸು ಗುಸು ಆರಂಭವಾಗಿವೆ ಜೊತೆಗೆ ಕಳೆದ ವಿಧಾನಪರಿಷತ್ತಿನ ಚುನಾವಣಾ ಪ್ರಚಾರದಲ್ಲಿ ಧಣಿಗಳ ಆಗಮನ ಮತ್ತಷ್ಟು ಕ್ಷೇತ್ರದಲ್ಲಿ ಅವರ ಅಭಿಮಾನಿಗಳಿಗೆ ಸಂತಸ ನೀಡಿದೆ ಹಳೆಯ ಹುಲಿ ಮತ್ತೆ ಘರ್ಜಿಸಿದರೆ ಗೌಡರಿಗೆ ಗೆಲುವು ಕಠಿಣ ಎಂಬ ಲೆಕ್ಕಾಚಾರ ಆರಂಭವಾಗಿದೆ ಇದಕ್ಕೆ ಪುಷ್ಟಿ ನೀಡುವಂತೆ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿಯಲ್ಲಿ ಇನಾಂದಾರ್ ಹೆಸರು ಉಲ್ಲೆಖಿಸಿರುವುದು ಪಂಜರದಿಂದ ಹೊರಗೆ ಬಂದ ಪಕ್ಷಿಗೆ ಸ್ವಾತಂತ್ರ್ಯ ಸಿಕ್ಕಂತಾಗಿದೆ ಆದರೆ ಬಾಬಾಸಾಹೇಬರ ನಡೆಯ ಮೇಲೆ ಧಣಿಗಳ ಫಲಿತಾಂಶ ಅವಲಂಬಿತವಾಗಿದೆ ಅಳಿಯ ಮಾವ ಒಂದಾದರೆ ಭಾಜಪ ಜಪ ಮಾಡುವಂತಾಗುತ್ತದೆ ಸಧ್ಯದ ಮಟ್ಟಿಗೆ ಕ್ಷೇತ್ರದಲ್ಲಿ ಗೆಲುವು ಡೋಲಾಯಮಾನವಾಗಿದೆ ಅಭ್ಯರ್ಥಿಗಳ ಅದರಲ್ಲೂ ಕಾಂಗ್ರೆಸ್ ನ ಅಂತಿಮ ಅಭ್ಯರ್ಥಿ ಪಟ್ಟಿ ಬಿಡುಗಡೆಯಾದ ಮೇಲೆ ಫಲಿತಾಂಶದ ಸ್ಪಷ್ಟವಾದ ಚಿತ್ರಣ ಸಿಗುವುದು ಎಂಬುವುದು ಕ್ಷೇತ್ರದಲ್ಲಿನ ಜನರ ಲೆಕ್ಕಾಚಾರ.
ವರದಿ:ದಿನೇಶಕುಮಾರ ಅಜಮೇರಾ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.