ಯಾದಗಿರಿ:ಸುರಪುರ ತಾಲೂಕಿನ ಚಿಗರಿಹಾಳ ಗ್ರಾಮಸ್ಥರು ೨೯/೧೧/೨೦೨೨ ರಂದು ಪತ್ರಿಕೆಯಲ್ಲಿ ಮತ್ತು ಮಾಧ್ಯಮ ವರದಿ ಮಾಡಿದರು ಲಜ್ಜೆಗೇಡಿ ಅಧಿಕಾರಿಗಳು ಚಿಗರಿಹಾಳ ಗ್ರಾಮಸ್ಥರು ಮನವಿಗೆ ಸ್ಪಂದಿಸುತ್ತಿಲ್ಲ ಇಂತಹ ಅಧಿಕಾರಿಗಳಿಗೆ ಕೂಡಲೇ ಅಮಾನತು ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.
ಚಿಗರಿಹಾಳ ಗ್ರಾಮಸ್ಥರು ಆತಂಕದಲ್ಲಿ ಜೀವನ ನಡುಸುತ್ತಿದ್ದರು ಇತ್ತ ಕಡೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಮನ ಕರಗದ ಕೆಇಬಿ ಅಧಿಕಾರಿಗಳಿಗೆ ನಾಚಿಕೆ ಯಾಗಬೇಕು. ಚಿಗರಿಹಾಳ ಗ್ರಾಮಕ್ಕೆ ಕಂಬಗಳು ಹಾಕಿದೆ ಐದು ವರ್ಷಗಳಿಂದ ವಿದ್ಯುತ್ ಬಿಲ್ ಪಡೆಯುತ್ತಿದ್ದು. ಈ ಕೆಇಬಿ ಅಧಿಕಾರಿಗಳಿಗೆ ಯಾವ ನೈತಿಕತೆ ಇದೆ ಸರ್ ನಿವೇ ಹೇಳಿ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಜಿಲ್ಲಾ ಕೆಇಬಿ ಅಧಿಕಾರಿಗಳಾದ ರಾಘವೇಂದ್ರ ಸರ್ ಅವರಿಗೇ ೫/೧೨/ ೨೦೨೨ ರಂದು ಅವರಿಗೂ ಕೂಡ ಮನವಿ ಮಾಡಿದರು ಕೂಡ ಸ್ಪಂದಿಸುತ್ತಿಲ್ಲ. ಇಂತಹಾ ಅಧಿಕಾರಿಗಳಿಗೆ ಕೂಡಲೇ ಅಮಾನತು ಮಾಡಬೇಕು. ಮುಂದಿನ ದಿನಗಳಲ್ಲಿ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸದಿದ್ದರೆ ಇಡೀ ಚಿಗರಿಹಾಳ ಗ್ರಾಮಸ್ಥರು ಕೆಇಬಿ ಆಫೀಸಿಗೆ ಮುತ್ತಿಗೆ ಹಾಕುತ್ತವೆ ಎಂದು ಹೇಳಿದರು.
ಗ್ರಾಮದ ಮುಖಂಡರಾದ ಬಸವರಾಜ ಮಾಪಳ್ಳಿ , ಗೋವಿಂದಪ್ಪ, ಪರಮಣ್ಣ, ಮೈನುದೀನ್, ನಿಂಗಪ್ಪ ಕವಲಿ , ಮಾದೇವಿ, ಹಣಮಂತ್ರಾಯ, ಸಿದ್ದರಾಮ, ಪೀಡಪ್ಪ, ತಿಪ್ಪವ್ವ , ಮಹಿಬೂಬಿ, ಚಾದಂಬಿ, ಹಣಮಂತಿ, ನಿಂಗಮ್ಮ, ಚಿಗರಿಹಾಳ ಗ್ರಾಮಸ್ಥರು ಭಾಗವಹಿಸಿದ್ದರು.
ವರದಿ:ರಾಜಶೇಖರ ಮಾಲಿ ಪಾಟೀಲ್ ಶಹಾಪುರ