ಪಾವಂಜೆ, ಹಳೆಯಂಗಡಿ, ಮಂಗಳೂರು, ಜನವರಿ 20 : ಬ್ರಹ್ಮಕಲಶದ ಪೂರ್ವಭಾವಿ ಕಾರ್ಯಕ್ರಮಗಳ 2ನೇ ಶುಭ ದಿನ ಬೆಳಗ್ಗೆ 7:30 ರಿಂದ ರುತ್ವಿಗ್ವರಣಂ, ಚತುರ್ವೇದ, ಶ್ರೀಮದ್ ಭಾಗವತ, ಮೃತ್ಯುಂಜಯ ಯಾಗ, ನವಕ ಪ್ರಧಾನ ಯಾಗ, ಕಲಶಸ್ನಪನ, ಮಹಾಪೂಜೆ, ಗೋ ಪೂಜೆ, ಸುವಾಸಿನೀ ಆರಾಧನೆ ಜರಗಿತು, ಮದ್ಯಾಹ್ನ 2ಃ30 ರಿಂದ ಶ್ರೀ ಪ್ರಕಾಶ್ ಕಾರ್ಕಳರವರ ರಾಗ್ ಲಹರಿ ತಂಡದವರಿಂದ ಸ್ಯಾಕ್ಸೋಫೋನ್ ವಾದ್ಯ ವೈವಿಧ್ಯ “ನಾಧಾಭಿಷೇಕಂ” ಜರುಗಿತು. ಸಂಜೆ 4ಃ30 ರಿಂದ ರಾಕ್ಷೋಘ್ನಯಾಗ, ವಾಸ್ತು ಪೂಜೆ, ವಾಸ್ತು ಯಾಗ,ವಾಸ್ತುಬಲಿ, ದಿಶಾ ಹೋಮ, ಕೂಪಶಾಂತಿ, ದಿಕ್ಪಾಲಕ ಬಲಿ ಜರುಗಿತು. ಸಂಜೆ 6ಃ00 ಗಂಟೆ ಯಿಂದ ಶ್ರೀ ವಿಷ್ಣು ಭಜನಾ ಮಂಡಳಿ ಯೆರ್ಮಾಳ್ – ಬಡಾಯಿವರಿಂದ ಭಜನಾ ಸಂಕೀರ್ತನೆ ಜರುಗಿತು. ರಾತ್ರಿ 8ಃ00 ಗಂಟೆಯಿಂದ ತುಡರ್ ಕಲಾವೇದಿಕೆ ಪಾವಂಜೆ ಯಿವರ ತಂಡದಿಂದ ” ಸತ್ಯೊದ ತುಡರ್” ಯೆಂಬ ತುಳು ಜಾನಪದ ನಾಟಕ ಜರುಗಿತು.
ವರದಿ : ಚಂದ್ರಶೇಖರ ಹೆಬ್ಬಾರ್ ಕೊಲ್ಯ.
