ಲಕ್ಷ್ಮೇಶ್ವರ ಪಟ್ಟಣದಲ್ಲಿ ಕಂದಾಯ ಇಲಾಖೆ ಹಾಗೂ ಪುರಸಭೆ ಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು 74 ನೇ ಗಣರಾಜ್ಯೋತ್ಸವದ ಆಚರಣೆಯು ತುಂಬಾ ವಿಜೃಂಭಣೆಯಿಂದ ನೆರೆವೇರಿತು ಕಾರ್ಯಕ್ರಮದಲ್ಲಿ ಪಟ್ಟಣದ ವಿವಿಧ ಶಾಲೆಯ ಮಕ್ಕಳಿಂದ ದೇಶಭಿಮಾನದ ಕೇಚ್ಚು ಮೊಳಗಿಸುವ ಸಾಹಸ, ನೃತ್ಯ, ಸಂಗೀತ, ಅದರಲ್ಲೂ ವಿಶೇಷ ಚೇತನ ಮಕ್ಕಳ ಪಿರಮಿಡ್ದ ರಚಣೆಯು ಮನಸೆಳೆಯಿತು. ತಾಲೂಕ ದಂಡಧಿಕಾರಿಗಳಾದ ಶ್ರೀ ಪರಶುರಾಮ್ ಸತ್ತಿಗೇರಿ ಯವರು ಮಾತನಾಡಿ ನಮ್ಮ ಭವ್ಯ ಭಾರತದ ಸತ್ ಪ್ರಜೆಗಳು ಇವತ್ತಿನ ಕಂಪ್ಯೂಟರ್ ಯುಗದಲ್ಲಿ ಭಾರತ ದೇಶ ಮೂಲವನ್ನು ವೀರ- ದೀರರ ಮಹಾನ್ ವ್ಯಕ್ತಿಗಳ ಜೀವನ ಸಾಧನೆಯನ್ನು ಎಲ್ಲರ ಮನಮುಟ್ಟುವಂತೆ ವೇಷ-ಭೂಷಣದ ಮೂಲಕ, ದೇಶಭಕ್ತಿಯ ಗೀತೆಯ ಮೂಲಕ ನಮ್ಮಲ್ಲಿಯ ಭಾರತೀಯನೆಂಬ ಗರ್ವವನ್ನು ಮತ್ತಷ್ಟು ಹೆಚ್ಚಿಗೆ ಮಾಡಿದಿರಿ.ಇದೆ ಸಮಯದಲ್ಲಿಎಲ್ಲ ಮಕ್ಕಳು ಹಾಗೂ ವಿಷೇಶ ಚೇತನ ಮಕ್ಕಳು ನೀಡಿದ ಪ್ರದರ್ಶನವು ವೈಯಕ್ತಿಕವಾಗಿ ನನಗೆ ತುಂಬಾ ಅರ್ಥಗರ್ಭಿತವಾಗಿತ್ತು ಎಂದು ಹೇಳಿದರು. ಅಲ್ಲದೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ´ಗ್ರಾಮ ಒನ್ ಸೇವಾ ಕೇಂದ್ರ ` ಪ್ರಾರಂಭವಾಗಿ ಇವತ್ತಿಗೆ ಒಂದು ವರ್ಷ ಪೂರೈಸಿದೆ. ಈ ಯೋಜನೆಯು ಯಶಸ್ವಿ ಯಾಗಲು ಕಾರಣರಾದ ಗ್ರಾಮ ಒನ್ ಪ್ರತಿನಿಗಳಿಗೆ ಸನ್ಮಾನ ಕೈಗೊಳ್ಳಲಾಯಿತು. ಜಿಲ್ಲಾಡಳಿತ ಹಾಗೂ ತಾಲೂಕ ಆಡಳಿತದ ಮೂಲಕ ಜಿಲ್ಲಾ ಗ್ರಾಮ ಒನ್ ವ್ಯವಸ್ಥಾಪಕರಾದ ಶ್ರೀ ಪ್ರಶಾಂತ ಚಿಕ್ಕನಾಳ ಹಾಗೂ ಶ್ರೀ ಭೂಷಣ ಸರ್ ಅವರ ಮಾರ್ಗದರ್ಶನದಲ್ಲಿ ಪ್ರಥಮ ಸ್ಥಾನವನ್ನು ಶ್ರೀಮತಿ ಹೇಮಾವತಿ ಅನ್ವರೆ(ಬಾಳೆಹೊಸುರ ), ದ್ವಿತೀಯ ಸ್ಥಾನವನ್ನು ಕುಮಾರ ಚೇತನ ಅತಡ್ಕರ(ಶಿಗ್ಲಿ ), ಮೂರನೇ ಸ್ಥಾನವನ್ನು ಕುಮಾರ ಸದಾಶಿವ ಮುಡೆಮ್ಮನವರ(ರಾಮಗೇರಿ )ಗೆ ನೀಡಲಾಯಿತು.ಕಾರ್ಯಕ್ರಮದಲ್ಲಿ ತಾಲೂಕ ಪಶುವೈದ್ಯಾಧಿಕಾರಿಗಳು, ತಾಲೂಕ ವೈದ್ಯಧಿಕಾರಿಗಳು, ಶಿಕ್ಷಣ ಇಲಾಖೆಯವರು, ಕೃಷಿ ಇಲಾಖೆಯವರು, ಆರಕ್ಷ ಇಲಾಖೆಯವರು ಉಪಸ್ಥಿತರಿದ್ದರು.
ವರದಿ – ಸದಾಶಿವ ಭೀ ಮುಡೆಮ್ಮನವರ
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.